ನಾನಿಯ ‘ಹಾಯ್ ನಾನ್ನ’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ…

|

Updated on: Dec 12, 2023 | 10:26 PM

Shiva Rajkumar: ತೆಲುಗಿನ ಸ್ಟಾರ್ ನಟ ನಾನಿ ನಟನೆಯ ‘ಹಾಯ್ ನಾನ್ನ’ ಸಿನಿಮಾ ವೀಕ್ಷಿಸಿರುವ ಶಿವರಾಜ್ ಕುಮಾರ್, ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾನಿಯ ‘ಹಾಯ್ ನಾನ್ನ’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ...
Follow us on

ತೆಲುಗು ಚಿತ್ರರಂಗದಲ್ಲಿ ನ್ಯಾಚುರಲ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಾನಿ (Nani) ನಟನೆಯ ‘ಹಾಯ್​ ನಾನ್ನ’ (Hi Naanna) ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ತಂದೆ-ಮಗಳ ಭಾವುಕ ಕತೆಗೆ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸಿನಿಮಾ ಸೆಲೆಬ್ರಿಟಿಗಳು ಸಹ ಫಿದಾ ಆಗಿದ್ದಾರೆ. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ‘ಹಾಯ್ ನಾನ್ನ’ ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲ ದಿನದ ಹಿಂದೆ ‘ಹಾಯ್​ ನಾನ್ನ’ ಸಿನಿಮಾದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಶಿವಣ್ಣ ಅವರನ್ನು ಭೇಟಿಯಾಗಿ ಸಿನಿಮಾ ನೋಡುವಂತೆ ವಿನಂತಿಸಿದ್ದರು. ಅಂತೆಯೇ ಈಗ ಮೈಸೂರಿನಲ್ಲಿ ಶಿವರಾಜ್​ಕುಮಾರ್, ‘ಹಾಯ್​ ನಾನ್ನ’ ಸಿನಿಮಾ ನೋಡಿ, ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘‘ತುಂಬ ಒಳ್ಳೆಯ ಸಿನಿಮಾ. ಎಮೋಷನ್, ಸೆಂಟಿಮೆಂಟ್ ಬೇಗ ಕನೆಕ್ಟ್ ಆಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳು ಇದ್ದ ಪೋಷಕರಿಗೆ ಈ ಸಿನಿಮಾ ಬಹಳ ಇಷ್ಟವಾಗುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ನನಗೂ ಸಿನಿಮಾ ಬಹಳ ಕನೆಕ್ಟ್ ಆಯಿತು. ಸಿನಿಮಾದ ಹಿನ್ನೆಲೆ ಸಂಗೀತಾ ಬಹಳ ಚೆನ್ನಾಗಿದೆ. ನಾನಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರ ಅಭಿಯನ ಚೆನ್ನಾಗಿದೆ. ನನಗೆ ಸಿನಿಮಾ ಬಹಳ ಟಚ್ ಆಯ್ತು. ಕೊನೆಯ ಹತ್ತು ನಿಮಿಷ ಭಾವುಕನಾಗಿಬಿಟ್ಟೆ, ಕಣ್ಣಲ್ಲಿ ನೀರು ಬಂತು. ನಾನಿ ನಾನು ನಿಮ್ಮ ಅಭಿಮಾನಿಯಾಗಿದ್ದೇನೆ’’ ಎಂದಿದ್ದಾರೆ.

‘ಹಾಯ್ ನಾನ್ನ’ ಸಿನಿಮಾದಲ್ಲಿ ಅಪ್ಪ-ಮಗಳ ಬಾಂಧವ್ಯ ತೋರಿಸಲಾಗಿದೆ. ಸಿನಿಮಾದ ನಾಯಕಿ ಮೃಣಾಲ್ ಠಾಕೂರ್ ಜೊತೆ ನಾನಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಹಾಯ್ ನಾನ್ನ’ಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ.

ಇದನ್ನೂ ಓದಿ:ರಾಮ್ ಚರಣ್, ನಾನಿ ಜೊತೆ ಸಿನಿಮಾ: ಶಿವಣ್ಣ ಹೇಳಿದ್ದು ಹೀಗೆ

ಇತ್ತೀಚಿಗಷ್ಟೆ ‘ಹಾಯ್ ನಾನ್ನ’ ಸಿನಿಮಾ ನೋಡಿದ್ದ ಅಲ್ಲು ಅರ್ಜುನ್ ಕೂಡ ಭಾವುಕರಾಗಿದ್ದರು. ಈ ಸಿನಿಮಾದಲ್ಲಿ ಅಪ್ಪ-ಮಗಳ ಸೆಂಟಿಮೆಂಟ್ ನನ್ನ ಮನಸ್ಸು ಮುಟ್ಟಿದೆ ಎಂದು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನಾನಿ ಮತ್ತು ಸಿನಿಮಾದ ಇತರ ನಟರಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದಿದ್ದರು.

‘ಹಾಯ್​ ನಾನ್ನ’ ಸಿನಿಮಾವನ್ನು ವೈರ ಎಂಟರ್ಟೈನ್​ಮೆಂಟ್ಸ್​ ಬ್ಯಾನರ್​ ಅಡಿಯಲ್ಲಿ ಮೋಹನ್​ ಚೆರುಕುರಿ ಮತ್ತು ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಿರ್ಮಿಸಿದ್ದಾರೆ. ಶೌರ್ಯುವ್​ ನಿರ್ದೇಶಿನ ಮಾಡಿದ್ದಾರೆ. ಸಾನು ಜಾನ್​ ವಗೀಸ್​ ಐಎಸ್​ಸಿ ಸಿನಿಮಾಟೊಗ್ರಫಿ, ಹೇಶಮ್​ ಅಬ್ದುಲ್​ ವಹಾಬ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರವೀಣ್​ ಆಂಥೋನಿ ಎಡಿಟಿಂಗ್ ಜವಾಬ್ದಾರಿ ನಿರ್ವಹಿಸಿದ್ದಾರೆ. ನಾನಿ, ಮೃಣಾಲ್​ ಜೊತೆ ಶ್ರುತಿ ಹಾಸನ್​ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂ ನಟ ಜಯರಾಮ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಂಡ ಚಿತ್ರ ಪಂಚ ಭಾಷೆಗಳಲ್ಲಿ ತೆರೆಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ