‘ಪ್ರಾಮಾಣಿಕವಾಗಿ ಹೇಳ್ತೀನಿ.. ದರ್ಶನ್​ ನಮ್ಮ ಚಿತ್ರರಂಗಕ್ಕೆ ಬೇಕು’: ರಾಧಿಕಾ ಕುಮಾರಸ್ವಾಮಿ

‘ಮಂಡ್ಯ’ ಮತ್ತು ‘ಅನಾಥರು’ ಸಿನಿಮಾಗಳಲ್ಲಿ ದರ್ಶನ್​ ಜೊತೆ ನಟಿಸಿದ ರಾಧಿಕಾ ಕುಮಾರಸ್ವಾಮಿ ಅವರು ಆ ದಿನಗಳನ್ನು ಈಗ ಮೆಲುಕು ಹಾಕಿದ್ದಾರೆ. ಇಂದು ದರ್ಶನ್​ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಚಿತ್ರರಂಗಕ್ಕೆ ವಾಪಸ್​ ಬರಲಿ ಎಂದು ರಾಧಿಕಾ ಹಾರೈಸಿದ್ದಾರೆ.

‘ಪ್ರಾಮಾಣಿಕವಾಗಿ ಹೇಳ್ತೀನಿ.. ದರ್ಶನ್​ ನಮ್ಮ ಚಿತ್ರರಂಗಕ್ಕೆ ಬೇಕು’: ರಾಧಿಕಾ ಕುಮಾರಸ್ವಾಮಿ
ದರ್ಶನ್​, ರಾಧಿಕಾ ಕುಮಾರಸ್ವಾಮಿ
Follow us
| Updated By: ಮದನ್​ ಕುಮಾರ್​

Updated on: Sep 05, 2024 | 5:05 PM

ನಟ ದರ್ಶನ್​ ಅವರು ಕೊಲೆ ಆರೋಪ ಹೊತ್ತು ಜೈಲು ಸೇರಿದ್ದಾರೆ. ಅವರ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಾತನಾಡಿದ್ದಾರೆ. ದರ್ಶನ್​ ಜೊತೆ ‘ಮಂಡ್ಯ’, ‘ಅನಾಥರು’ ಸಿನಿಮಾಗಳಲ್ಲಿ ನಟಿಸಿದ್ದ ರಾಧಿಕಾ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಈ ಕೇಸ್​ ಬಗ್ಗೆ ಮಾತನಾಡಿದ್ದಾರೆ. ತಾವು ನೋಡಿದ ದರ್ಶನ್​ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ರಾಧಿಕಾ ನೆನಪಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದರ್ಶನ್​ ಅವರ ಅವಶ್ಯಕತೆ ತುಂಬ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ಹಲವು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

‘ದರ್ಶನ್​ ಅವರ ವಿಷಯ ಮಾತನಾಡುವಾಗ ಮನಸ್ಸಿಗೆ ತುಂಬ ನೋವಾಗುತ್ತದೆ. ನಾನು ‘ಮಂಡ್ಯ’ ಮತ್ತು ‘ಅನಾಥರು’ ಸಿನಿಮಾಗಳ ಶೂಟಿಂಗ್​ ಸಮಯದಲ್ಲಿ ಅವರನ್ನು ನೋಡಿದ್ದು. ಸೆಟ್​ನಲ್ಲಿ ಎಲ್ಲರ ಬಳಿಯೂ ಅಣ್ಣ.. ಬನ್ನಿ.. ಹೋಗಿ ಎಂದು ಗೌರವ ಕೊಟ್ಟು ಮಾತನಾಡುತ್ತಿದ್ದರು. ಅಷ್ಟು ದೊಡ್ಡ ನಟ ಎಂಬುದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಾ ಇರಲಿಲ್ಲ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

ಇದನ್ನೂ ಓದಿ: ದರ್ಶನ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ಮೊದಲ ರಿಯಾಕ್ಷನ್

‘ಸಡನ್​ ಆಗಿ ಈ ಒಂದು ವಿಚಾರ ಕೇಳಿಸಿಕೊಂಡಾಗ ನನಗೆ ನಂಬೋಕೆ ಸಾಧ್ಯವಾಗಲಿಲ್ಲ. ಇದು ನಿಜಾನಾ ಎಂಬ ಪ್ರಶ್ನೆ ಮೂಡಿತು. ಅವರವರ ಜೀವನದಲ್ಲಿ ಏನು ಆಗಿರತ್ತೋ ಅದು ಅವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಯಾರೋ ಹೇಳಿದ್ದು, ನ್ಯೂಸ್​ನಲ್ಲಿ ನೋಡಿದ್ದು ಮಾತ್ರ ನಮಗೆ ಗೊತ್ತಿರಲು ಸಾಧ್ಯ. ಅವರ ಲೈಫ್​ನಲ್ಲಿ ಏನಾಗಿರುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಯಾರ ಬಗ್ಗೆಯೂ ನಾವು ಕಮೆಂಟ್​ ಮಾಡುವುದು ತಪ್ಪು’ ಎಂದು ರಾಧಿಕಾ ಹೇಳಿದ್ದಾರೆ.

‘ಪ್ರಮಾಣಿಕವಾಗಿ ಒಂದು ಮಾತು ಹೇಳುತ್ತೇನೆ. ನಮ್ಮ ಚಿತ್ರರಂಗಕ್ಕೆ ದರ್ಶನ್​ ಅವರು ಬೇಕು. ಅವರಿಗೆ ಒಳ್ಳೆಯದಾಗಲಿ ಅಂತ ನಾನು ಹೇಳುತ್ತೇನೆ. ಜೀವನದಲ್ಲಿ ಕೆಲವು ಘಟನೆಗಳು ನಡೆದಾಗ ಮುಂಚಿತವಾಗಿ ಏನೂ ಗೊತ್ತಾಗುವುದಿಲ್ಲ. ಎಲ್ಲರ ಜೀವನದಲ್ಲಿ ಕೆಟ್ಟ ಘಟನೆಗಳು ನಡೆದಿವೆ. ಅದನ್ನೆಲ್ಲ ಎದುರಿಸಿ ನಾವು ಮುಂದೆ ಹೋಗಬೇಕು ಅಷ್ಟೇ. ದರ್ಶನ್​ ಅವರಿಗೂ ನಾನು ಅದನ್ನೇ ಹೇಳುವುದು. ಜೀವನದಲ್ಲಿ ಇರುವ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು ಆದಷ್ಟು ಬೇಗ ಅವರು ನಮ್ಮ ಚಿತ್ರರಂಗಕ್ಕೆ ಮರಳಿ ಬರಲಿ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.