ಮದುವೆ ಬಳಿಕ ಇಂಡಸ್ಟ್ರಿಯಲ್ಲಿ ಎದುರಾದ ಕಷ್ಟಗಳೇನು? ಶ್ವೇತಾ ಶ್ರೀವಾತ್ಸವ್ ವಿವರಿಸಿದ್ದು ಹೀಗೆ
ಶ್ವೇತಾ ಕುಟುಂಬದ ಜೊತೆಯೂ ಗಮನ ಹರಿಸುತ್ತಿದ್ದಾರೆ. ತಾಯಿ ಆದ ಬಳಿಕ ಅವರು ಎದುರಿಸಿದ ಕಷ್ಟಗಳ ಬಗ್ಗೆ ಶ್ವೇತಾ ಮಾತನಾಡಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsav) ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ತಮ್ಮ ಪಾಲಿಗೆ ಬಂದ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರು ಕುಟುಂಬದ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರು ಈಗ ಕೆಲ ವಿಚಾರಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ತಾಯಿ ಆದ ಬಳಿಕ ಚಿತ್ರರಂಗದಲ್ಲಿ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಶ್ವೇತಾ ಶ್ರೀವಾತ್ಸವ್ ಅವರು ‘ಸೈಬರ್ ಯುಗದೋಳ್ ನವಯುವ ಮಧುರ ಪ್ರೇಮ ಕಾವ್ಯಂ’ ಚಿತ್ರದ ಮೂಲಕ ನಾಯಕಿ ಆಗಿ ಕಾಣಿಸಿಕೊಂಡರು. ಈ ಸಿನಿಮಾ 2012ರಲ್ಲಿ ರಿಲೀಸ್ ಆಯಿತು. ಆ ಬಳಿಕ ರಿಲೀಸ್ ಆಗಿದ್ದು ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ ಚಿತ್ರ. ಇದರಲ್ಲಿ ಅವರು ನಟಿಸಿದರು. ಆ ಬಳಿಕ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಅವರು ಕುಟುಂಬದ ಕಡೆಗೂ ಗಮನ ಹರಿಸುತ್ತಿದ್ದಾರೆ. ತಾಯಿ ಆದ ಬಳಿಕ ಅವರು ಎದುರಿಸಿದ ಕಷ್ಟಗಳ ಬಗ್ಗೆ ಶ್ವೇತಾ ಮಾತನಾಡಿದ್ದಾರೆ.
‘ತಾಯಿ ಆದ ಬಳಿಕ ನಾವು ಪ್ರಮುಖ ಪಾತ್ರಗಳಿಗೆ ಯೋಗ್ಯರಲ್ಲ ಎಂಬ ಭಾವನೆಯನ್ನು ನಮ್ಮ ಇಂಡಸ್ಟ್ರಿ ಉಂಟು ಮಾಡುತ್ತದೆ. ಆದರೆ ತಾಯಿ ಆಗೋದು ನಿಮಗೆ ಬಹಳಷ್ಟು ವಿಚಾರಗಳನ್ನು ಕಲಿಸುತ್ತದೆ. ತಾಳ್ಮೆ ಬರುತ್ತದೆ. ನಾನು ತಾಯಿಯಾದ ನಂತರ ಮೂರು ಸಿನಿಮಾ ಮಾಡಿದ್ದೇನೆ. ಎರಡರಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ತಾಯಂದಿರು ತಮ್ಮಲ್ಲಿ ನಂಬಿಕೆ ಇಡಬೇಕು. ನಮ್ಮಲ್ಲಿ ವಿಶೇಷ ಶಕ್ತಿ ಇದೆ’ ಎಂದು ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಮೇ 15ರಂದು ತಾಯಂದಿರ ದಿನಾಚರಣೆ ಆಚರಿಸಲಾಯಿತು. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ತಾಯಿ ಆಗುವುದಕ್ಕೂ ಮೊದಲು ನನ್ನ ಅಮ್ಮನ ಕಾರ್ಯವನ್ನು ಶ್ಲಾಘಿಸುತ್ತಿದೆ. ನಾನು ತಾಯಿ ಆದ ಬಳಿಕ ತಾಯಿಯ ಮತ್ತೊಂದಷ್ಟು ಜವಾಬ್ದಾರಿಯನ್ನು ತಿಳಿದುಕೊಂಡೆ’ ಎಂದಿದ್ದಾರೆ ಅವರು.
ಮೇ 14ರಂದು ತಾಯಂದಿರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಅನೇಕ ಸೆಲೆಬ್ರಿಟಿಗಳು ತಮ್ಮ ತಾಯಂದಿರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಶ್ವೇತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಗಳು ಮತ್ತು ತಾಯಿಯ ಪೋಸ್ಟ್ ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Mon, 15 May 23