ರೇಣುಕಾಸ್ವಾಮಿ ಮೇಲೆ ದರ್ಶನ್ ಎಷ್ಟು ಬಾರಿ ಹಲ್ಲೆ ಮಾಡಿದ್ರು? ಚಾರ್ಜ್​ಶೀಟ್​ನಲ್ಲಿರೋ ವಿವರಣೆ ಏನು?

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆಯಲ್ಲಿರುವ ಶೆಡ್​ಗೆ ಕರೆದುಕೊಂಡು ಹೋಗಲಾಗಿತ್ತು. ಇದೆಲ್ಲ ಪ್ಲ್ಯಾನ್ ಮಾಡಿದ್ದು ದರ್ಶನ್ ಎನ್ನುವ ಆರೋಪ ಇದೆ. ಇದರಲ್ಲಿ ದರ್ಶನ್ ಪಾತ್ರ ಸಾಕಷ್ಟು ಇದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ರೇಣುಕಾಸ್ವಾಮಿ ಮೇಲೆ ದರ್ಶನ್ ಎಷ್ಟು ಬಾರಿ ಹಲ್ಲೆ ಮಾಡಿದ್ರು? ಚಾರ್ಜ್​ಶೀಟ್​ನಲ್ಲಿರೋ ವಿವರಣೆ ಏನು?
ರೇಣುಕಾಸ್ವಾಮಿ-ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 05, 2024 | 2:41 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ತನಿಖೆ ನಡೆಸಿ, ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್​ಶೀಟ್​ನಲ್ಲಿ ಇರೋ ಮಾಹಿತಿಯ ವಿಚಾರಗಳು ಈಗ ಒಂದೊಂದಾಗಿಯೇ ಹೊರಬರುತ್ತಾ ಇವೆ. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು? ಅವರು ಎಷ್ಟು ಬಾರಿ ಹಲ್ಲೆ ಮಾಡಿದ್ದರು ಎನ್ನುವ ವಿಚಾರ ಕೂಡ ರಿವೀಲ್ ಆಗಿದೆ.

ರೇಣುಕಾ ಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶದ ಬಗ್ಗೆ ಪವನ್​ ಬಳಿ ಪವಿತ್ರಾ ಹೇಳಿಕೊಂಡಿದ್ದರು. ಮೆಸೇಜ್​ ಬಗ್ಗೆ ದರ್ಶನ್​ಗೆ ತೋರಿಸಿದ್ದಾಗ ಅವರನ್ನು ಎತ್ತಿಕೊಂಡು ಬರಲು ದರ್ಶನ್ ಸೂಚನೆ ನೀಡಿದ್ದರು. ದರ್ಶನ್ ಆಣತಿಯಂತೆ ರೇಣುಕಾ ಸ್ವಾಮಿಯನ್ನು ಎತ್ತಿಕೊಂಡು ಬಂದು ಪಟ್ಟಣಗೆರೆ ಶೆಡ್​​ನಲ್ಲಿ ಇಡಲಾಯಿತು. ಶೆಡ್​​ನಲ್ಲಿ ಇಟ್ಟ ಬಗ್ಗೆ ದರ್ಶನ್​ಗೆ ಮಾಹಿತಿ ರವಾನೆ ಆಗಿತ್ತು. ನೇರವಾಗಿ ಪವಿತ್ರಾ ಮನೆಗೆ ತೆರಳಿದ ದರ್ಶನ್ ಅವರನ್ನು ಪಿಕ್ ಮಾಡಿಕೊಂಡು ಶೆಡ್​ಗೆ ಬಂದರು.

ದರ್ಶನ್ ಬಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುತ್ತಾರೆ. ರಿಬ್ ಮುರಿದು ಹಾಕುವ ಅವರು, ಮರ್ಮಾಂಗಕ್ಕೆ ಹೊಡೆಯುತ್ತಾರೆ. ಲಾಠಿನಲ್ಲಿಯೂ ದರ್ಶನ್ ಹಲ್ಲೆ ಮಾಡಿದ್ದಾರೆ. ಪವಿತ್ರಾ ಚಪ್ಪಲಿಯಿಂದ ಹಲ್ಲೆ ಮಾಡುತ್ತಾರೆ. ಆ ಬಳಿಕ ದರ್ಶನ್​ ಮತ್ತೆ ಹಲ್ಲೆ ಮಾಡುತ್ತಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಇದೆ.

ಇದನ್ನೂ ಓದಿ: ದರ್ಶನ್ ಅನ್ನು ಮದುವೆ ಆಗಲು ರೆಡಿ: ಬಳ್ಳಾರಿ ಜೈಲಿನ ಬಳಿ ಮಹಿಳೆ ಹೈಡ್ರಾಮಾ

ಹಲ್ಲೆ ಬಳಿಕ ಶೆಡ್​ನಲ್ಲಿರುವ ವಾಚ್​ಮೆನ್ ರೂಮ್​ನಲ್ಲಿ ರೇಣುಕಾ ಸ್ವಾಮಿಯನ್ನು ಹಾಕಿರಲಾಗುತ್ತದೆ. ಅಲ್ಲಿ ಚೆಕ್ ಮಾಡಿದಾಗ ರೇಣುಕಾ ಸ್ವಾಮಿಗೆ ಪಲ್ಸ್ ಇಲ್ಲ ಎನ್ನುವ ವಿಚಾರ ಗೊತ್ತಾಗುತ್ತದೆ. ಆ ಬಳಿಕ ಪ್ರದೋಶ್ ಮುಂದಿನ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಮರುದಿನ ದರ್ಶನ್ ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗಿ ಆಗುತ್ತಾರೆ. ಆದರೆ, ದರ್ಶನ್​ಗೆ ಚಿಂತೆ ಕಾಡುತ್ತಾ ಇರುತ್ತದೆ. ಅಂದು ರಾತ್ರಿಯೇ ದರ್ಶನ್ ಮೈಸೂರಿಗೆ ಪ್ರಯಾಣ ಬೆಳೆಸುತ್ತಾರೆ.

ಹಣ ಪಡೆದು ಸರೆಂಡರ್

ಇತ್ತ ಪೊಲೀಸರು ರೇಣುಕಾ ಸ್ವಾಮಿ ಅವರದ್ದನ್ನು ಅಸಹಜ ಸಾವು ಎಂದು ದೂರು ದಾಖಲಿಸಲು ಮುಂದಾಗಿದ್ದರು. ಆದರೆ, ಗಾಯ ನೋಡಿ ಇದು ಕೊಲೆ ಅನ್ನೋದು ಗೊತ್ತಾಗುತ್ತದೆ. ಈ ಮಧ್ಯೆ ಮೂವರು ಸರೆಂಡರ್ ಆಗಿದ್ದು ಪೊಲೀಸರಿಗೆ ಅನುಮಾನ ಬರುತ್ತದೆ. ಸರೆಂಡರ್ ಆದವರನ್ನು ಬಾಯಿಬಿಡಿಸಿದಾಗ ಅಸಲಿ ವಿಚಾರ ಗೊತ್ತಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ