ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್) 2023 (SIIMA 2023) ಮತ್ತೆ ಬಂದಿದೆ. ದಕ್ಷಿಣ ಭಾರತದ ಸಿನಿಮಾರಂಗಗಳು ಸೇರಿ ತಮ್ಮಲ್ಲೇ ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿ ಅವನ್ನು ಗುರುತಿಸಿ ಪ್ರಶಸ್ತಿ ನೀಡುವ ಸೈಮಾಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ದಕ್ಷಿಣ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಮಯದಲ್ಲಿ ಸೈಮಾ 2023 ಮೇಲೆ ವಿಶ್ವದ ಕಣ್ಣಿದೆ. ಇದೀಗ ಸೈಮಾ 2023ರ ಪ್ರಶಸ್ತಿ ರೇಸಿನಲ್ಲಿರುವ ಸಿನಿಮಾಗಳ ನಾಮಿನೇಷನ್ (Nomination) ಪಟ್ಟಿ ಇದೀಗ ಬಿಡುಗಡೆ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂನ ಯಾವ ಸಿನಿಮಾಗಳು ಪ್ರಶಸ್ತಿ ರೇಸ್ನಲ್ಲಿವೆ? ಇಲ್ಲಿದೆ ಮಾಹಿತಿ.
ಕನ್ನಡದ ಅತ್ಯುತ್ತಮ ಪ್ರಶಸ್ತಿ ವಿಭಾಗದಲ್ಲಿ ಐದು ಸಿನಿಮಾಗಳು ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ‘ಕೆಜಿಎಫ್ 2’, ‘ಕಾಂತಾರ’, ‘ಲವ್ ಮಾಕ್ಟೆಲ್ 2’, ‘777 ಚಾರ್ಲಿ’, ‘ವಿಕ್ರಾಂತ್ ರೋಣ’ ಸಿನಿಮಾಗಳು ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ಪರಸ್ಪರ ಸ್ಪರ್ಧಿಸುತ್ತಿವೆ. ಒಂದು ಸಿನಿಮಾ ಅತ್ಯುತ್ತಮ ಕನ್ನಡ ಸಿನಿಮಾ ಆಗಿ ಆಯ್ಕೆ ಆಗಲಿದೆ.
ಇನ್ನು ತೆಲುಗು ವಿಭಾಗದಲ್ಲಿ, ‘ಡಿಜೆ ಟಿಲ್ಲು 2’, ‘ಕಾರ್ತಿಕೇಯ 2’, ಬೆಂಗಳೂರಿನ ಹೆಮ್ಮೆಯ ಪುತ್ರ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ ‘ಮೇಜರ್’, ಆಸ್ಕರ್ ಗೆದ್ದ ‘ಆರ್ಆರ್ಆರ್’, ‘ಸೀತಾ ರಾಮಂ’ ಸಿನಿಮಾಗಳು ಪರಸ್ಪರ ಸ್ಪರ್ಧೆಯಲ್ಲಿದ್ದು, ‘ಆರ್ಆರ್ಆರ್’ ಹಾಗೂ ‘ಸೀತಾರಾಮಂ’ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ.
ಇದನ್ನೂ ಓದಿ:BIFFES: ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಸೆಣೆಸಲಿರುವ ಕನ್ನಡ ಸಿನಿಮಾಗಳು
ತಮಿಳು ಸಿನಿಮಾಗಳ ವಿಭಾಗದಲ್ಲಿ, ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್1’, ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’, ‘ತಿರುಚಿತ್ರಬಲಂ’, ಕಮಲ್ ಹಾಸನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ವಿಕ್ರಂ’, ‘ಲವ್ ಟುಡೆ’ ಸಿನಿಮಾಗಳು ಪ್ರಶಸ್ತಿಗಾಗಿ ಸೆಣೆಸಲಿವೆ.
ಮಲಯಾಳಂ ಸಿನಿಮಾ ವಿಭಾಗದಲ್ಲಿ ಮಮ್ಮುಟಿ ನಟನೆಯ ‘ಭೀಷ್ಮ ಪರ್ವಂ’, ಮೋಹನ್ಲಾಲ್ ಪುತ್ರನ ‘ಹೃದಯಂ’, ‘ನಾನ್ ತಾನ್ ಕೇಸ್ ಕುಡು’, ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಜನ ಗಣ ಮನ’, ‘ತಲ್ಲುಮಾಲ’ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಸೈಮಾ 2023 ಪ್ರಶಸ್ತಿ ಪ್ರದಾನ ಸಮಾರಂಭವು 15 ಹಾಗೂ 16 ರಂದು ದುಬೈನಲ್ಲಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ