Shanvi Srivastava: ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಶಾನ್ವಿ ಕೈಗೆ ಪೆಟ್ಟು

‘ಬ್ಯಾಂಗ್' ಸಿನಿಮಾದಲ್ಲಿ ಶಾನ್ವಿ ಅವರದ್ದು ಗ್ಯಾಂಗ್‌ಸ್ಟರ್ ಪಾತ್ರ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇರಲಿದೆ. ಅದಕ್ಕಾಗಿಯೇ ಅವರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ.

Shanvi Srivastava: ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಶಾನ್ವಿ ಕೈಗೆ ಪೆಟ್ಟು
Shanvi Srivastava: ಸಿನಿಮಾ ಶೂಟಿಂಗ್ ವೇಳೆ ಅವಘಡ; ನಟಿ ಶಾನ್ವಿ ಕೈಗೆ ಪೆಟ್ಟು
Edited By:

Updated on: Aug 01, 2021 | 9:03 PM

ಸಿನಿಮಾ ಶೂಟಿಂಗ್​ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸಿ ಬಿಡುತ್ತದೆ. ಈಗ ಶಾನ್ವಿ ಶ್ರೀವಾಸ್ತವ ನಟಿಸುತ್ತಿರುವ ‘ಬ್ಯಾಂಗ್’​ ಸಿನಿಮಾ ಚಿತ್ರದ ಶೂಟಿಂಗ್​ ವೇಳೆಯೂ ಹಾಗೆಯೇ ಆಗಿದೆ. ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ಶಾನ್ವಿ ಬಿದ್ದಿದ್ದಾರೆ. ಈ ವೇಳೆ ಅವರ ಕೈಗೆ ಪೆಟ್ಟಾಗಿದೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಶೂಟಿಂಗ್​ ನಿಂತಿದೆ. 

‘ಬ್ಯಾಂಗ್’ ಸಿನಿಮಾದಲ್ಲಿ ಶಾನ್ವಿ ಅವರದ್ದು ಗ್ಯಾಂಗ್‌ಸ್ಟರ್ ಪಾತ್ರ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇದೆ. ಅದಕ್ಕಾಗಿಯೇ ಅವರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಜತೆಗೆ ಅಗತ್ಯ ಸಿದ್ಧತೆಗಳ ನಡುವೆ ಶೂಟಿಂಗ್ ಶುರು ಮಾಡಿದ್ದರು. ಆದರೆ ಮಳೆ ಎಫೆಕ್ಟ್‌ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಅವರ ಕೈಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ಈ ಚಿತ್ರಕ್ಕೆ ಶ್ರೀಗಣೇಶ್‌ ಪರಶುರಾಮ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ. ಗಾಯಕ ರಘು ದೀಕ್ಷಿತ್ ಡಾನ್ ಆಗಿ ‘ಬ್ಯಾಂಗ್‌’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತ್ವಿಕ್ ಮುರಳೀಧರ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ಒಂದು  ಪಾತ್ರವನ್ನೂ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆಯುತ್ತಿದ್ದಾರೆ. ಸಾಹಸ ನಿರ್ದೇಶನವನ್ನು ಚೇತನ್ ಮಾಡುತ್ತಿದ್ದಾರೆ.

‘ಲಾಕ್‌ಡೌನ್‌ ನಂತರ ಮತ್ತೆ ಶೂಟಿಂಗ್‌ ಪ್ರಾರಂಭ ಆಗಿದ್ದು ಖುಷಿ ಕೊಟ್ಟಿದೆ. ಬ್ಯಾಂಗ್‌ ಸಿನಿಮಾ ಟೀಮ್‌ ಚೆನ್ನಾಗಿದೆ. ಫೈಟ್‌ ದೃಶ್ಯ ಮಾಡುವ ಮೊದಲು ನಾಲ್ಕೈದು ದಿನ ಟ್ರೇನಿಂಗ್‌ ಕೊಟ್ಟಿದ್ದಾರೆ’ ಎಂದು ಇತ್ತೀಚೆಗೆ ಶಾನ್ವಿ ಹೇಳಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಎಲಿಮಿನೇಷನ್​ನಲ್ಲಿ ಟ್ವಿಸ್ಟ್​; ಶನಿವಾರವೇ ಹೊರ ಬಿದ್ದ ಶುಭಾ ಪೂಂಜಾ

Are you a Virgin? ಎಂದು ಕೇಳಿದ ಅಭಿಮಾನಿಗೆ ನಟಿ ಶಾನ್ವಿ ಶ್ರೀವಾಸ್ತವ ನೀಡಿದ ಬೋಲ್ಡ್ ಉತ್ತರ ಇದು!