ರಾಜ್ಕುಮಾರ್ ಕುಟುಂಬಕ್ಕೆ (Rajumar Family) ಬೇರೆಯದೇ ಆದ ಘನತೆ ಇದೆ. ಸಿನಿಮಾ ರಂಗಕ್ಕೆ ಈ ಕುಟುಂಬ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ರಾಜ್ ಕುಟುಂಬದವರು ಸರಳತೆ ವಿಚಾರದಿಂದಲೂ ಎಲ್ಲರಿಗೂ ಮಾದರಿ ಆಗಿದ್ದಾರೆ. ರಾಜ್ಕುಮಾರ್ ಅವರಿಂದ ಹಿಡಿದು ಪುನೀತ್ ರಾಜ್ಕುಮಾರ್ವರೆಗೆ (Puneeth Rajkumar) ಎಲ್ಲರೂ ಸದಾ ಸರಳವಾಗಿ ನಡೆದುಕೊಂಡಿದ್ದಾರೆ. ಇವರು ಯಾರ ಜತೆಗೂ ಸೊಕ್ಕಿನ ಮಾತನಾಡಿದವರಲ್ಲ. ಶಿವರಾಜ್ಕುಮಾರ್ (Shivarajkumar) ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಜನ ಸಾಮಾನ್ಯರ ಜತೆ ಸಾಮಾನ್ಯರಂತೆ ಇದ್ದುಬಿಡುತ್ತಾರೆ. ಈ ಮೊದಲು ಕೂಡ ಇದು ಸಾಬೀತಾಗಿದೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿವರಾಜ್ಕುಮಾರ್ ಸಿಂಪ್ಲಿಸಿಟಿ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನ ವಿಚಾರ ಶಿವರಾಜ್ಕುಮಾರ್ ಅವರಿಗೆ ತೀವ್ರ ದುಃಖ ತಂದಿದೆ. ಕೆಲವು ತಿಂಗಳ ಕಾಲ ಶಿವರಾಜ್ಕುಮಾರ್ ಅವರು ಸಿನಿಮಾ ಕೆಲಸದಿಂದ ದೂರವೇ ಉಳಿದುಕೊಂಡಿದ್ದರು. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಪುನೀತ್ ಇಲ್ಲ ಎನ್ನುವ ನೋವನ್ನು ಒಪ್ಪಿಕೊಂಡು ಮುಂದೆ ಸಾಗುತ್ತಿದ್ದಾರೆ. ಶಿವಣ್ಣ ನೋವು ತೋಡಿಕೊಂಡ ಅನೇಕ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈಗ ಶಿವರಾಜ್ಕುಮಾರ್ ಅವರ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ.
ಶಿವರಾಜ್ಕುಮಾರ್ ಅವರು ತಮ್ಮ ಕಾರಿನಲ್ಲಿ ಹೊರಗೆ ತೆರಳಿದ್ದರು. ರಸ್ತೆ ಮಧ್ಯೆ ಕಾರು ನಿಲ್ಲಿಸಲಾಗಿತ್ತು. ಈ ವೇಳೆ ಕಾರಿನ ಗ್ಲಾಸ್ ಇಳಿದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತ ಮಹಿಳೆಯೊಬ್ಬರು ಶಿವರಾಜ್ಕುಮಾರ್ ಅವರನ್ನು ಲೈವ್ ಆಗಿ ನೋಡಿದ್ದಕ್ಕೆ ಖುಷಿಪಟ್ಟಿದ್ದಾರೆ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಸಂತೋಷವನ್ನು ಆ ಮಹಿಳೆ ಶಿವಣ್ಣನ ಎದುರು ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರಂತೆ ಅವರ ಉಭಯಕುಶಲೋಪರಿ ವಿಚಾರಿಸಿದ್ದಾರೆ ಶಿವರಾಜ್ಕುಮಾರ್.
ಮಹಿಳೆ: ಸರ್ ಹೇಗಿದ್ದೀರಾ?
ಶಿವರಾಜ್ಕುಮಾರ್: ಚೆನ್ನಾಗಿದ್ದೀನಿ.
ಮಹಿಳೆ: ಮೊದಲ ಬಾರಿಗೆ ನಿಮ್ಮನ್ನು ನೋಡ್ತಿರೋದು. ತುಂಬಾ ಖುಷಿ ಆಯ್ತು.
ಶಿವರಾಜ್ಕುಮಾರ್: ಥ್ಯಾಂಕ್ಸ್. ಊಟ ಆಯ್ತಾ? ಬಿರಿಯಾನಿನಾ?
ಮಹಿಳೆ: ಇಲ್ಲ ಸರ್. ನಿನ್ನೆ ಬಿರಿಯಾನಿ ಆಗಿತ್ತು.
ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಶಿವರಾಜ್ಕುಮಾರ್ ಸರಳತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರು ಮಹಿಳೆಯ ಉಭಯಕುಶಲೋಪರಿ ವಿಚಾರಿಸಿಕೊಂಡ ಪರಿಗೆ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಟ್ರೋಲ್ ಪೇಜ್ಗಳಲ್ಲಿ, ಶಿವಣ್ಣ ಅಭಿಮಾನಿ ಬಳಗದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ: ‘ಒಬ್ಬೊಬ್ಬರೇ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತದೆ’; ಶಿವರಾಜ್ಕುಮಾರ್
ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಮಾಡಿದ ಶಿವರಾಜ್ಕುಮಾರ್-ಗೀತಾ ದಂಪತಿ
Published On - 7:53 pm, Fri, 18 February 22