ಶಾರುಖ್ ಖಾನ್ ನವೆಂಬರ್ 2ರಂದು ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ. ಡ್ರಗ್ ಕೇಸ್ನಲ್ಲಿ ಜೈಲಿಗೆ ತೆರಳಿದ್ದ ಮಗ ಆರ್ಯನ್ ಖಾನ್ ರಿಲೀಸ್ ಆಗಿದ್ದಾರೆ. ಇದು ಶಾರುಖ್ ಬರ್ತ್ಡೇ ಸಂಭ್ರಮವನ್ನು ಹೆಚ್ಚಿಸಿತ್ತು. ಆದಾಗ್ಯೂ, ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಕಿಂಗ್ ಖಾನ್. ಶಾರುಖ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಬಂದಿದ್ದರು. ಈ ಮಧ್ಯೆ ಶಾರುಖ್ ಖಾನ್ ಫೋಟೋ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ರಾರಾಜಿಸಿದೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಶಾರುಖ್ ಫೋಟೋ ರಾರಾಜಿಸಿದ್ದು, ‘ವಿ ಲವ್ ಯು’ ಎಂದು ಬರೆಯಲಾಗಿದೆ. ಈ ಫೋಟೋ ಈಗ ವೈರಲ್ ಆಗಿದೆ. ಈ ವಿಡಿಯೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಶಾರುಖ್ ಖಾನ್ ಅವರಿಗೆ ಈ ತಿಂಗಳು ಬಹಳ ವಿಶೇಷವಾದದ್ದು. ಏಕೆಂದರೆ, ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಜತೆಗೆ ಕತ್ತಲಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಾವಳಿ ಹಬ್ಬ ಇದೆ. ನವೆಂಬರ್ 13ರಂದು ಆರ್ಯನ್ ಖಾನ್ ಜನ್ಮದಿನ. ಈ ಎಲ್ಲಾ ಕಾರಣಕ್ಕೆ ಶಾರುಖ್ ಎಗ್ಸೈಟ್ ಆಗಿದ್ದಾರೆ. ಮತ್ತೆ ಕುಟುಂಬದಲ್ಲಿ ಸಂತಸ ಮೂಡಿದೆ. ಇಂದು ಕುಟುಂಬದವರ ಜತೆ ಸಿಂಪಲ್ ಆಗಿ ಶಾರುಖ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಶಾರುಖ್ ಜನ್ಮದಿನದಂದು ಅವರ ಮನೆಯ ಎದುರು ಸಾವಿರಾರು ಅಭಿಮಾನಿಗಳು ಬಂದು ನಿಲ್ಲುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ.
The tallest building in the world lights up for the most loved superstar in the world. We love you, @iamsrk! ❤️ #HappyBirthdaySRK pic.twitter.com/KKnTDIb3Xa
— Shah Rukh Khan Universe Fan Club (@SRKUniverse) November 2, 2021
ಶಾರುಖ್ ಪತ್ನಿ ಗೌರಿ ಖಾನ್ ಹಿಂದು ಆಗಿದ್ದರು. ಈ ಕಾರಣಕ್ಕೆ ಶಾರುಖ್ ತಮ್ಮ ಮನೆಯಲ್ಲಿ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಾರೆ. ಈ ಬಾರಿಯೂ ಬೆಳಕಿನ ಹಬ್ಬವನ್ನು ಕುಟುಂಬ ಸಮೇತವಾಗಿ ಆಚರಿಸಲು ಯೋಚನೆ ಮಾಡಿದ್ದಾರೆ. ಆರ್ಯನ್ ಖಾನ್ ಬರ್ತ್ಡೇ ಕೂಡ ಶಾರುಖ್ ಮನೆಯಲ್ಲೇ ಸೆಲಬ್ರೇಟ್ ಮಾಡಲಿದ್ದಾರೆ.
ಆರ್ಯನ್ ಖಾನ್ ಡ್ರಗ್ ಪ್ರಕರಣದಿಂದ ಸಿನಿಮಾ ಕೆಲಸಗಳಿಗೆ ತೆರಳೋಕೆ ಶಾರುಖ್ಗೆ ಸಾಧ್ಯವಾಗಿಲ್ಲ. ಮಗನ ಚಿಂತೆಯಲ್ಲಿ ಅವರು ಸರಿಯಾಗಿ ವರ್ಕೌಟ್ ಕೂಡ ಮಾಡಿರಲಿಲ್ಲ. ಮಗನ ಬರ್ತ್ಡೇ ನಂತರ ಅವರು ಮತ್ತೆ ಸಿನಿಮಾ ಕೆಲಸಗಳಿಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಶಾರುಖ್ ಬರ್ತ್ಡೇ ಅಂಗವಾಗಿ ಅನೇಕ ಸೆಲೆಬ್ರಟಿಗಳು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ಶಾರುಖ್ ನಟಿಸುತ್ತಿರುವ ಸಿನಿಮಾ ತಂಡದಿಂದ ಏನಾದರೂ ಅಪ್ಡೇಟ್ ಸಿಗಲಿದೆಯೇ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿತ್ತು. ಆದರೆ, ಅದು ಈಡೇರಲಿಲ್ಲ.
ಇದನ್ನೂ ಓದಿ: Aryan Khan Jail: ಜೈಲಿನಿಂದ ಹೊರಬಂದ ಆರ್ಯನ್ ಖಾನ್; ಶಾರುಖ್ ನಿವಾಸ ಮನ್ನತ್ ಎದುರು ಫ್ಯಾನ್ಸ್ ಸಂಭ್ರಮ