ಸಿಎಂ ಸಿದ್ದರಾಮಯ್ಯ ಬಯೋಪಿಕ್ ಸಿದ್ಧತೆ ಎಲ್ಲಿಯವರೆಗೆ ಬಂತು? ಹೊರಬಿತ್ತು ಹೊಸ ವಿಚಾರ
Siddaramaiah Biopic: ಸಿದ್ದರಾಮಯ್ಯ ಬಯೋಪಿಕ್ಗೆ ‘ಲೀಡರ್ ರಾಮಯ್ಯ’ ಎನ್ನುವ ಶೀರ್ಷಿಕೆ ಇಡಲಾಗಿದೆ ಎಂದು ತಿಳಿದುಬಂದಿದೆ. ಸತ್ಯರತ್ನಂ ಎಂಬುವವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ (Siddaramaiah) ಅವರ ಕುರಿತು ಬಯೋಪಿಕ್ ಸಿದ್ಧಗೊಳ್ಳಲಿದೆ ಎಂಬ ವಿಚಾರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಘೋಷಣೆ ಆಗಿತ್ತು. ಆ ಬಳಿಕ ಈ ವಿಚಾರ ಸೈಲೆಂಟ್ ಆಗಿತ್ತು. ಹಾಗಂತ ಸಿನಿಮಾ ಕೆಲಸಗಳು ನಿಂತಿಲ್ಲ. ಈ ಚಿತ್ರಕ್ಕೆ ಭರದ ಸಿದ್ಧತೆ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡದಿಂದ ಈ ಬಗ್ಗೆ ಅಪ್ಡೇಟ್ ಸಿಗುವ ಸಾಧ್ಯತೆ ಇದೆ. ಈ ವಿಚಾರ ಕೇಳಿ ಸಿದ್ದರಾಮಯ್ಯ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ವಿಶೇಷ ಎಂದರೆ ಈ ಚಿತ್ರ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಬಯೋಪಿಕ್ಗೆ ‘ಲೀಡರ್ ರಾಮಯ್ಯ’ ಎನ್ನುವ ಶೀರ್ಷಿಕೆ ಇಡಲಾಗಿದೆ ಎಂದು ತಿಳಿದುಬಂದಿದೆ. ಸತ್ಯರತ್ನಂ ಎಂಬುವವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ, ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಇದೆ ಎಂದು ಈ ಮೊದಲು ಹೇಳಲಾಗಿತ್ತು. ಈಗ ತಂಡ ವಿಜಯ್ ಸೇತುಪತಿ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ. ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗೋದು ಬಾಕಿ ಉಳಿದಿದೆಯಂತೆ.
ಇದನ್ನೂ ಓದಿ: ರಾಜ್ಯದಲ್ಲಿ ಆನ್‌ಲೈನ್ ಗೇಮ್ ನಿಷೇಧಕ್ಕೆ ಚಿಂತನೆ; ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು
ಇತ್ತೀಚೆಗೆ ಚಾಪ್ಟರ್ 1 ಹಾಗೂ ಚಾಪ್ಟರ್ 2 ಮೂಲಕ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದನ್ನು ‘ಲೀಡರ್ ರಾಮಯ್ಯ’ ತಂಡ ಕೂಡ ಅನುಸರಿಸಲಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಏಕಾಏಕಿ ನಾಯಕರಾದವರಲ್ಲ. ಹೀಗಾಗಿ, ಅವರ ಬಾಲ್ಯ, ಕಾಲೇಜು ದಿನಗಳು, ಲಾಯರ್ ಆಗಿದ್ದ ದಿನಗಳು, ರಾಜಕೀಯಕ್ಕೆ ಬರಲು ಅವರಿಗೆ ಸ್ಫೂರ್ತಿ ನೀಡಿದ ವಿಚಾರಗಳು ಸಿನಿಮಾದಲ್ಲಿ ಇರಲಿವೆ. ಬಾಲ್ಯ, ಹರೆಯದ ದಿನಗಳ ಪಾತ್ರವನ್ನು ಬೇರೆ ಕಲಾವಿದರು ನಿರ್ವಹಿಸಲಿದ್ದಾರೆ. ಸಿದ್ದರಾಮಯ್ಯ ಲಾಯರ್ ಆದ ಬಳಿಕ ವಿಜಯ್ ಸೇತುಪತಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ