‘ಹೊಸ ಹುಡುಗಿಯರು ಹರಾಜು ಆಗಬಾರದು’: ವಿಧಾನಸೌಧದಲ್ಲಿ ಸಂಜನಾ ಗಲ್ರಾನಿ ಖಡಕ್​ ಮಾತು

ಕನ್ನಡ ಚಿತ್ರರಂಗದಲ್ಲಿ ನಟಿಯರಿಗಾಗಿಯೇ ಒಂದು ಸಂಘ ಇರಬೇಕು ಎಂದು ಸಂಜನಾ ಗಲ್ರಾನಿ ಅವರು ಹೇಳಿದ್ದಾರೆ. ಆ ಸಂಘಕ್ಕೆ ಸರ್ಕಾರದ ಮಾನ್ಯತೆ ಕೂಡ ಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಈ ಸಲುವಾಗಿ ಅವರು ವಿಧಾನಸೌಧಕ್ಕೆ ಬಂದು ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಸಂಜನಾ ಮಾಹಿತಿ ನೀಡಿದ್ದಾರೆ.

‘ಹೊಸ ಹುಡುಗಿಯರು ಹರಾಜು ಆಗಬಾರದು’: ವಿಧಾನಸೌಧದಲ್ಲಿ ಸಂಜನಾ ಗಲ್ರಾನಿ ಖಡಕ್​ ಮಾತು
ಸಂಜನಾ ಗಲ್ರಾನಿ
Follow us
| Updated By: ಮದನ್​ ಕುಮಾರ್​

Updated on: Sep 05, 2024 | 9:02 PM

ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ತಪ್ಪಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಮಲಯಾಳಂ ಚಿತ್ರರಂಗದಲ್ಲಿ ‘ಹೇಮಾ ಸಮಿತಿ ವರದಿ’ ಬಹಿರಂಗ ಆದಾಗ ಅನೇಕ ನಟರ ವಿರುದ್ಧ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲೂ ಸೂಕ್ತ ಕ್ರಮಗಳನ್ನು ಕೈಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ನಟಿ ಸಂಜನಾ ಗಲ್ರಾನಿ ಅವರು ಒಂದಷ್ಟು ಬೇಡಿಕೆಗಳನ್ನು ಇಟ್ಟುಕೊಂಡು ಇಂದು (ಸೆಪ್ಟೆಂಬರ್​ 5) ವಿಧಾನಸೌಧಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಕೆಲವು ವಿಷಯಗಳನ್ನು ಟಿವಿ9 ಜೊತೆ ಸಂಜನಾ ಹಂಚಿಕೊಂಡಿದ್ದಾರೆ.

‘ಸಂಜನಾ ಗಲ್ರಾನಿ ಫೌಂಡೇಶನ್​ ಮೂಲಕ ಇದು ನನ್ನ ಕನಸಾಗಿತ್ತು. ಇದನ್ನು ಯಾವ ರೀತಿ ಹೇಳಬೇಕು ಎಂಬದನ್ನು ನಿರ್ಧರಿಸಲು ನನಗೆ ಇಷ್ಟ ಸಮಯ ಹಿಡಿಯಿತು. ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್​ವುಡ್​ ನಟಿಯರ ಸಂಘ ಎಂಬುದು ಇರಬೇಕು. ಅದಕ್ಕೆ ಹಿರಿಯ ನಟಿಯೊಬ್ಬರು ಮುಖ್ಯಸ್ಥೆ ಆಗಿರಬೇಕು. ಇನ್ನೊಬ್ಬರು ನಮ್ಮ ವಯಸ್ಸಿನ ನಟಿ ಕೂಡ ಇರಬೇಕು. ಸರ್ಕಾರದಿಂದ ಒಬ್ಬರು ಮಹಿಳಾ ಸಾಧಕಿ ಕೂಡ ಇದರಲ್ಲಿ ಸೇರ್ಪಡೆಯಾದರೆ ತೂಕ ಇರುತ್ತದೆ’ ಎಂದು ಸಂಜನಾ ಹೇಳಿದ್ದಾರೆ.

‘ಚಿತ್ರರಂಗಕ್ಕೆ ಬರುವ ಹೊಸ ಹುಡುಗಿಯರಿಗೆ ತುಂಬಾ ಅನ್ಯಾಯ ಆಗುತ್ತದೆ. ಅಂಥವರಿಗೆ ಅವರ ಹಕ್ಕುಗಳು ಏನು, ಅಧಿಕಾರ ಏನು, ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದು ಹೇಳಿಕೊಡಲು ಇಲ್ಲಿ ಯಾರೂ ಇಲ್ಲ. ಅಂಥವರಿಗೆ ‘ಸ್ಯಾಂಡಲ್​ವುಡ್​ ವಿಮೆನ್​ ಆರ್ಟಿಸ್ಟ್​ ಅಸೋಸಿಯೇಷನ್​’ ಮಾರ್ಗದರ್ಶನ ಮಾಡುತ್ತದೆ. ಯಾರಾದರೂ ಹೊಸ ಹೀರೋಯಿನ್​ ಬಂದರೆ ಈ ಸಂಘದಲ್ಲಿ ಸದಸ್ಯರಾಗಲಿ. ಸಂಘದ ರೂಲ್​ ಬುಕ್​ ನೋಡಿ ತಿಳಿದುಕೊಳ್ಳಲಿ’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.

ಇದನ್ನೂ ಓದಿ: ‘ಹೇಮಾ ಸಮಿತಿ ರೀತಿ ಟಾಲಿವುಡ್​ನಲ್ಲೂ ವರದಿ ಪ್ರಕಟವಾಗಲಿ’: ಸಮಂತಾ ಒತ್ತಾಯ

‘ಹೊಸಬರಿಗೆ ಬರುವ ಅವಕಾಶಗಳನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬುದನ್ನು ಕಲಿಯಬೇಕು. ಯಾರೋ ಬಂದು ತಾವು ನಿರ್ಮಾಪಕ ಅಂತಾರೆ. ಅದನ್ನು ಹೊಸ ಹುಡುಗಿಯರು ನಂಬುತ್ತಾರೆ. 6 ತಿಂಗಳು ಆದ ನಂತರ ಇದೆಲ್ಲ ಬರೀ ಬೋಗಸ್​ ಎಂಬುದು ಗೊತ್ತಾಗುತ್ತದೆ. ಆ ಆರು ತಿಂಗಳಲ್ಲಿ ಆ ಹೊಸ ಹೆಣ್ಣುಮಕ್ಕಳ ಜೊತೆ ಏನೆಲ್ಲ ನಡೆದುಹೋಗುತ್ತದೆ. ಕ್ಯಾಮೆರಾದಲ್ಲಿ ಅದನ್ನೆಲ್ಲ ಹೇಳೋಕೂ ಆಗಲ್ಲ’ ಎಂದಿದ್ದಾರೆ ಸಂಜನಾ.

‘ನಕಲಿ ಜನರಿಂದ ಕನ್ನಡ ಚಿತ್ರರಂಗದ ಹೆಸರು ಹಾಳಾಗಬಾರದು. ಹೊಸ ಹುಡುಗಿಯರಿಗೆ ಇದನ್ನೆಲ್ಲ ಕಲಿಸುವ ಕೆಲಸ ಈ ಸಂಘ ಮಾಡಬೇಕು. ಈ ಸಂಘವನ್ನು ಶುರುಮಾಡಲು ಅವಕಾಶ ಕೊಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದೇವೆ. ಸರ್ಕಾರದಿಂದ ಮಾನ್ಯತೆ ಸಿಕ್ಕರೆ ತೂಕ ಬರುತ್ತದೆ. ಫೈರ್​ ಸಂಸ್ಥೆ ಉದ್ದೇಶ ಕೂಡ ಚೆನ್ನಾಗಿದೆ. ಸಮಸ್ಯೆ ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶ. ಹೊಸ ಹುಡುಗಿಯರು ಹರಾಜು ಆಗಬಾರದು. ತುಂಬ ಜನ ಹೊಸ ಹುಡುಗಿಯರು ಹೆದರಿಕೊಂಡು ಮನೆಗೆ ಹೊರಟು ಹೋಗುತ್ತಾರೆ. ಅಂಥದ್ದು ನಡೆಯದೇ ಇರಲಿ ಎಂಬ ಕಾರಣಕ್ಕೆ ಕಲಾವಿದೆಯರ ಸಂಘ ಬೇಕು’ ಎಂದಿದ್ದಾರೆ ಸಂಜನಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ