ಶಿವಣ್ಣನ ಘೋಸ್ಟ್​ಗೆ ಭಾರಿ ಬೇಡಿಕೆ: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಹಕ್ಕುಗಳು

Shiva Rajkumar Ghost: ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾದ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಹಕ್ಕುಗಳು ದೊಡ್ಡ ಸ್ಟುಡಿಯೋ ಒಂದಕ್ಕೆ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

ಶಿವಣ್ಣನ ಘೋಸ್ಟ್​ಗೆ ಭಾರಿ ಬೇಡಿಕೆ: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಹಕ್ಕುಗಳು
ಘೋಸ್ಟ್-ಶಿವರಾಜ್​ ಕುಮಾರ್

Updated on: Sep 24, 2023 | 9:27 AM

‘ಜೈಲರ್‘ (Jailer) ಸಿನಿಮಾದಲ್ಲಿ ಶಿವರಾಜ್ ಕುಮಾರ್ (Shiva Rajkumar) ಮಾಡಿರುವ ಸಣ್ಣ ಅತಿಥಿ ಪಾತ್ರವೇ ಅವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ನೀಡುಬಿಟ್ಟಿದೆ. ಶಿವರಾಜ್ ಕುಮಾರ್ ಸಿನಿಮಾಗಳಿಗೆ ಈಗ ಪರಭಾಷೆಗಳಲ್ಲಿಯೂ ಬೇಡಿಕೆ ಶುರುವಾಗಿದೆ. ಈ ನಡುವೆ ಶಿವರಾಜ್ ಕುಮಾರ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪಕ್ಕಾ ಕಮರ್ಶಿಯಲ್, ಮಾಫಿಯಾ ಕತೆಯುಳ್ಳ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ, ಸಿನಿಮಾದ ಹೆಸರು ‘ಘೋಸ್ಟ್’.

ಶಿವರಾಜ್ ಕುಮಾರ್ ನಟಿಸಿರುವ ‘ಘೋಸ್ಟ್’ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ನೆರೆ ರಾಜ್ಯಗಳಲ್ಲಿಯೂ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾದ ಟೀಸರ್, ಒಂದು ಹಾಡು ಮಾತ್ರವೇ ಈ ವರೆಗೂ ಬಿಡುಗಡೆ ಆಗಿದ್ದು, ಇವೆರಡರಿಂದಲೇ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದು ಸಿನಿಮಾಕ್ಕಾಗಿ ತುದಿ ಗಾಲಲ್ಲಿ ನಿಂತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾದ ಹಕ್ಕುಗಳಿಗೂ ಭಾರಿ ಬೇಡಿಕೆ ಶುರುವಾಗಿದ್ದು, ದೊಡ್ಡ ಮೊತ್ತಕ್ಕೆ ಹಕ್ಕುಗಳು ಮಾರಾಟವಾಗುತ್ತಿವೆ.

ಸಿನಿಮಾದ ಡಿಜಿಟಲ್ ಹಕ್ಕು, ಪ್ಯಾನ್ ಇಂಡಿಯಾ ಬಿಡುಗಡೆ ಹಕ್ಕು, ಕನ್ನಡೇತರ ಭಾಷೆಯ ಸ್ಯಾಟಲೈಟ್ ಹಕ್ಕುಗಳು ದೊಡ್ಡ ವಿತರಣೆ ಸಂಸ್ಥೆಯೊಂದಕ್ಕೆ ಭಾರಿ ಮೊತ್ತಕ್ಕೆ ಸೇಲ್ ಆಗಿದೆ. ಹೌದು, ಈ ಹಿಂದೆ, ‘ಆರ್​ಆರ್​ಆರ್’, ‘ಜವಾನ್’ ಸೇರಿದಂತೆ ಹಲವು ಬಿಗ್ ಬಜೆಟ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ವಿತರಣೆ ಮಾಡಿದ್ದ, ಹಕ್ಕುಗಳನ್ನು ಖರೀದಿಸಿರುವ ಪೆನ್ ಸ್ಟುಡಿಯೋಕ್ಕೆ ಘೋಸ್ಟ್ ಸಿನಿಮಾದ ಕೆಲವು ಹಕ್ಕುಗಳು ಮಾರಾಟವಾಗಿವೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?

‘ಘೋಸ್ಟ್’ ಸಿನಿಮಾದ ಕರ್ನಾಟಕೇತರ ಬಿಡುಗಡೆ ಹಕ್ಕು, ಕರ್ನಾಟಕೇತರ ಸ್ಯಾಟಲೈಟ್ ಹಕ್ಕು, ವಿದೇಶಿ ಬಿಡುಗಡೆ ಹಕ್ಕು, ಒಟಿಟಿ ಬಿಡುಗಡೆ ಹಕ್ಕುಗಳು ಪೆನ್ ಸ್ಟುಡಿಯೋಕ್ಕೆ ಮಾರಾಟವಾಗಿವೆ ಎನ್ನಲಾಗುತ್ತಿದೆ. ಅದೂ ಭಾರಿ ದೊಡ್ಡ ಮೊತ್ತಕ್ಕೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ಸಂದೇಶ್ ನಾಗರಾಜ್, ಕರ್ನಾಟಕದ ವಿತರಣೆ, ಕನ್ನಡದ ಆಡಿಯೋ ಹಕ್ಕುಗಳನ್ನು ಉಳಿಸಿಕೊಂಡು ಉಳಿದಿದ್ದೆಲ್ಲವನ್ನೂ ಪೆನ್ ಸ್ಟುಡಿಯೋಕ್ಕೆ ಮಾರಾಟ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಘೋಸ್ಟ್’ ಸಿನಿಮಾವನ್ನು ನಿರ್ದೇಶಕ, ನಟ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಗ್ಯಾಂಗ್​ಸ್ಟರ್ ಒಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಸಖತ್ ಸ್ಟೈಲಿಶ್ ಆಗಿ ಚಿತ್ರೀಕರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾವು ಅಕ್ಟೋಬರ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:01 pm, Sat, 23 September 23

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us