- Kannada News Photo gallery Actor upendra Starrer Kabzaa Movie To make big announcement on January 24
Kabzaa Update: ಜನವರಿ 24ಕ್ಕೆ ಸಿಗಲಿದೆ ‘ಕಬ್ಜ’ ತಂಡದಿಂದ ದೊಡ್ಡ ಅಪ್ಡೇಟ್; ಅಭಿಮಾನಿಗಳಲ್ಲಿ ಮೂಡಿದೆ ಕೌತುಕ
‘ಕಬ್ಜ’ ಟೀಸರ್ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿತ್ತು. ಟೀಸರ್ನಲ್ಲಿರುವ ದೃಶ್ಯಗಳ ಗುಣಮಟ್ಟ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
Updated on: Jan 21, 2023 | 9:56 AM

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ತಂಡ ಟೀಸರ್ ಮೂಲಕ ಸದ್ದು ಮಾಡಿತ್ತು. ಈಗ ತಂಡದಿಂದ ದೊಡ್ಡ ಅಪ್ಡೇಟ್ ಸಿಗುತ್ತಿದೆ. ಜನವರಿ 24ರಂದು ಈ ಬಗ್ಗೆ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

‘ಕಬ್ಜ’ ಟೀಸರ್ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿತ್ತು. ಟೀಸರ್ನಲ್ಲಿರುವ ದೃಶ್ಯಗಳ ಗುಣಮಟ್ಟ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

‘ಕಬ್ಜ’ ತಂಡದಿಂದ ಯಾವ ಅಪ್ಡೇಟ್ ಸಿಗಲಿದೆ ಎಂದು ಫ್ಯಾನ್ಸ್ಗೆ ಕುತೂಹಲ ಮೂಡಿದೆ. ಕೆಲವರು ಟ್ರೇಲರ್ ರಿಲೀಸ್ ದಿನಾಂಕ ಘೋಷಿಸಬಹುದು ಎಂದು ಹೇಳಿದರೆ, ಇನ್ನೂ ಕೆಲವರು ಚಿತ್ರತಂಡ ರಿಲೀಸ್ ದಿನಾಂಕ ಘೋಷಣೆ ಮಾಡಲಿದೆ ಎಂದು ಊಹಿಸಿದ್ದಾರೆ.

‘ಕಬ್ಜ’ ಸಿನಿಮಾಗೆ ಆರ್. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ.

ಈ ವರ್ಷದ ಐಎಂಡಿಬಿ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ಕಬ್ಜ’ ಸಿನಿಮಾ ಸ್ಥಾನ ಪಡೆದುಕೊಂಡಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.




