ದರ್ಶನ್ ಮನೆ ಮುಂದೆ ಆಟೋಗಳ ಸಾಲು, ಅನಾಮಿಕನಿಂದ ಕೊಲೆ ಬೆದರಿಕೆ
ನಟ ದರ್ಶನ್ ಸಹ ಧನ್ವೀರ್ ವಿರುದ್ಧ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರು ಬಳಸದಂತೆ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಧನ್ವೀರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ನವೆಂಬರ್ 1 ರಂದು ನಟ ದರ್ಶನ್ ಮನೆ ಮುಂದೆ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ.

ಮುಖ್ಯಾಂಶಗಳು
- ದರ್ಶನ್ ಮನೆ ಮುಂದೆ ಆಟೋಗಳ ಸಾಲು
- ಆಟೋ ಬುಕ್ ಮಾಡಿದ ಅನಾಮಿಕ
- ಆಟೋ ಬುಕ್ ಮಾಡಿ ಕೊಲೆ ಬೆದರಿಕೆ ಹಾಕಿದ ಅನಾಮಿಕ
ವಿಜಯಲಕ್ಷ್ಮಿ ದರ್ಶನ್ ಮತ್ತು ಧನ್ವೀರ್ ನಡುವಿನ ಮುನಿಸು ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹಲವು ಎಫ್ಐಆರ್ಗಳು ಧನ್ವೀರ್ ವಿರುದ್ಧ ದಾಖಲಾಗಿವೆ. ನಟ ದರ್ಶನ್ ಸಹ ಧನ್ವೀರ್ ವಿರುದ್ಧ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರು ಬಳಸದಂತೆ ನಿರ್ಬಂಧಕಾಜ್ಞೆಯನ್ನು ತಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಧನ್ವೀರ್ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ನವೆಂಬರ್ 1 ರಂದು ನಟ ದರ್ಶನ್ ಮನೆ ಮುಂದೆ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ.
ತಡವಾಗಿ ಬೆಳಕಿಗೆ ಬಂದಿರುವ ವಿಚಾರವೆಂದರೆ ನವೆಂಬರ್ 1 ರಂದು ದರ್ಶನ್ ಅವರ ರಾಜರಾಜೇಶ್ವರಿ ನಗರದ ಮನೆಯ ಮುಂದೆ ಒಂದರ ಹಿಂದೊಂದು ಹಲವು ಆಟೋಗಳು ಬಂದಿವೆ. ಯಾರೋ ಕಾರ್ತಿಕ್ ಹೆಸರಿನಲ್ಲಿ ಈ ಆಟೋಗಳನ್ನು ಬುಕ್ ಮಾಡಲಾಗಿದೆ. ಆಟೋ ಡ್ರೈವರ್ಗೆ ಬುಕ್ ಮಾಡಿದ ವ್ಯಕ್ತಿ ಕರೆ ಮಾಡಿ, ‘ನಾನು ಧನ್ವೀರ್ ಮ್ಯಾನೇಜರ್ ಮಾತನಾಡುತ್ತಿದ್ದೀನಿ, ಆಟೋಗಳನ್ನು ಒಳಗೆ ಬಿಡು’ ಎಂದು ದರ್ಶನ್ ಅವರ ಭದ್ರತೆಯವರ ಬಳಿ ಹೇಳಿದ್ದಾರೆ. ದರ್ಶನ್ ಅವರ ಭದ್ರತೆಯವರು ಹೆಚ್ಚಿನ ವಿಚಾರಣೆ ಮಾಡಿದಾಗ, ಧನ್ವೀರ್ ಮ್ಯಾನೇಜರ್ ತಾನು ಎಂದು ಪರಿಚಯ ಮಾಡಿಕೊಂಡಿರುವ ಆ ಅನಾಮಿಕ, ಧನ್ವೀರ್ ವಿರುದ್ಧ ಕೇಸು ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ದರ್ಶನ್ ಭದ್ರತೆಯವರು ಎಲ್ಲ ಘಟನೆಯನ್ನು ತಮ್ಮ ಕ್ಯಾಮೆರಾನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆಟೋ ಬುಕ್ ಮಾಡಿದ ವ್ಯಕ್ತಿ, ಪದೇ ಪದೇ ಕೊಲೆ ಬೆದರಿಕೆಗಳನ್ನು ಹಾಕಿದ್ದಾರೆ. ದರ್ಶನ್ ಮ್ಯಾನೇಜರ್, ದರ್ಶನ್ ಅವರ ಸೆಕ್ಯುರಿಟಿ ಮತ್ತು ಕುಟುಂಬವನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದು ವಿಡಿಯೋನಲ್ಲಿ ದಾಖಲಾಗಿದೆ.
ಇದನ್ನೂ ಓದಿ:ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
8861859081 ಮೊಬೈಲ್ ಸಂಖ್ಯೆಯಲ್ಲಿ ಆಟೋಗಳು ಬುಕ್ ಆಗಿದ್ದು, ಕಾರ್ತಿಕ್ ಎಂಬುವರ ಹೆಸರಿನಲ್ಲಿ ಆಟೋಗಳು ಬುಕ್ ಆಗಿವೆ. ಒಂದರ ಹಿಂದೊಂದರಂತೆ ಹಲವು ಆಟೋಗಳನ್ನು ಏಕಕಾಲದಲ್ಲಿ ಬುಕ್ ಮಾಡಲಾಗಿದೆ. ದರ್ಶನ್ ಮನೆಯ ಬಳಿ ಬಂದ ಆಟೋದವರು ಸಹ ಬಳಿಕ ಅದೇ ಸಂಖ್ಯೆಗೆ ಕರೆ ಮಾಡಿದ್ದು, ಅವರಿಗೂ ಸಹ ಆ ಅನಾಮಿಕ ವ್ಯಕ್ತಿ ನಿಂದಿಸಿದ್ದಾನೆ.
ಧನ್ವೀರ್ ಗೌಡ ಮತ್ತು ದರ್ಶನ್ ಕುಟುಂಬದ ನಡುವೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ ಇಂಥಹದ್ದೊಂದು ಘಟನೆ ನಡೆದಿರುವುದು ಕುತೂಹಲ ಕೆರಳಿಸಿದೆ. ಕರೆ ಮಾಡಿರುವುದು ನಿಜವಾಗಿಯೂ ಧನ್ವೀರ್ ಅವರ ಮ್ಯಾನೇಜರ್ ಅಥವಾ ಆಪ್ತರಾ ಅಥವಾ ಬೇರೆ ಯಾರೋ ಧನ್ವೀರ್ ಹೆಸರು ಹೇಳಿಕೊಂಡು ಬೆದರಿಕೆ ಹಾಕಿದ್ದಾರಾ ಎಂಬುದು ತಿಳಿದು ಬರಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




