ಟಿವಿ9 ಜೊತೆ ಮಾತಾಡಿದ ದರ್ಶನ್​​ಗೆ ಬೆದರಿಕೆ ಹಾಕಿದ ಅನಾಮಿಕ, ಹೇಳಿದ್ದೇನು?

ವ್ಯಕ್ತಿಯೊಬ್ಬ ಹಲವು ಆಟೋಗಳನ್ನು ದರ್ಶನ್ ಅವರ ರಾಜರಾಜೇಶ್ವರಿ ನಗರಕ್ಕೆ ಒಂದರ ಹಿಂದೊಂದರಂತೆ ಬುಕ್ ಮಾಡಿದ್ದಾನೆ. ಬಳಿಕ ಆಟೋದವರ ಸಹಾಯದಿಂದ ದರ್ಶನ್ ಮನೆಯ ಸೆಕ್ಯುರಿಟಿ ಬಳಿ ಫೋನಿನ ಮೂಲಕ ಮಾತನಾಡಿದ್ದು, ಧನ್ವೀರ್ ವಿರುದ್ಧ ನೀಡಿರುವ ದೂರು ಹಿಂಪಡೆಯದಿದ್ದರೆ ದರ್ಶನ್ ಕುಟುಂಬದವರನ್ನು, ಮ್ಯಾನೇಜರ್ ಅನ್ನು, ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಅದೇ ವ್ಯಕ್ತಿ ಟಿವಿ9 ಜೊತೆಗೆ ಮಾತನಾಡಿದ್ದು, ಹಲವು ವಿಷಯಗಳನ್ನು ಹೇಳಿದ್ದಾನೆ.

ಟಿವಿ9 ಜೊತೆ ಮಾತಾಡಿದ ದರ್ಶನ್​​ಗೆ ಬೆದರಿಕೆ ಹಾಕಿದ ಅನಾಮಿಕ, ಹೇಳಿದ್ದೇನು?
Dhanveer Darshan

Updated on: Nov 04, 2026 | 8:54 PM

ಮುಖ್ಯಾಂಶಗಳು

  • ದರ್ಶನ್ ಭದ್ರತಾ ಸಿಬ್ಬಂದಿಗೆ ಅನಾಮಿಕನಿಂದ ಬೆದರಿಕೆ
  • ಟಿವಿ9 ಜೊತೆ ಮಾತನಾಡಿದ ಬೆದರಿಕೆ ಹಾಕಿದ ಯುವಕ
  • ಗೊಂದಲದ ಹೇಳಿಕೆಗಳನ್ನು ನೀಡಿದ ಯುವಕ

ದರ್ಶನ್ ಮನೆಯ ಬಳಿ ನವೆಂಬರ್ 1 ರಂದು ಸಿನಿಮೀಯ ರೀತಿಯ ಘಟನೆಯೊಂದು ನಡೆದಿರುವುದು ಇಂದು (ನವೆಂಬರ್ 4) ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಹಲವು ಆಟೋಗಳನ್ನು ದರ್ಶನ್ ಅವರ ರಾಜರಾಜೇಶ್ವರಿ ನಗರಕ್ಕೆ ಒಂದರ ಹಿಂದೊಂದರಂತೆ ಬುಕ್ ಮಾಡಿದ್ದಾನೆ. ಬಳಿಕ ಆಟೋದವರ ಸಹಾಯದಿಂದ ದರ್ಶನ್ ಮನೆಯ ಸೆಕ್ಯುರಿಟಿ ಬಳಿ ಫೋನಿನ ಮೂಲಕ ಮಾತನಾಡಿದ್ದು, ಧನ್ವೀರ್ ವಿರುದ್ಧ ನೀಡಿರುವ ದೂರು ಹಿಂಪಡೆಯದಿದ್ದರೆ ದರ್ಶನ್ ಕುಟುಂಬದವರನ್ನು, ಮ್ಯಾನೇಜರ್ ಅನ್ನು, ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಅದೇ ವ್ಯಕ್ತಿ ಟಿವಿ9 ಜೊತೆಗೆ ಮಾತನಾಡಿದ್ದು, ಹಲವು ವಿಷಯಗಳನ್ನು ಹೇಳಿದ್ದಾನೆ.

ಟಿವಿ9 ಪತ್ರಕರ್ತ ಜಗಿನ್ ಅವರೊಟ್ಟಿಗೆ ಫೋನಿನ ಮೂಲಕ ಮಾತನಾಡಿದ್ದು, ಸಾಕಷ್ಟು ಗೊಂದಲದ ಹೇಳಿಕೆಗಳನ್ನು ಆ ವ್ಯಕ್ತಿ ನೀಡಿದ್ದಾನೆ. ಮೊದಲಿಗೆ ತನ್ನನ್ನು ಮನೋಜ್ ಎಂದು ಪರಿಚಯ ಮಾಡಿಕೊಂಡ ಯುವಕ ಬಳಿಕ ಪದೇ ಪದೇ ಹೆಸರನ್ನು ಬದಲಾಯಿಸಿದ್ದಾನೆ. ವಿನೋದ್ ಎಂದು ಒಮ್ಮೆ ಆ ಬಳಿಕ ವರುಣ್ ಹೀಗೆ ಪದೇ ಪದೇ ಹೆಸರುಗಳನ್ನು ಬದಲಾಯಿಸಿ ಮಾತನಾಡಿದ್ದಾನೆ. ಅಲ್ಲದೆ ಇಡೀ ಫೋನ್ ಸಂಭಾಷಣೆ ವೇಳೆಯಲ್ಲಿ ಹಲವಾರು ಗೊಂದಲದ ಹೇಳಿಕೆಯನ್ನು ಆ ಯುವಕ ನೀಡಿದ್ದಾನೆ.

Loading...

ತಾನೊಬ್ಬ ವಿದ್ಯಾರ್ಥಿ ಆಗಿದ್ದು, ಆಟೋ ಸಹ ಓಡಿಸುತ್ತೀನಿ ಎಂದು ಹೇಳಿಕೊಂಡಿರುವ ಯುವಕ, ಯಲಹಂಕದಲ್ಲಿರುವ ಧನ್ವೀರ್ ಅವರ ಮ್ಯಾನೇಜರ್, ನನಗೆ ದರ್ಶನ್​​ಗೆ ಬೆದರಿಕೆ ಹಾಕುವಂತೆ ಹೇಳಿದ್ದರು ಎಂದಿದ್ದಾನೆ. ಅದೇ ಸಂಭಾಷಣೆಯಲ್ಲಿ ತನಗೆ ಸುದೀಪ್​​ಗೆ ಸಹ ಬೆದರಿಕೆ ಹಾಕುವಂತೆ ಸಹ ಹೇಳಲಾಗಿತ್ತು ಎಂದಿದ್ದಾನೆ. ಅಕ್ಟೋಬರ್ 28ರಂದು ತನ್ನ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಕರೆದುಕೊಂಡು ಹೋಗಿ, ತನಗೆ ಈ ‘ಡೀಲ್’ ಒಪ್ಪಿಸಲಾಗಿತ್ತು ಎಂದಿದ್ದಾನೆ. ತನಗೆ ಹಣದ ಅವಶ್ಯಕತೆ ಇದ್ದಿದ್ದ ಕಾರಣದಿಂದಾಗಿ ತಾನು ಈ ಡೀಲ್ ಒಪ್ಪಿಕೊಂಡಿದ್ದಾಗಿ ಆತ ಹೇಳಿದ್ದಾನೆ.

ಇದನ್ನೂ ಓದಿ:ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಶ್ರೀ ಕರಿಕಲ್ಲಮ್ಮ ದೇವರ ಮೂರ್ತಿ

ತಾನು ಹಾಗೂ ತನ್ನ ಕೆಲವು ಗೆಳೆಯರು ಅಕ್ಟೋಬರ್ 28ಕ್ಕೆ ದರ್ಶನ್ ಮನೆಯ ಬಳಿ ಹೋಗಿದ್ವಿ, ಅದಾದ ಬಳಿಕ ಸುದೀಪ್ ಅವರ ಮನೆಯ ಬಳಿಯೂ ಹೋಗಿದ್ದೆವು ಎಂದು ಆ ಯುವಕ ಫೋನಿನಲ್ಲಿ ಹೇಳಿದ್ದಾನೆ. ಅಲ್ಲದೆ, ಧನ್ವೀರ್ ಮ್ಯಾನೇಜರ್ ಅವರ ಫೋನಿನಿಂದ ಧನ್ವೀರ್ ಜೊತೆಗೂ ಮಾತನಾಡಿದ್ದೀನಿ ಎಂದು ಆ ಯುವಕ ಹೇಳಿದ್ದಾನೆ. ತನಗೆ ಕಾಲೇಜು ಫೀಸು ಕಟ್ಟಲು ಹಣ ಬೇಕಿತ್ತು ಹಾಗಾಗಿ ಹೀಗೆ ಮಾಡಿದ್ದೇನೆ ಎಂದಿದ್ದೇನೆ, ಆದರೆ ಈಗ ಭಯವಾಗುತ್ತಿದೆ ಎಂದಿದ್ದಾನೆ ಯುವಕ.

ಆತನ ಹೇಳಿಕೆಗಳೆಲ್ಲ ಗೊಂದಲಮಯವಾಗಿದ್ದು, ಯಾವುದೇ ಸ್ಪಷ್ಟತೆ ಇಲ್ಲ. ನಿಜವಾಗಿಯೂ ಯಾರಾದರೂ ಆತನ ಹಿಂದೆ ಇದ್ದಾರೆಯೇ ಅಥವಾ ತಾನೇ ಬುದ್ಧಿಗೇಡಿ ಕೃತ್ಯ ಮಾಡಿದ್ದಾನೆಯೇ ಎಂಬುದು ಮುಂದೆ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us