
ಇತ್ತೀಚೆಗೆ ಒಟಿಟಿ ವ್ಯಾಪ್ತಿ ಹೆಚ್ಚಾಗಿದೆ. ಹೀಗಾಗಿ, ಸಿನಿಮಾ ಬಹುಬೇಗನೆ ಚಿತ್ರಮಂದಿರದಿಂದ ಕಾಲ್ಕೀಳುತ್ತದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಬಾಚಿಕೊಳ್ಳಲು ತಂಡದವರು ಪ್ಲ್ಯಾನ್ ರೂಪಿಸುತ್ತಾರೆ. ಈ ಕಾರಣದಿಂದಲೇ ದುಬಾರಿ ಟಿಕೆಟ್ ಬೆಲೆ ನಿಗದಿ ಮಾಡುತ್ತಾರೆ. ಈ ಬಗ್ಗೆ ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. ಸಿನಿಮಾ ಟಿಕೆಟ್ ದರವನ್ನು ದುಬಾರಿಯಾಗಿ ನಿಗದಿ ಮಾಡಬಾರದು ಎಂದು ಹೇಳಿದ್ದಾರೆ. ಅವರು ಹೇಳಿದ ಮಾತುಗಳ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಎರಡು ವಾರ ಸಿನಿಮಾ ಹೋದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದು ತಪ್ಪು ಎಂದು ಶಿವಣ್ಣ ಅವರು ಹೇಳಿದ್ದಾರೆ. ‘ದುಡ್ಡು ದೋಚಿಕೊಳ್ಳುವ ರೀತಿ ಇರಬಾರದು. ಎಲ್ಲರೂ ನೋಡುವ ರೀತಿ ಇರಬೇಕು’ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಪ್ರೀಮಿಯರ್ ಶೋ ಹೊರತುಪಡಿಸಿದರೆ ‘45’ ಸಿನಿಮಾದ ಏಕಪರದೆ ಟಿಕೆಟ್ ದರ ಮೊದಲ ದಿನ 200 ರೂಪಾಯಿ ಹಾಗೂ 150 ರೂಪಾಯಿ ನಿಗದಿ ಮಾಡಲಾಗಿದೆ.
ಸಿನಿಮಾ 100 ದಿನ ಓಡಬಾರದು ಎಂದು ಎಲ್ಲಾದರೂ ಇದೆಯೇ? ಎಂದು ಶಿವಣ್ಣ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾ ನೂರು ದಿನ ಹೋಗುತ್ತದೆ ಎಂದು ಬೇಡ ಎಂದು ಹೇಳುವವರು ಯಾರು? ಸಿನಿಮಾ 100 ದಿನ ಹೋಗುತ್ತದೆ ಎಂದರೆ ಹೋಗಲಿ ತಪ್ಪೇನಿದೆ? ಸಿನಿಮಾ ಓಡಬೇಕಿ, ಓಡಿಸಬಾರದು’ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ: ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್‌ಕುಮಾರ್ ಹೀಗೆ ಹೇಳಿದ್ರು
‘ಈಗಿನ ಕಾಲದಲ್ಲಿ ಸಿನಿಮಾದ ಮೇಕಿಂಗ್ನಲ್ಲಿ ಬದಲಾವಣೆ ಆಗಿದೆ. ಹಾಗಂದ ಮಾತ್ರಕ್ಕೆ ಸಿನಿಮಾ ಅದೇ ಇದೆ. ನಾವು ಟೆಕ್ನಿಕಲಿ ಅಪ್ಗ್ರೇಡ್ ಆಗಿದ್ದೇವೆ. ಸಿನಿಮಾನ ಓಡಿಸಬಾರದು ಎಂದು ಹೇಳಿದ್ದಾರೆ’ ಅವರ ಮಾತಿಗೆ ಮೆಚ್ಚುಗೆ ಸಿಕ್ಕಿದೆ.
ಶಿವರಾಜ್‌ಕುಮಾರ್ ಅವರ ‘45’ ಸಿನಿಮಾ ಎಲ್ಲ ಕಡೆಗಳಲ್ಲಿ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ 24ರಂದು ಸಾಕಷ್ಟು ಕಡೆಗಳಲ್ಲಿ ಪ್ರೀಮಿಯರ್ ಶೋಗಳನ್ನು ಇಡಲಾಗಿದೆ. ಈ ಚಿತ್ರದ ಜೊತೆ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರವೂ ತೆರೆಗೆ ಬರುತ್ತಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Tue, 23 December 25