‘ಶಾಂತಿ-ಕ್ರಾಂತಿ’ ಸಿನಿಮಾ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಹೇಳಿದ್ದೇನು?

Shanti Kranti movie: ಸಿನಿಮಾ ಪ್ರೇಮಿಗಳು, ಅಭಿಮಾನಿಗಳು ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ರೀ-ರಿಲೀಸ್ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿದ್ದ ಸೋತಿದ್ದ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿವೆ. ‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು ಇದೀಗ ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

‘ಶಾಂತಿ-ಕ್ರಾಂತಿ’ ಸಿನಿಮಾ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಹೇಳಿದ್ದೇನು?
V Ravichandran

Updated on: Sep 01, 2026 | 3:18 PM

ಮುಖ್ಯಾಂಶಗಳು

  • ‘ಶಾಂತಿ-ಕ್ರಾಂತಿ’ ಕನ್ನಡದ ಕಲ್ಟ್ ಸಿನಿಮಾ
  • ‘ಶಾಂತಿ-ಕ್ರಾಂತಿ’ ಸಿನಿಮಾ ಮರು ಬಿಡುಗಡೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
  • ಸಿನಿಮಾ ಮರು ಬಿಡುಗಡೆಗೆ ಇರುವ ಸಮಸ್ಯೆ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

ಶಾಂತಿ-ಕ್ರಾಂತಿ’ (Shanti Kranthi) ಸಿನಿಮಾ ರೀ ರಿಲೀಸ್ ಬಗ್ಗೆ ಬೇಡಿಕೆ ಶುರುವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಹಳೆಯ ಸಿನಿಮಾದ ರೀ ರಿಲೀಸ್​​ಗೆ ಪ್ರೇಕ್ಷಕರಿಂದಲೇ ಇಷ್ಟೋಂದು ಬೇಡಿಕೆ ಬಂದಿರುವುದು ಇದೇ ಮೊದಲು. ಹಲವಾರು ಮಂದಿ ಸಿನಿಮಾ ಪ್ರೇಮಿಗಳು, ಅಭಿಮಾನಿಗಳು ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ರೀ-ರಿಲೀಸ್ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿದ್ದ ಸೋತಿದ್ದ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿವೆ. ‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು ಇದೀಗ ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಎಫ್​​ಪಿಎಲ್ (ಫಾದರ್ಸ್ ಪ್ರೀಮಿಯರ್ ಲೀಗ್) ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾಗ ಈ ಬಗ್ಗೆ ಮಾತನಾಡಿದ ನಟ ರವಿಚಂದ್ರನ್, ‘ಸಿನಿಮಾ ಬಿಡುಗಡೆ ಮಾಡುವುದು ನನ್ನ ತಮ್ಮನ ಕೈಯಲ್ಲಿದೆ. ಏಕೆಂದರೆ ಆ ಸಿನಿಮಾಕ್ಕೆ ಆತನೇ ಪ್ರೊಪರೇಟರ್. ಸಿನಿಮಾದ ಮರು ಬಿಡುಗಡೆ ಮಾಡಲು ಇರುವ ಇನ್ನೊಂದು ಸಮಸ್ಯೆ ಎಂದರೆ ಆ ಸಿನಿಮಾದ ನೆಗೆಟಿವ್​​ಗಳು ಈಗ ಇಲ್ಲ. ಪ್ರಸಾದ್ ಲ್ಯಾಬ್ ಅಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇದ್ದವು. ಆದರೆ 25 ವರ್ಷಕ್ಕೂ ಹೆಚ್ಚು ಅವಧಿ ಆಗಿದ್ದರಿಂದ ಅದೆಲ್ಲ ಕರಗಿ ಹೋಗಿವೆ, ಹಾಳಾಗಿವೆ’ ಎಂದಿದ್ದರು.

‘ಬೇರೆ ಎಲ್ಲಾದರೂ ‘ಶಾಂತಿ-ಕ್ರಾಂತಿ’ ಸಿನಿಮಾದ ನೆಗೆಟಿವ್​​ಗಳು ಇವೆ ಎಂದು ಹುಡಬೇಕು. ಅವರನ್ನು ಈಗ ತಂತ್ರಜ್ಞಾನ ಬಳಸಿ ಅದನ್ನೆಲ್ಲ ರಿಟ್ರೀವ್ ಮಾಡಬೇಕು ಅದಕ್ಕೆಲ್ಲ ಬಹಳ ಟೈಂ ಹಿಡಿಯುತ್ತದೆ. ಮಾತ್ರವೇ ಅಲ್ಲದೆ, ಮತ್ತೆ 2 ರಿಂದ 3 ಕೋಟಿ ರೂಪಾಯಿ ಹಣವನ್ನೂ ಸಹ ನಾವು ಹೂಡಿಕೆ ಮಾಡಬೇಕಾಗುತ್ತದೆ. ಸಿನಿಮಾದ ಸಂಗೀತವನ್ನು ಮತ್ತೆ ಮಾಡಿಸಬೇಕು ಮತ್ತೆ ಆರ್ಕೇಸ್ಟ್ರಾ ಎಲ್ಲವನ್ನೂ ಮಾಡಿಸಬೇಕು. ಆಗಿನ ಕಾಲಕ್ಕೆ ಬಹು ದೊಡ್ಡ ಆರ್ಕೆಸ್ಟ್ರಾ ಅನ್ನು ನಾವು ಅರೇಂಜ್ ಮಾಡಿಸಿದ್ದೆವು’ ಎಂದು ರವಿಚಂದ್ರನ್ ಹೇಳಿದ್ದಾರೆ.

ಇದನ್ನೂ ಓದಿ:ಶ್ರೀಮಂತಿಕೆಯಲ್ಲಿ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅನ್ನೂ ಹಿಂದಿಕ್ಕಿದ ನಟಿ

ಕೆಲ ದಿನಗಳ ಮುಂಚೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಸಹ ಇದೇ ವಿಷಯವಾಗಿ ವಿಡಿಯೋ ಒಂದನ್ನು ಮಾಡಿ ಮಾಹಿತಿ ಹಂಚಿಕೊಂಡಿದ್ದರು. ‘ಶಾಂತಿ-ಕ್ರಾಂತಿ’ ಸಿನಿಮಾ ಅನ್ನು ಮರು ಬಿಡುಗಡೆ ಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಆದರೆ ಆ ಸಿನಿಮಾ ಅನ್ನು ಉತ್ತಮ ಗುಣಮಟ್ಟದಲ್ಲಿ ಮರು ಬಿಡುಗಡೆ ಮಾಡಬೇಕು ಎಂದರೆ ಕನಿಷ್ಟ ಒಂದು ವರ್ಷ ಸಮಯ ಹಿಡಿಯುತ್ತದೆ ಎಂದಿದ್ದರು.

‘ಶಾಂತಿ-ಕ್ರಾಂತಿ’ ಒಂದು ರೀತಿಯಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಆ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಒಟ್ಟಿಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದರು ರವಿಚಂದ್ರನ್. ಈಗಿನಂತೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಅಲ್ಲ ಬದಲಿಗೆ ಆಯಾ ಭಾಷೆಯಲ್ಲಿ ಶೂಟಿಂಗ್ ಸಹ ಮಾಡಿದ್ದರು. ಆಗಿನ ಕಾಲಕ್ಕೆ (1991) ಆ ಸಿನಿಮಾಕ್ಕೆ ಸುಮಾರು 18 ಕೋಟಿ ಖರ್ಚು ಮಾಡಿದ್ದರಂತೆ. ರವಿಚಂದ್ರನ್ ಅವರೇ ಹೇಳಿರುವಂತೆ ಆ ಸಿನಿಮಾದ ಒಂದು ದಿನದ ಶೂಟಿಂಗ್ ಖರ್ಚು 6 ಲಕ್ಷ ರೂಪಾಯಿ ಆಗುತ್ತಿತ್ತಂತೆ. ಪ್ರತಿ ದಿನ ಸಿನಿಮಾದ ಸೆಟ್​​ನಲ್ಲಿ ಸುಮಾರು 5000 ಜನರಿಗೆ ಊಟ ತಯಾರಾಗುತ್ತಿತ್ತಂತೆ. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿತ್ತು. ಆದರೆ ಇದೀಗ ಆ ಸಿನಿಮಾ ಅನ್ನು ಮರು ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us