ಸ್ನೇಹಿತ್​ ಮತ್ತು ಬೌನ್ಸರ್​ಗಳ ಮೇಲಿರುವ ಆರೋಪ ಒಂದೆರಡಲ್ಲ; ನೆರೆಹೊರೆಯವರು ಹೇಳೋದೇನು?

‘ಇವರು ಬೌನ್ಸರ್​​ಗಳಲ್ಲ, ಗೂಂಡಾಗಳು. ಆ ಹುಡುಗ (ಸ್ನೇಹಿತ್​) ಹೊರಗಡೆ ಬಂದ್ರೆ ಹಿಂದೆ ಮುಂದೆ ಕಾರು ಬರುತ್ತೆ. ರಸ್ತೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರ ಮೇಲೆ ಹಲ್ಲೆ ಮಾಡ್ತಾರೆ’ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಸ್ನೇಹಿತ್​ ಮತ್ತು ಬೌನ್ಸರ್​ಗಳ ಮೇಲಿರುವ ಆರೋಪ ಒಂದೆರಡಲ್ಲ; ನೆರೆಹೊರೆಯವರು ಹೇಳೋದೇನು?
ಸ್ನೇಹಿತ್
Edited By:

Updated on: Oct 25, 2021 | 4:24 PM

ನಿರ್ಮಾಪಕ ಸೌಂದರ್ಯ ಜಗದೀಶ್​ ಅವರ ಪುತ್ರ, ನಟ ಸ್ನೇಹಿತ್​ ಕಿರಿಕ್​ ಮಾಡಿಕೊಂಡಿದ್ದಾರೆ. ಬೌನ್ಸರ್​ಗಳ ಸಮೇತ ಬಂದು ರಜತ್​ ಎಂಬುವವರ ಮನೆ ಕೆಲಸದವರ ಮೇಲೆ ಸ್ನೇಹಿತ್​ ಹಲ್ಲೆ ಮಾಡಿದ ಘಟನೆ ಶನಿವಾರ (ಅ.23) ನಡೆಯಿತು. ಈ ಸಂಬಂಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅಂದಹಾಗೆ, ಸ್ನೇಹಿತ್​ ಮತ್ತು ಅವರ ಬೌನ್ಸರ್​ಗಳ ಪುಂಡಾಟ ಒಂದೆರಡಲ್ಲ. ಆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ನೇಹಿತ್​ನ ದರ್ಪದ ವರ್ತನೆಗೆ ಅನೇಕ ದಿನಗಳಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.

‘ಇವರು ಬೌನ್ಸರ್​​ಗಳಲ್ಲ, ಗೂಂಡಾಗಳು’ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ‘ಆ ಹುಡುಗ (ಸ್ನೇಹಿತ್​) ಹೊರಗಡೆ ಬಂದ್ರೆ ಹಿಂದೆ ಮುಂದೆ ಕಾರು ಬರುತ್ತೆ. ರಸ್ತೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರ ಮೇಲೆ ಹಲ್ಲೆ ಮಾಡ್ತಾರೆ. ದೊಡ್ಡವರು ಚಿಕ್ಕವರೆಂದು ನೋಡದೇ ಬಾಯಿಗೆ ಬಂದಂತೆ ಬೈತಾರೆ. ಅವರ ಕಾರು ಬರಬೇಕಾದ್ರೆ ರೋಡ್ ಕ್ಲಿಯರ್ ಮಾಡಿಕೊಡಬೇಕು. ಸಿನಿಮಾದಲ್ಲಿ ವಿಲನ್ ಬಂದಂಗೆ ಬರ್ತಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಮಲ್‌ ಪಂತ್ ಗರಂ

ಹಲ್ಲೆ ನಡೆದು 3 ದಿನವಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಗರಂ ಆಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಕಲೆಹಾಕಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

‘ಈಗ ದೂರು ದಾಖಲಾಗಿದೆ. ಈ ಸಂಬಂಧ ತನಿಖೆ ನಡೀತಿದೆ. ಈಗಾಗಲೇ ಕಲೆ ಹಾಕಿರುವ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ. ಕಾನೂನು ಕ್ರಮ ಕೈಗೊಳ್ತೇವೆ’ ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ವಿನಾಯಕ‌ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಿ ಪ್ರಯತ್ನ?

ಸ್ನೇಹಿತ್​ನಿಂದ ಹಲ್ಲೆಗೆ ಒಳಗಾಗಿರುವ ರಜತ್​ ಮತ್ತು ಮಂಜುಳಾ ಪುರುಷೋತ್ತಮ್​ ಅವರಿಗೆ ಕನ್ನಡದ ಓರ್ವ ಸ್ಟಾರ್​ ನಟ ಮತ್ತು ಓರ್ವ ಸ್ಟಾರ್​ ನಿರ್ಮಾಪಕನಿಂದ ಫೋನ್​ ಕರೆ ಹೋಗಿದೆ. ಆ ಮೂಲಕ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅವರು ಯಾರು ಎಂಬುದು ಬಹಿರಂಗ ಆಗಬೇಕಿದೆ.

ಇದನ್ನೂ ಓದಿ:

ಪೊಲೀಸರು ಬಂದಾಗ ಸೌಂದರ್ಯ ಜಗದೀಶ್​ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು

ಸ್ಯಾಂಡಲ್​ವುಡ್​ ನಿರ್ಮಾಪಕನ ಮಗನ ಪುಂಡಾಟ? ಕಸ ಗುಡಿಸುವಾಗ ಧೂಳು ಬಿದ್ದಿದ್ದಕ್ಕೆ ರಕ್ತಬರುವಂತೆ ಹಲ್ಲೆ