
ಕನ್ನಡದ ನಟಿ ಶ್ರೀಲೀಲಾ (Sree Leela) ಅವರು ಟಾಲಿವುಡ್ನಲ್ಲಿ ಆಳ್ವಿಕೆ ನಡೆಸಿ, ಬಾಲಿವುಡ್ನತ್ತ ಮುಖ ಮಾಡಿದ್ದಾರೆ. ಅವರು ಅಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರಿಗೆ ಬಾಲಿವುಡ್‌ನಿಂದ ಮತ್ತೊಂದು ಬಂಪರ್ ಆಫರ್ ಬಂದಿದೆ. ಹಿಂದಿಯ ಸ್ಟಾರ್ ಹೀರೋ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ರಶ್ಮಿಕಾ ಮಂದಣ್ಣ ರೀತಿ ಅವರು ಮುಂದೆ ಬಾಲಿವುಡ್ನಲ್ಲೇ ಸೆಟಲ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
‘ಡ್ರೀಮ್ ಗರ್ಲ್’ ಖ್ಯಾತಿಯ ರಾಜ್ ಶಾಂಡಿಲ್ಯ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ ಸಿದ್ದಾರ್ಥ್ ಮಲ್ಹೋತ್ರ ಅವರು ಹೀರೋ. ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಮೂಲಕ ಶ್ರೀಲೀಲಾಗೆ ದೊಡ್ಡ ಆಫರ್ ಒಂದು ಸಿಕ್ಕಂತೆ ಆಗಿದೆ.
‘ಡ್ರೀಮ್ ಗರ್ಲ್’ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಪಕ್ಕಾ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ರೀತಿಯ ಸಿನಿಮಾಗಳ ಮೂಲಕ ನಿರ್ದೇಶಕ ರಾಜ್ ಅವರು ಫೇಮಸ್ ಆಗಿದ್ದಾರೆ. ಈಗ ಬರಲಿರೋ ಸಿನಿಮಾದಲ್ಲೂ ಭರ್ಜರಿ ಕಾಮಿಡಿ ಇರಲಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಈ ಕಾರಣಕ್ಕೆ ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿವೆ.
ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ?
ಶ್ರೀಲೀಲಾ ಅವರು ಬಾಲಿವುಡ್ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಶಿಕಿ 3’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾದ ಶೂಟ್ ನಡೆಯುತ್ತಿದೆ. ಅವರನ್ನು ಇತ್ತೀಚೆಗೆ ಸಿನಿಮಾ ಒಂದರಿಂದ ಹೊರಕ್ಕೆ ಇಡಲಾದ ಬಗ್ಗೆ ವರದಿ ಆಗಿತ್ತು. ಹೀಗಿರುವಾಗಲೇ ಅವರಿಗೆ ಮತ್ತೆ ಬೇಡಿಕೆ ಬಂದಿದೆ. ಅಂದಹಾಗೆ, ರಶ್ಮಿಕಾ ಹಾಗೂ ಸಿದ್ದಾರ್ಥ್ ಈ ಮೊದಲು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಸದ್ದು ಮಾಡಿದವರು. ಆ ಬಳಿಕ ಅವರಿಗೆ ಟಾಲಿವುಡ್ನಲ್ಲಿ ಆಫರ್ ಬಂತು. ನಂತರ ಅವರು ಬಾಲಿವುಡ್ನಲ್ಲಿ ಸಿನಿಮಾ ಮಾಡಿದರು. ಈಗ ಅವರು ಬಾಲಿವುಡ್ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಕೂಡ ಇಂಥದ್ದೇ ಆಫರ್ ಪಡೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.