ಕ್ಯಾನ್ಸರ್​ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾದ ಹಿರಿಯ ನಟಿ ಶೈಲಶ್ರೀ

TV9kannada Web Team

TV9kannada Web Team | Edited By: Rajesh Duggumane

Updated on: Jan 21, 2023 | 11:05 AM

ಶೈಲಶ್ರೀ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1964ರಲ್ಲಿ. ಅವರ ನಟಿಸಿದ್ದು ಮೊದಲು ಮಲಯಾಳಂನಲ್ಲಿ. ಆ ಬಳಿಕ ತಮಿಳಿನಲ್ಲಿ ಅವರು ನಟಿಸಿದರು.

ಕ್ಯಾನ್ಸರ್​ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾದ ಹಿರಿಯ ನಟಿ ಶೈಲಶ್ರೀ

ಹಿರಿಯ ನಟಿ ಶೈಲಶ್ರೀ ಆರ್​. (Shylashri ) ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನ ಆರ್​.ಆರ್​. ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. 60 ಹಾಗೂ 70ರ ದಶಕದಲ್ಲಿ ಶೈಲಶ್ರೀ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಈಗ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ. ಚಿಕಿತ್ಸೆ ಪಡೆಯಲು ಹಣ ಇಲ್ಲದಂತಾಗಿದೆ.

ಶೈಲಶ್ರೀ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1964ರಲ್ಲಿ. ಅವರ ನಟಿಸಿದ್ದು ಮೊದಲು ಮಲಯಾಳಂನಲ್ಲಿ. ಆ ಬಳಿಕ ತಮಿಳಿನಲ್ಲಿ ಅವರು ನಟಿಸಿದರು. 1966ರಲ್ಲಿ ಖ್ಯಾತ ನಟ ಉದಯ್​ಕುಮಾರ್ ನಟನೆಯ ‘ಸಂಧ್ಯಾ ರಾಗ’ ಸಿನಿಮಾದಲ್ಲಿ ಶೈಲಶ್ರೀ ನಟಿಸಿದರು. ಇದು ಕನ್ನಡದ ಅವರ ಮೊದಲ ಸಿನಿಮಾ. 1967ರಲ್ಲಿ ‘ಬಂಗಾರದ ಹೂವು’ ಚಿತ್ರದಲ್ಲಿ  ರಾಜ್​ಕುಮಾರ್ ಜತೆ ಶೈಲಶ್ರೀ ಬಣ್ಣ ಹಚ್ಚಿದರು.

ತಾಜಾ ಸುದ್ದಿ

ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ಶೈಲಶ್ರೀ ನಟಿಸಿದ್ದಾರೆ. ಹಿಂದಿಯಲ್ಲೂ ಅವರು ಒಂದು ಸಿನಿಮಾ ಮಾಡಿದ್ದಾರೆ. 1978ರಿಂದ ಈಚೆಗೆ ಶೈಲಶ್ರೀ ಬಣ್ಣದ ಲೋಕದಿಂದ ದೂರವೇ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: Kabzaa Update: ಜನವರಿ 24ಕ್ಕೆ ಸಿಗಲಿದೆ ‘ಕಬ್ಜ’ ತಂಡದಿಂದ ದೊಡ್ಡ ಅಪ್​​ಡೇಟ್​; ಅಭಿಮಾನಿಗಳಲ್ಲಿ ಮೂಡಿದೆ ಕೌತುಕ

ಆರ್​.ಎನ್​. ಸುದರ್ಶನ್ ಅವರನ್ನು ಶೈಲಶ್ರೀ ಮದುವೆ ಆಗಿದ್ದರು. ಸುದರ್ಶನ್ ಅವರು 2017ರಲ್ಲಿ ನಿಧನ ಹೊಂದಿದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ ಶೈಲಶ್ರೀ ಅವರಿಗೆ 2019ರಲ್ಲಿ ‘ರಾಜ್ಯೋತ್ಸವ ಅವಾರ್ಡ್​​’ ನೀಡಲಾಯಿತು. ಸದ್ಯ ಶೈಲಶ್ರೀ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರಿಂದ ಚಿಕಿತ್ಸೆ ಪಡೆಯಲು ತೊಂದರೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada