Shivaram: ಶಿವರಾಂ ನೆನೆದು ಭಾವುಕರಾದ ಹಿರಿಯ ನಟಿಯರು; ಭಾರತಿ, ಜಯಮಾಲ, ಸುಮಲತಾ ಹೇಳಿದ್ದೇನು?

| Updated By: ಮದನ್​ ಕುಮಾರ್​

Updated on: Dec 05, 2021 | 1:06 PM

Shivaram Funeral: ಶಿವರಾಂ ಅವರು ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ವ್ಯಕ್ತಿ ಆಗಿದ್ದರು. ಚಂದನವನದಲ್ಲಿ ಹಿರಿಯಣ್ಣನಂತೆ ಬದುಕಿದ್ದ ಅವರ ವ್ಯಕ್ತಿತ್ವವನ್ನು ಎಲ್ಲರೂ ಕೊಂಡಾಡಿದ್ದಾರೆ.

Shivaram: ಶಿವರಾಂ ನೆನೆದು ಭಾವುಕರಾದ ಹಿರಿಯ ನಟಿಯರು; ಭಾರತಿ, ಜಯಮಾಲ, ಸುಮಲತಾ ಹೇಳಿದ್ದೇನು?
ಭಾರತಿ, ಶಿವರಾಂ, ಜಯಮಾಲ, ಸುಮಲತಾ
Follow us on

ಹಿರಿಯ ನಟ ಶಿವರಾಂ (Shivaram) ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಶಿವರಾಂ ಜತೆ ಒಡನಾಟ ಹೊಂದಿದ್ದ ಎಲ್ಲರೂ ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್ (Bharathi Vishnuvardhan), ಜಯಮಾಲಾ ((Jayamala), ಸುಮಲತಾ ಅಂಬರೀಷ್ (Sumalatha Ambareesh)​,​ ತಾರಾ ಅನುರಾಧ ಮುಂತಾದವರು ಶಿವರಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಚಂದನವನದಲ್ಲಿ ಹಿರಿಯಣ್ಣನಂತೆ ಬದುಕಿದ್ದ ಅವರ ವ್ಯಕ್ತಿತ್ವವನ್ನು ಎಲ್ಲರೂ ಕೊಂಡಾಡಿದ್ದಾರೆ. ಶಿವರಾಂ ಅವರು ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ವ್ಯಕ್ತಿ ಆಗಿದ್ದರು. ಅವರಿಂದ ಅನೇಕರಿಗೆ ಸಹಾಯ ಆಗಿದೆ. ಅಧ್ಯಾತ್ಮದ ವಿಚಾರದಲ್ಲೂ ಅವರು ಹಲವರಿಗೆ ಮಾರ್ಗದರ್ಶನ ನೀಡಿದ್ದರು. ಅವರ ಬಗ್ಗೆ ಕನ್ನಡದ ಹಿರಿಯ ನಟಿಯರು ಹಂಚಿಕೊಂಡ ಮಾತುಗಳು ಇಲ್ಲಿವೆ..

ಸುಮಲತಾ ಅಂಬರೀಷ್​​ ನುಡಿ ನಮನ ಸಲ್ಲಿಸಿದ್ದಾರೆ. ‘ಶಿವರಾಮಣ್ಣ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅಂಬರೀಷ್​ ಜೊತೆಗೆ ನಾಗರಹಾವು ಸಿನಿಮಾದಲ್ಲಿ ಮೊದಲ ಬಾರಿ‌ ನಟಿಸಿದ್ರು. ಇತ್ತೀಚೆಗೆ ಕರೆ ಮಾಡಿ ಮಾತನಾಡಿದ್ರು. ಕೊರೊನಾ ಬಂದು ಎಲ್ಲರೂ ದೂರ ಆಗಿದ್ದೇವೆ, ಒಟ್ಟಿಗೆ ಒಮ್ಮೆ ಸಿಗೋಣ ಅಂತ ಹೇಳಿದ್ರು. ಅದೇ ಕೊನೆ ಮಾತಾಗಿ ಹೋಗಿದೆ. ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಒಂದು ಯುಗ ಮುಗಿದುಹೋಗಿದೆ. ಅವರ ಆತ್ಮಕ್ಕೆ ಶಾಂತಿ‌ ಸಿಗಲಿ’ ಎಂದು ಸುಮಲತಾ ಅಂಬರೀಷ್​ ಹೇಳಿದ್ದಾರೆ.

‘ಯಾವುದೇ ಸಭೆ, ಸಮಾರಂಭಗಳಲ್ಲಿ ಶಿವರಾಂ ಇರುತ್ತಿದ್ದರು. ಎಲ್ಲರಿಗೂ ಸಹಾಯ ಮಾಡೋದು ಅವರ ದೊಡ್ಡ ಗುಣ ಆಗಿತ್ತು. ಕಲಾವಿದರು ಸಂಕಷ್ಟದಲ್ಲಿದ್ದಾಗ ನೆರವಿಗೆ ಬರುತ್ತಿದ್ದರು. ತನಗಾಗಿ ಏನನ್ನೂ ಕೇಳಿಕೊಂಡಿಲ್ಲ. ಬಹಳ ಸ್ವಾಭಿಮಾನಿ ಆಗಿದ್ದರು. ಶಿವರಾಮಣ್ಣ ದೇವರ ಆರಾಧನೆ ಮಾಡುವಾಗಲೇ ಈ ಘಟನೆ ನಡೆದಿದೆ. ದೇವರೇ ಅವರನ್ನು ಕರೆಸಿಕೊಂಡಿದ್ದಾನೆ’ ಎಂದು ಜಯಮಾಲ ಹೇಳಿದ್ದಾರೆ.

ಇದನ್ನೂ ಓದಿ:

‘ಶಿವರಾಂ ನಡೆದಾಡುವ ಅಯ್ಯಪ್ಪ ಸ್ವಾಮಿ ಆಗಿದ್ರು; ಅವರಿಗೆ ಹಲವು ಅಭಿಷೇಕ ಮಾಡ್ತೀವಿ’: ಡಾ. ಎನ್​. ಜಯರಾಂ

‘ದೇವ್ರನ್ನ ನಂಬಬೇಕೋ ಬೇಡವೋ ಎಂಬಂತಾಗಿದೆ’; ಅಯ್ಯಪ್ಪ ಭಕ್ತ ಶಿವರಾಂ ನಿಧನಕ್ಕೆ ಬೆಂಗಳೂರು ನಾಗೇಶ್​ ಕಂಬನಿ