ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಸೆಪ್ಟೆಂಬರ್ 15ರ ರಾತ್ರಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ (SIIMA Awards 2023) ನಡೆದಿದೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಅನೇಕ ತಾರೆಯರು ಭಾಗಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು, ತಂತ್ರಜ್ಞರು ಸೈಮಾ ಪ್ರಶಸ್ತಿ ಪಡೆದು ಬೀಗಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾಗೆ ‘ಅತ್ತುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟ’ (ಕ್ರಿಟಿಕ್ಸ್) ಅವಾರ್ಡ್ ಪಡೆದಿದ್ದಾರೆ. ಅದೇ ಸಿನಿಮಾದಲ್ಲಿ ನಟಿಸಿದ ಅಚ್ಯುತ್ ಕುಮಾರ್ ಅವರು ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿನ ಅಭಿನಯಕ್ಕೆ ಯಶ್ (Yash) ‘ಅತ್ಯುತ್ತಮ ನಟ’ ಹಾಗೂ ಶ್ರೀನಿಧಿ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ.
‘ಗಾಳಿಪಟ 2’ ಸಿನಿಮಾದಲ್ಲಿನ ನಟನೆಗೆ ದಿಗಂತ್ ಅವರು ‘ಅತ್ಯುತ್ತಮ ಪೋಷಕ ನಟ’ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಕಾಶ್ ತುಮ್ಮಿನಾಡು ಅವರಿಗೆ ‘ಕಾಂತಾರ’ ಚಿತ್ರಕ್ಕಾಗಿ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸಿಕ್ಕಿದೆ. ‘ಡೊಳ್ಳು’ ಚಿತ್ರದ ಡೈರೆಕ್ಟರ್ ಸಾಗರ್ ಪುರಾಣಿಕ್ ಅವರು ‘ಅತ್ಯುತ್ತಮ ಚೊಚ್ಚಲ ನಿರ್ದೇಶಕ’ ಪ್ರಶಸ್ತಿ ಪಡೆದಿದ್ದಾರೆ. ‘ಕಾಂತಾರ’ ಸಿನಿಮಾಗಾಗಿ ಅಜನೀಶ್ ಬಿ. ಲೋಕನಾಥ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಸಿನಿಮಾದ ‘ಸಿಂಗಾರ ಸಿರಿಯೇ..’ ಹಾಡಿಗಾಗಿ ವಿಜಯ್ ಪ್ರಕಾಶ್ ಅವರು ಅತ್ಯುತ್ತಮ ಗಾಯಕ ಹಾಗೂ ಪ್ರಮೋದ್ ಮರವಂತೆ ಅವರು ಅತ್ಯುತ್ತಮ ಗೀತಸಾಹಿತಿ ಅವಾರ್ಡ್ ಪಡೆದಿದ್ದಾರೆ.
Our critics can’t stop raving about @shetty_rishab, the deserving winner of the Best Actor in a Leading Role – Critics (Kannada) award for his incredible performance in Kantara!#NEXASIIMA #DanubeProperties #A23Rummy #HonerSignatis #Flipkart #ParleHideAndSeek #LotMobiles… pic.twitter.com/aMOVJ6MwvB
— SIIMA (@siima) September 15, 2023
ಝಗಮಗಿಸುವ ವೇದಿಕೆಯಲ್ಲಿ 2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. 2022ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’, ‘ವಿಕ್ರಾಂತ್ ರೋಣ’ ಮುಂತಾದ ಸಿನಿಮಾಗಳ ನಡುವೆ ಪೈಪೋಟಿ ನಡೆಯಿತು. ಈ ಬಾರಿ ಸೈಮಾ ಅವಾರ್ಡ್ ಗೆದ್ದವರ ಪೂರ್ತಿ ಪಟ್ಟಿ ಇಲ್ಲಿದೆ..
ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್ 2, 777 ಚಾರ್ಲಿ
ಅತ್ಯುತ್ತಮ ನಟ: ಯಶ್ (ಕೆಜಿಎಫ್: ಚಾಪ್ಟರ್ 2)
ಅತ್ಯುತ್ತಮ ನಟಿ: ಶ್ರೀನಿಧಿ ಶೆಟ್ಟಿ (ಕೆಜಿಎಫ್: ಚಾಪ್ಟರ್ 2)
ಅತ್ಯುತ್ತಮ ನಟ (ಕ್ರಿಟಿಕ್ಸ್): ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ಸಿನಿಮಾ: 777 ಚಾರ್ಲಿ (ನಿರ್ದೇಶನ- ಕಿರಣ್ ರಾಜ್)
ಅತ್ಯುತ್ತಮ ಸಂಗೀತ: ಅಜನೀಶ್ ಬಿ. ಲೋಕನಾಥ್ (ಕಾಂತಾರ)
ಅತ್ಯುತ್ತಮ ಹಾಸ್ಯನಟ: ಪ್ರಕಾಶ್ ತುಮ್ಮಿನಾಡು (ಕಾಂತಾರ)
ಅತ್ಯುತ್ತಮ ಗಾಯಕ: ವಿಜಯ್ ಪ್ರಕಾಶ್ (ಸಿಂಗಾರ ಸಿರಿಯೇ)
ಅತ್ಯುತ್ತಮ ಪೋಷಕ ನಟ: ದಿಗಂತ್ ಮಂಚಾಲೆ (ಗಾಳಿಪಟ 2)
ಅತ್ಯುತ್ತಮ ಖಳನಟ: ಅಚ್ಯುತ್ ಕುಮಾರ್ (ಕಾಂತಾರ)
ಇದನ್ನೂ ಓದಿ: ಮೆಲ್ಬರ್ನ್‌ನ ಭಾರತೀಯ ಚಲನಚಿತ್ರೋತ್ಸವ 2023: ನಾಮಿನೇಟ್ ಆದ ‘ಕಾಂತಾರ’, ‘ಹದಿನೇಳೆಂಟು’ ಸಿನಿಮಾ
ಅತ್ಯುತ್ತಮ ಗಾಯಕಿ: ಸುನಿಧಿ ಚೌಹಾಣ್ (ರಾರಾ ರಕ್ಕಮ್ಮ)
ಅತ್ಯುತ್ತಮ ಹೊಸ ನಟ: ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)
ಅತ್ಯುತ್ತಮ ಛಾಯಾಗ್ರಹಣ: ಭುವನ್ ಗೌಡ (ಕೆಜಿಎಫ್ 2)
ಅತ್ಯುತ್ತಮ ನಟಿ (ಕ್ರಿಟಿಕ್ಸ್): ಸಪ್ತಮಿ ಗೌಡ (ಕಾಂತಾರ)
ಇದನ್ನೂ ಓದಿ: ಆಸ್ಕರ್ಗೆ ಕಾಂತಾರ ಪೈಪೋಟಿ, ಕಮಲ್ ಪತ್ರ ಸೇರಿದಂತೆ ಅನೇಕ ವಿಚಾರಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ): ರಕ್ಷಿತ್ ಶೆಟ್ಟಿ (777 ಚಾರ್ಲಿ)
ಅತ್ಯುತ್ತಮ ಹೊಸ ನಟಿ: ನೀತಾ ಅಶೋಕ್ (ವಿಕ್ರಾಂತ್ ರೋಣ)
ಅತ್ಯುತ್ತಮ ಹೊಸ ನಿರ್ಮಾಣ: ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ (ಡೊಳ್ಳು)
ಅತ್ಯುತ್ತಮ ಪೋಷಕ ನಟಿ: ಶುಭಾ ರಕ್ಷಾ (ಹೋಮ್ ಮಿನಿಸ್ಟರ್)
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 am, Sat, 16 September 23