‘ತ್ರಿಕಾರಂ’ ಚಿತ್ರತಂಡದಿಂದ ಮತ್ತೊಂದು ಲವ್ ಹಾಡು ರಿಲೀಸ್

‘ತ್ರಿಕಾರಂ’ ಟೈಟಲ್ ಗಮನ ಸೆಳೆದಿದೆ. ಈ ಸಿನಿಮಾದ ಶೀರ್ಷಿಕೆಗೆ ‘ಇದು ಸ್ಮಶಾನ ಅಲ್ಲ’ ಎಂಬ ಟ್ಯಾಗ್ ಲೈನ್ ಇದೆ. ಹರ್ಷವರ್ಧನ್ ಮತ್ತು ನಿಶ್ಚಿತಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಎರಡು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಇತ್ತೀಚಿಗೆ ಈ ಸಿನಿಮಾದ ಲವ್ ಸಾಂಗ್ ಬಿಡುಗಡೆ ಮಾಡಲಾಯಿತು.

‘ತ್ರಿಕಾರಂ’ ಚಿತ್ರತಂಡದಿಂದ ಮತ್ತೊಂದು ಲವ್ ಹಾಡು ರಿಲೀಸ್
Trikaaram Movie Team

Updated on: Feb 17, 2026 | 6:58 PM

ಈ ಮೊದಲು ಬಿಡುಗಡೆ ಆಗಿದ್ದ ಹಾಡಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆಗೆ ‘ತ್ರಿಕಾರಂ’ (Trikaaram) ಚಿತ್ರತಂಡ ಖುಷಿಯಾಗಿದೆ. ಅದರ ಬೆನ್ನಲ್ಲೇ ಇನ್ನೊಂದು ಹಾಡು (Kannada Song) ರಿಲೀಸ್ ಮಾಡಲಾಗಿದೆ. ಫೆಬ್ರವರಿ ಎಂದರೆ ಪ್ರೇಮಿಗಳ ತಿಂಗಳು. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡನ್ನು ಅನಾವರಣ ಮಾಡಲಾಯಿತು. ಉತ್ಸವ್ ಲೆಗೆಸಿಯಲ್ಲಿ ಹಾಡಿನ ರಿಲೀಸ್ ಕಾರ್ಯಕ್ರಮ ನಡೆಯಿತು. ರವೀಂದ್ರ, ಶಿವರಾಜ್ ಕೆ.ಆರ್. ಪೇಟೆ, ಖದರ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ವಿಶ್ ಮಾಡಿದರು.

‘ತ್ರಿಕಾರಂ’ ಸಿನಿಮಾದ ಹೊಸ ಹಾಡು ಪಿನ್2ಪಿನ್ ಮ್ಯೂಸಿಕ್ ಸಂಸ್ಥೆಯಿಂದ ರಿಲೀಸ್ ಆಗಿದೆ. ‘ಸೀದಾ ನಿಂತರೂ ಲೋಕ ಯಾಕೆ ಉಲ್ಟ ಕಾಣ್ತದೆ’ ಎಂಬ ಸಾಲಿನೊಂದಿಗೆ ಈ ಹಾಡು ಶುರು ಆಗುತ್ತದೆ. ಕೇಶು-ಚೇತನ್ ಅವರು ಈ ಹಾಡನ್ನು ಬರೆದಿದ್ದಾರೆ. ರಾಜೇಶ್ ಕೃಷ್ಣನ್ ಅವರು ಧ್ವನಿ ನೀಡಿದ್ದಾರೆ. ಈ ಸಿನಿಮಾಗೆ ವಿವೇಕ್ ಚಕ್ರವರ್ತಿ ಅವರು ಸಂಗೀತ ಸಂಯೋಜಿಸಿದ್ದಾರೆ.

‘ಸದ್ಗುರು ಸಿನಿ ಪ್ರೊಡಕ್ಷನ್’ ಮೂಲಕ ನಾಟಕಪ್ರೇಮಿ ಆಗಿರುವ ಜಿ. ಗಣೇಶ್ ಮೂರ್ತಿ ಅವರು ‘ತ್ರಿಕಾರಂ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕನಾಗಿದ್ದು ಮಾತ್ರವಲ್ಲದೇ ವಿಲನ್ ಪಾತ್ರವನ್ನೂ ಅವರೇ ಮಾಡಿದ್ದಾರೆ. ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಅಜ್ಜಂಪುರದ ದಿಲೀಪ್ ಕುಮಾರ್ ಜೆ.ಆರ್. ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ತ್ರಿಕಾರಂ’ ಸಿನಿಮಾದ ಹೊಸ ಹಾಡು:

Seedanintru Lokayako 4K Video Song | Trikaaram | Dileep Kumar JR | Harshavardhan | Nischitha Shetty

ಈ ಸಿನಿಮಾಗೆ ಹೊನ್ನಾಳಿ ಯಾಸಿನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸತೀಶ್ ಚಂದ್ರಯ್ಯ ಅವರು ಸಂಕಲನ ಮಾಡಿದ್ದಾರೆ. ಚಂದ್ರುಬಂಡೆ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹೈಟ್‌ ಮಂಜು, ಕಂಬಿರಾಜ್ ಅವರ ನ್ಯೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಂದ್ರ ಪ್ರಸಾದ್, ಚೇತನ್‌ಕುಮಾರ್, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಹೊಸದುರ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

ಇದನ್ನೂ ಓದಿ: ಶಶಾಂಕ್ ಶೇಷಗಿರಿ ಕಂಠದಲ್ಲಿ ‘ತ್ರಿಕಾರಂ’ ಸಿನಿಮಾದ ಟೈಟಲ್ ಸಾಂಗ್

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕರು ಮಾಹಿತಿ ಹಂಚಿಕೊಂಡರು. ‘ದೈವ ಮತ್ತು ದುಷ್ಟರ ನಡುವಿನ ಹೋರಾಟ ಕಥೆಯು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಅದು ಯಾವ ರೀತಿಯ ಹೋರಾಟ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು’ ಎಂದು ಅವರು ಹೇಳಿದರು. ಈ ಚಿತ್ರದಲ್ಲಿ ಹರ್ಷವರ್ಧನ್, ನಿಶ್ಚಿತಾ ಶೆಟ್ಟಿ, ನಾಗೇಂದ್ರ ಅರಸ್, ಬಲರಾಜವಾಡಿ, ಮಂಜು ಪಾವಗಡ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us