ಶ್ರೀಮಂತಿಕೆಯಲ್ಲಿ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅನ್ನೂ ಹಿಂದಿಕ್ಕಿದ ನಟಿ
Shah Rukh Khan-Juhi Chawla: ಭಾರತದ ಟಾಪ್ ಶ್ರೀಮಂತರ ಪಟ್ಟಿ ತೆಗೆದಾಗ ಅದರಲ್ಲಿ ಭಾರತದ ಸೂಪರ್ ಸ್ಟಾರ್ ನಟರುಗಳ ಹೆಸರು ಮಾತ್ರವೇ ಸಿಗುತ್ತದೆ. ನಟಿಯರ ಹೆಸರು ಸಿಗುವುದಿಲ್ಲ. ಆದರೆ ಈಗ ಹಾಗಲ್ಲ. ಬಾಲಿವುಡ್ನ ಮಾಜಿ ಸೂಪರ್ ಸ್ಟಾರ್ ನಟಿಯೊಬ್ಬರು, ಬಾಲಿವುಡ್ನ ಕೆಲ ಸೂಪರ್ ಸ್ಟಾರ್ಗಳನ್ನು ಸಹ ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದಾರೆ.

ಭಾರತ ಚಿತ್ರರಂಗದಲ್ಲಿ ನಟರುಗಳಿಗೆ ಹೆಚ್ಚು ಸಂಭಾವನೆ, ಸ್ಟಾರ್ ನಟರುಗಳು ಪಡೆವ ಸಂಭಾವನೆಯ ಕಾಲು ಭಾಗಕ್ಕಿಂತಲೂ ಕಡಿಮೆ ಸಂಭಾವನೆಯನ್ನು ಮಾತ್ರವೇ ನಟಿಯರಿಗೆ ನೀಡಲಾಗುತ್ತದೆ. ಹಾಗಾಗಿ ಭಾರತದ ಟಾಪ್ ಶ್ರೀಮಂತರ ಪಟ್ಟಿ ತೆಗೆದಾಗ ಅದರಲ್ಲಿ ಭಾರತದ ಸೂಪರ್ ಸ್ಟಾರ್ ನಟರುಗಳ ಹೆಸರು ಮಾತ್ರವೇ ಸಿಗುತ್ತದೆ. ನಟಿಯರ ಹೆಸರು ಸಿಗುವುದಿಲ್ಲ. ಆದರೆ ಈಗ ಹಾಗಲ್ಲ. ಬಾಲಿವುಡ್ನ ಮಾಜಿ ಸೂಪರ್ ಸ್ಟಾರ್ ನಟಿಯೊಬ್ಬರು, ಬಾಲಿವುಡ್ನ ಕೆಲ ಸೂಪರ್ ಸ್ಟಾರ್ಗಳನ್ನು ಸಹ ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದ್ದಾರೆ.
ಕನ್ನಡದ ‘ಪ್ರೇಮಲೋಕ’, ‘ಕಿಂದರ ಜೋಗಿ’, ‘ಶಾಂತಿ-ಕ್ರಾಂತಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಜೂಹಿ ಚಾವ್ಲಾ ಕಳೆದ ಕೆಲ ವರ್ಷಗಳಿಂದಲೂ ಬಾಲಿವುಡ್ನ ಶ್ರೀಮಂತ ನಟಿ ಎನಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರ ಆದಾಯದಲ್ಲಿ ಭಾರಿ ಹೆಚ್ಚಳ ಆಗಿದ್ದು, ಈಗಂತೂ ಜೂಹಿ ಚಾವ್ಲಾ ಅವರು ಬಾಲಿವುಡ್ನ ಸ್ಟಾರ್ ನಟರುಗಳಾದ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅವರುಗಳನ್ನು ಸಹ ಶ್ರೀಮಂತಿಕೆಯಲ್ಲಿ ಹಿಂದಿಟ್ಟಿದ್ದಾರೆ.
ಜೂಲಿ ಚಾವ್ಲಾ ಇದೀಗ ಇಡೀ ಬಾಲಿವುಡ್ನಲ್ಲಿ ಎರಡನೇ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಆಗಿದ್ದಾರೆ. ಮೊದಲ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2025 ಪ್ರಕಾರ, ಬಾಲಿವುಡ್ನ ಶ್ರೀಮಂತರ ಪಟ್ಟಿಯಲ್ಲಿ ಹೃತಿಕ್ ರೋಷನ್, ಅಮಿತಾಬ್ ಬಚ್ಚನ್ ಅವರುಗಳನ್ನೂ ಸಹ ಜೂಹಿ ಚಾವ್ಲಾ ಹಿಂದಕ್ಕೆ ಹಾಕಿದ್ದಾರೆ. ಜೂಹಿ ಚಾವ್ಲಾರ ಆಸ್ತಿ ಮೌಲ್ಯ ಈಗ ಸುಮಾರು ಎಂಟು ಸಾವಿರ ಕೋಟಿ ರೂಪಾಯಿಗಳಾಗಿವೆ.
ಇದನ್ನೂ ಓದಿ:ಜೂಹಿ ಚಾವ್ಲಾ ಆಸ್ತಿ 4600 ಕೋಟಿ ರೂಪಾಯಿ; ಇಷ್ಟೆಲ್ಲ ಹಣ ಬಂದಿದ್ದು ಎಲ್ಲಿಂದ?
ಕಳೆದ ವರ್ಷ ಜೂಹಿ ಚಾವ್ಲಾ ಅವರ ಆಸ್ತಿ ಮೌಲ್ಯ 4600 ಕೋಟಿ ರೂಪಾಯಿಗಳಿತ್ತು. ಕೇವಲ ಒಂದೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ ಸುಮಾರು ದುಪ್ಪಟ್ಟಾಗಿದೆ. ಅಂದಹಾಗೆ ಹುರೆನ್ ಪಟ್ಟಿಯಲ್ಲಿ ಜೂಹಿ ಚಾವ್ಲಾ ಹೊರತಾಗಿ ದೀಪಿಕಾ ಪಡುಕೋಣೆ, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಅವರುಗಳ ಹೆಸರು ಶ್ರೀಮಂತ ನಟಿಯರ ಪಟ್ಟಿಯಲ್ಲಿ ಇದೆ.
ಜೂಹಿ ಚಾವ್ಲಾ ಅವರು ಕೊಲ್ಕತ್ತ ನೈಟ್ ರೈಡರ್ಸ್ ತಂಡದ ಸಹ ಮಾಲಕಿ. ಶಾರುಖ್ ಖಾನ್ ಜೊತೆಗೆ ಜೂಹಿ ಸಹ ಪಾಲುದಾರಿಕೆ ಹೊಂದಿದ್ದಾರೆ. ಇನ್ನು ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಸೌರಾಷ್ಟ್ರ ಸಿಮೆಂಟ್ ಮತ್ತು ಗುಜರಾತ್ ಸಿದ್ಧಿ ಸಿಮೆಂಟ್ ಲಿಮಿಟೆಡ್ನ ಮಾಲೀಕರಾಗಿದ್ದಾರೆ. ಜೂಹಿ ಚಾವ್ಲಾ, ಮೆಹ್ತಾ ಅವರ ಎರಡನೇ ಪತ್ನಿ.
ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಮೊದಲ ಸ್ಥಾನದಲ್ಲಿದೆ. ಶಾರುಖ್ ನಟನೆ, ನಿರ್ಮಾಣ ಸಂಸ್ಥೆ, ಸ್ಟುಡಿಯೋ ಇನ್ನೂ ಹಲವು ಉದ್ಯಮಗಳ ಮಾಲೀಕರಾಗಿರುವ ಶಾರುಖ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ 12 ಸಾವಿರ ಕೋಟಿಗೂ ಹೆಚ್ಚಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




