Ramya Divya Spandana: ರಮ್ಯಾ ಸಿಹಿ ಸುದ್ದಿ​ ಕೊಡೋದು ಖಚಿತ; ಅಭಿಮಾನಿಗಳು ಬಯಸುತ್ತಿರೋದು ಏನು?

| Updated By: ಮದನ್​ ಕುಮಾರ್​

Updated on: Aug 30, 2022 | 10:29 AM

Sandalwood Queen Ramya: ರಮ್ಯಾ ಅವರಿಂದ ಇಂಥ ಒಂದು ಅಪ್​ಡೇಟ್​ ತಿಳಿಯಲು ಹಲವು ವರ್ಷಗಳಿಂದ ಫ್ಯಾನ್ಸ್​ ಕಾದಿದ್ದರು. ಈಗ ಆ ಕಾಯುವಿಕೆಗೆ ತೆರೆ ಬೀಳುವ ಕಾಲ ಕೂಡಿಬಂದಂತಿದೆ.

Ramya Divya Spandana: ರಮ್ಯಾ ಸಿಹಿ ಸುದ್ದಿ​ ಕೊಡೋದು ಖಚಿತ; ಅಭಿಮಾನಿಗಳು ಬಯಸುತ್ತಿರೋದು ಏನು?
ರಮ್ಯಾ
Follow us on

ನಟಿ ರಮ್ಯಾ (Ramya Divya Spandana) ಅವರು ಗುಡ್​ ನ್ಯೂಸ್​ ಕೊಡುವುದಾಗಿ ಘೋಷಿಸಿದ್ದಾರೆ. ಇಷ್ಟು ದಿನ ಅಂಕೆ-ಕಂತೆಗಳ ರೂಪದಲ್ಲಿ ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗುವ ಸಮಯ ಬಂದಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಅವರು ಖಚಿತವಾಗಿ ಹೇಳಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ನಾಳೆ (ಆಗಸ್ಟ್​ 31) ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ’ ಎಂದು ರಮ್ಯಾ (Ramya) ಪೋಸ್ಟ್​ ಮಾಡಿದ್ದಾರೆ. ಈ ವಿಚಾರದ ಕುರಿತು ಅಭಿಮಾನಿಗಳ ತಲೆಯಲ್ಲಿ ಹಲವು ಪ್ರಶ್ನೆ ಮೂಡಿದೆ. ರಮ್ಯಾ ಹೊಸ ಸಿನಿಮಾ ಮಡ್ತಾರಾ? ಮದುವೆ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಂಡಿದ್ದಾರಾ? ನಿರ್ಮಾಣ ಸಂಸ್ಥೆ ಶುರು ಮಾಡುತ್ತಾರಾ? ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಬಹುಬೇಡಿಕೆಯ ನಟಿಯಾಗಿ ಆಳ್ವಿಕೆ ಮಾಡಿದವರು ರಮ್ಯಾ. ನಂತರ ಅವರು ರಾಜಕೀಯಕ್ಕೆ ತೆರಳಿದರು. ಆ ಬಳಿಕ ನಟನೆಯಿಂದ ಸಂಪೂರ್ಣ ಬ್ರೇಕ್​ ಪಡೆದುಕೊಂಡರು. ಆದಷ್ಟು ಬೇಗ ಅವರು ಕಮ್​ಬ್ಯಾಕ್​ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅದು ಈಡೇರುವ ಕಾಲ ಈಗ ಕೂಡಿಬಂದಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ರಮ್ಯಾ ನೀಡಲಿರುವ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ
ಕ್ಯೂಟ್ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಟ್ರೀಟ್ ಕೊಟ್ಟ ನಟಿ ರಮ್ಯಾ
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ರಮ್ಯಾ ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ನಂಟು ಕಡಿದುಕೊಂಡಿಲ್ಲ. ಹಲವು ಚಿತ್ರತಂಡಗಳ ಜೊತೆ ಅವರು ಸಂಪರ್ಕ ಹೊಂದಿದ್ದಾರೆ. ಹೊಸ ತಲೆಮಾರಿನ ಪ್ರತಿಭೆಗಳ ಜೊತೆಗೆ ರಮ್ಯಾ ಒಡನಾಟ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರು ‘ಹೊಯ್ಸಳ’ ಚಿತ್ರದ ಶೂಟಿಂಗ್ ಸೆಟ್​ಗೆ ಭೇಟಿ ನೀಡಿದ್ದರು. ರಾಜ್​ ಬಿ. ಶೆಟ್ಟಿ, ರಕ್ಷಿತ್​ ಶೆಟ್ಟಿ, ಅಮೃತಾ ಅಯ್ಯಂಗಾರ್​ ಮುಂತಾದವರಿಗೆ ಅವರು ಪ್ರೋತ್ಸಾಹ ನೀಡುತ್ತಲೇ ಇದ್ದಾರೆ.

ರಮ್ಯಾ ಅವರ ಕಮ್​ಬ್ಯಾಕ್​ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ರಾಜ್​ ಬಿ. ಶೆಟ್ಟಿ ಜೊತೆ ಅವರು ಸಿನಿಮಾ ಮಾಡುತ್ತಾರೆ, ಹೊಂಬಾಳೆ ಫಿಲ್ಮ್ಸ್​ ಜೊತೆ ಕೈ ಜೋಡಿಸುತ್ತಾರೆ, ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸುತ್ತಾರೆ.. ಹೀಗೆ ಹಲವು ಬಗೆಯ ಗಾಸಿಪ್​ಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಆ ಪೈಕಿ ಯಾವುದು ನಿಜವಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಅಭಿಮಾನಿಗಳಿಗೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:18 am, Tue, 30 August 22