ವರಮಹಾಲಕ್ಷ್ಮೀ ಹಬ್ಬದ ದಿನವೇ ಗುಡ್​ ನ್ಯೂಸ್​ ನೀಡಿದ ಶಿವಣ್ಣ; ಅಚ್ಚರಿ ಮೂಡಿಸಿದ ಹೊಸ ಚಿತ್ರದ ಪೋಸ್ಟರ್​

| Updated By: ಮದನ್​ ಕುಮಾರ್​

Updated on: Aug 20, 2021 | 1:21 PM

ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ ‘ಬೈರಾಗಿ’ಯ ಕೆಲಸಗಳು ಚುರುಕಿನಿಂದ ಸಾಗುತ್ತಿವೆ. ಆ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕೃಷ್ಣ ಸಾರ್ಥಕ್​ ಅವರೇ ‘ಸತ್ಯಮಂಗಳ’ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ‘ಮಮ್ಮಿ’ ಖ್ಯಾತಿಯ ಲೋಹಿತ್​ ಇದರ ನಿರ್ದೇಶಕರು.

ವರಮಹಾಲಕ್ಷ್ಮೀ ಹಬ್ಬದ ದಿನವೇ ಗುಡ್​ ನ್ಯೂಸ್​ ನೀಡಿದ ಶಿವಣ್ಣ; ಅಚ್ಚರಿ ಮೂಡಿಸಿದ ಹೊಸ ಚಿತ್ರದ ಪೋಸ್ಟರ್​
ವರಮಹಾಲಕ್ಷ್ಮೀ ಹಬ್ಬದ ದಿನವೇ ಗುಡ್​ ನ್ಯೂಸ್​ ನೀಡಿದ ಶಿವಣ್ಣ
Follow us on

ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದಾರೆ ನಟ ಶಿವರಾಜ್​ಕುಮಾರ್​. ಎನರ್ಜಿ ವಿಚಾರದಲ್ಲಿ ಯುವ ಹೀರೋಗಳಿಗೂ ಪೈಪೋಟಿ ನೀಡುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾ ‘ನೀ ಸಿಗೋವರೆಗೂ’ ಸೆಟ್ಟೇರಿತು. ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನೂ ಆರಂಭಿಸಲಾಗಿದೆ. ಅದರ ಬೆನ್ನಲ್ಲೇ ಶಿವರಾಜ್​ಕುಮಾರ್​ ನಟನೆಯ ಮತ್ತೊಂದು ಹೊಸ ಸಿನಿಮಾ ಅನೌನ್ಸ್​ ಆಗಿದೆ. ಯುವ ನಿರ್ದೇಶಕ ಲೋಹಿತ್​ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದು ‘ಸತ್ಯಮಂಗಳ’ ಎಂಬ ಇಂಟರೆಸ್ಟಿಂಗ್​ ಶೀರ್ಷಿಕೆ ಇಡಲಾಗಿದೆ.

ಇಂದು (ಆ.20) ವರಮಹಾಲಕ್ಷ್ಮೀ ಹಬ್ಬ. ನಾಡಿನಾದ್ಯಂತ ಸಡಗರದಿಂದ ಹಬ್ಬ ಆಚರಿಸಲಾಗುತ್ತಿದೆ. ಈ ಶುಭದಿನದಂದೇ ಶಿವಣ್ಣನ ಹೊಸ ಸಿನಿಮಾ ಘೋಷಣೆ ಆಗಿರುವುದು ಫ್ಯಾನ್ಸ್​ಗೆ ಖುಷಿ ನೀಡಿದೆ. ಟೈಟಲ್​ ಅನೌನ್ಸ್​ ಮಾಡುವುದರ ಜೊತೆಗೆ ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ. ಕಾಡಿನ ಹಿನ್ನೆಲೆಯಲ್ಲಿ, ಗಾಂಭೀರ್ಯದಿಂದ ನಡೆದುಬರುತ್ತಿರುವ ಕರಿಚಿರತೆಯ ಖಡಕ್​ ಲುಕ್​ ಈ ಪೋಸ್ಟರ್​ನಲ್ಲಿ ಹೈಲೈಟ್​ ಆಗಿದೆ.

ಈ ಹಿಂದೆ ‘ಮಮ್ಮಿ’ ಮತ್ತು ‘ದೇವಕಿ’ ಸಿನಿಮಾಗಳನ್ನು ಮಾಡಿ ಗುರುತಿಸಿಕೊಂಡವರು ನಿರ್ದೇಶಕ ಲೋಹಿತ್​. ಈಗ ಅವರಿಗೆ ಶಿವರಾಜ್​ಕುಮಾರ್​ ಅವರಂಥ ಹಿರಿಯ ಸ್ಟಾರ್​ ಹೀರೋ ಜೊತೆ ಸಿನಿಮಾ ಮಾಡುವ ಚಾನ್ಸ್​ ಸಿಕ್ಕಿದೆ. ಲೋಹಿತ್​ ಹೇಳಿದ ಕಥೆ ಕೇಳಿ ಇಷ್ಟಪಟ್ಟಿರುವ ‘ಹ್ಯಾಟ್ರಿಕ್​ ಹೀರೋ’ ಶಿವಣ್ಣ ಈ ಸಿನಿಮಾಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ತಮ್ಮ ಮೊದಲೆರಡು ಸಿನಿಮಾಗಳಲ್ಲಿ ನಾಯಕಿಪ್ರಧಾನ ಕಥೆ ಆಯ್ಕೆ ಮಾಡಿಕೊಂಡಿದ್ದ ಲೋಹಿತ್​ ಅವರು ಮೂರನೇ ಸಿನಿಮಾದಲ್ಲಿ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ ‘ಬೈರಾಗಿ’ಯ ಕೆಲಸಗಳು ಚುರುಕಿನಿಂದ ಸಾಗುತ್ತಿವೆ. ಆ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕೃಷ್ಣ ಸಾರ್ಥಕ್​ ಅವರೇ ‘ಸತ್ಯಮಂಗಳ’ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರ ಅನೌನ್ಸ್​ ಆಗಿದ್ದು, 2022ರಲ್ಲಿ ಸೆಟ್ಟೇರಲಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಯಾರೆಲ್ಲ ನಟಿಸಲಿದ್ದಾರೆ? ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಶಿವರಾಜ್​ಕುಮಾರ್​ ಜೊತೆ ಸಿನಿಮಾ ಮಾಡಲು ಹಲವು ನಿರ್ದೇಶಕರು ಕಾಯುತ್ತಿದ್ದಾರೆ. ಅವರ 126ನೇ ಚಿತ್ರವನ್ನು ರಿಷಬ್​ ಶೆಟ್ಟಿ ನಿರ್ದೇಶಿಸಲಿದ್ದಾರೆ. ‘ವೇದ’ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಎ. ಹರ್ಷ ಆ್ಯಕ್ಷನ್​-ಕಟ್​ ಹೇಳಿರುವ ‘ಭಜರಂಗಿ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರದ ಮೂರನೇ​ ಸಾಂಗ್​ ರಿಲೀಸ್​ ಆಗಿದೆ.

ಇದನ್ನೂ ಓದಿ:

ಶಿವರಾಜ್​ಕುಮಾರ್​ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ

ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್​ ಹೀರೋ’ ಮಾತು