Nargis Babu Passes Away: ಸ್ಯಾಂಡಲ್​​ವುಡ್ ನಿರ್ಮಾಪಕ ನರ್ಗೀಸ್ ಬಾಬು ನಿಧನ

ನರ್ಗೀಸ್ ಅವರಿಗೆ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ನರ್ಗೀಸ್ ಬಳಲುತ್ತಿದ್ದರು. ಅವರ ಅಗಲಿಕೆಯಿಂದಾಗಿ ಕುಟುಂಬದಲ್ಲಿ ದುಃಖ ನೆಲೆಸಿದೆ.

Nargis Babu Passes Away: ಸ್ಯಾಂಡಲ್​​ವುಡ್ ನಿರ್ಮಾಪಕ ನರ್ಗೀಸ್ ಬಾಬು ನಿಧನ
ನರ್ಗೀಸ್ ಬಾಬು
TV9kannada Web Team

| Edited By: Rajesh Duggumane

Aug 11, 2022 | 9:40 PM

ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ನರ್ಗೀಸ್ ಬಾಬು (Nargis Babu) ಅವರು ಇಂದು (ಆಗಸ್ಟ್ 11) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್​ವುಡ್​ನ (Sandalwood) ಅನೇಕರು ಸಂತಾಪ ಸೂಚಿಸಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಅವರ ಮಗ ಕಮರ್ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

2014ರಲ್ಲಿ ತೆರೆಗೆ ಬಂದ ‘ಆರ್ಯನ್​’ ಸಿನಿಮಾ ಸೇರಿ ಹಲವು ಚಿತ್ರಗಳಿಗೆ ನರ್ಗೀಸ್ ಬಂಡವಾಳ ಹೂಡಿದ್ದರು. ಈ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಆರ್ಯನ್​’ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಾಗೂ ರಮ್ಯಾ ಜೊತೆಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ನರ್ಗೀಸ್ ಮಗ ಕಮರ್. ಪುತ್ರನಿಗೆ ನರ್ಗೀಸ್ ಬೆಂಬಲವಾಗಿ ನಿಂತಿದ್ದರು. ಪರೋಕ್ಷವಾಗಿ ಈ ಚಿತ್ರಕ್ಕೆ ನರ್ಗೀಸ್​ ಅವರೇ ನಿರ್ಮಾಪಕರು ಎನ್ನಬಹುದು. ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ಹಾಗೂ ಚಿ ಗುರು ದತ್​ ಅವರು ನಿರ್ದೇಶನ ಮಾಡಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ಆರು ತಿಂಗಳಲ್ಲಿ ತೆರೆಗೆ ಬಂತು 50ಕ್ಕೂ ಹೆಚ್ಚು ಸಿನಿಮಾ; ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳೆಷ್ಟು?

ನರ್ಗೀಸ್ ಅವರಿಗೆ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ನರ್ಗೀಸ್ ಬಳಲುತ್ತಿದ್ದರು. ಅವರ ಅಗಲಿಕೆಯಿಂದಾಗಿ ಕುಟುಂಬದಲ್ಲಿ ದುಃಖ ನೆಲೆಸಿದೆ. ಅಂತ್ಯ ಸಂಸ್ಕಾರದ ಕುರಿತು ಇನ್ನಷ್ಟೇ ಅಪ್​ಡೇಟ್ ಸಿಗಬೇಕಿದೆ. ಅವರ ಮಗ ಕಮರ್ ಕೂಡ ಸ್ಯಾಂಡಲ್​​ವುಡ್​ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada