ಪತ್ನಿಯ ಅಜ್ಜಿ ಮನೆಯಲ್ಲಿ ಶಿವಣ್ಣ; ಶಿರಸಿಯ ಹತ್ತಿರ ಮಳಲ್​ಗಾಂವ್​ನಲ್ಲಿ ಫ್ಯಾಮಿಲಿ ಫೋಟೋ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಳಲಗಾಂವ್​ನಲ್ಲಿ ಶಿವಣ್ಣ ಕುಟುಂಬ ತೆರಳಿತ್ತು. ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪತ್ನಿಯ ಅಜ್ಜಿ ಮನೆಯಲ್ಲಿ ಶಿವಣ್ಣ; ಶಿರಸಿಯ ಹತ್ತಿರ ಮಳಲ್​ಗಾಂವ್​ನಲ್ಲಿ ಫ್ಯಾಮಿಲಿ ಫೋಟೋ
ಗೀತಾ ಫ್ಯಾಮಿಲಿ
Updated By: ರಾಜೇಶ್ ದುಗ್ಗುಮನೆ

Updated on: May 27, 2022 | 8:23 PM

ನಟ ಶಿವರಾಜ್​ಕುಮಾರ್ ಅವರ (Shivarjkumar) ಕೈಯಲ್ಲಿ ಹಲವು ಸಿನಿಮಾಗಳಿವೆ. ಹೊಸಹೊಸ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಲೇ ಇರುತ್ತಾರೆ. ವೇಗವಾಗಿ ಸಿನಿಮಾ ಮಾಡಿ ಮುಗಿಸುವುದರಲ್ಲಿ ಅವರು ಎತ್ತಿದ ಕೈ. ಸಿನಿಮಾ ಕೆಲಸಗಳ ಮಧ್ಯೆ ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಶಿವಣ್ಣ. ಇಂದು (ಮೇ 27) ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪ ಇರುವ ಪತ್ನಿ ಗೀತಾ ಶಿವರಾಜ್​​ಕುಮಾರ್​ (Geetha Shivarjkumar)ಕುಮಾರ್ ಅವರ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಈ ಫ್ಯಾಮಿಲಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.

ಶಿರಸಿಯಲ್ಲಿ ಭೀಮಣ್ಣ ಅವರಿಗೆ ಸೇರಿದ ಸುಪ್ರಿಯಾ ಇಂಟರ್​ನ್ಯಾಷನಲ್ ಹೋಟೆಲ್ ಉದ್ಘಾಟನೆ ಮೇ 26ರಂದು ನಡೆದಿದೆ. ಇದಕ್ಕಾಗಿ ಶಿವಣ್ಣ ಅವರು ಶಿರಸಿಗೆ ತೆರಳಿದ್ದಾರೆ. ಬಂಗಾರಪ್ಪ ಅವರ ಮಗಳುಗೀತಾ ಶಿವರಾಜ್​ಕುಮಾರ್.  ಬಂಗಾರಪ್ಪ ಮದುವೆ ಆಗಿದ್ದು ಭೀಮಣ್ಣ ಅವರ ಅಕ್ಕನನ್ನು. ಭೀಮಣ್ಣನ ಮನೆ ಗೀತಾ ಶಿವರಾಜ್​ಕುಮಾರ್​ಗೆ ಅಜ್ಜಿಯ ಮನೆ. ಹೀಗಾಗಿ, ಅಜ್ಜಿಮನೆಯಲ್ಲಿ ಒಂದಷ್ಟು ಸಮಯ ಕಳೆದು ಬಂದಿದ್ದಾರೆ ಗೀತಾ ಶಿವರಾಜ್​ಕುಮಾರ್.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಳಲಗಾಂವ್​ನಲ್ಲಿ ಶಿವಣ್ಣ ಕುಟುಂಬ ತೆರಳಿತ್ತು. ಭೀಮಣ್ಣ ಅವರ ಮೂಲ ಮನೆ ಇಲ್ಲಿಯೇ ಇದೆ. ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫ್ಯಾಮಿಲಿ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
ಕನ್ನಡದ ‘ಟಾಕೀಸ್​’ ಲಾಂಚ್​ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು
‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ
ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ
ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

ಇದನ್ನೂ ಓದಿ: ‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

ಶಿವರಾಜ್​ಕುಮಾರ್ ಅವರು ಮೇ 26ರಂದು ಹೋಟೆಲ್ ಉದ್ಘಾಟನೆ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೋಟೆಲ್ ಉದ್ಘಾಟನೆ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ್ದ ಅವರು, ‘ಬೈರಾಗಿ’ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು. ‘ಬೈರಾಗಿ ಹುಲಿವೇಷದ ಕುರಿತ ಸಿನಿಮಾ. ಇದು ಪ್ಯಾನ್ ಇಂಡಿಯಾ ಚಿತ್ರವಲ್ಲ. ಕನ್ನಡದಲ್ಲಿ ಮಾತ್ರ ಮೂಡಿ ಬರುತ್ತಿದೆ’ ಎಂದು ಅವರು ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:11 pm, Fri, 27 May 22