ಸಹಸ್ಪರ್ಧಿಗೆ ಹೊಡೆದ ಪ್ರಕರಣ; ಬಿಗ್ ಬಾಸ್ ಬಿಟ್ಟರೂ ಸೌಂದರ್ಯಾಗೆ ತಪ್ಪಿಲ್ಲ ಸಂಕಷ್ಟ 

ಬಿಗ್ ಬಾಸ್ ಮನೆಯಲ್ಲಿ ಸಹಸ್ಪರ್ಧಿ ಮಂಜು ಮೇಲಿನ ಹಲ್ಲೆ ವಿವಾದದಿಂದ ಸೌಂದರ್ಯಾ ಶೆಟ್ಟಿ ಸದ್ಯಕ್ಕೆ ಎಲಿಮಿನೇಷನ್ ಆತಂಕದಿಂದ ಪಾರಾಗಿದ್ದಾರೆ. ಆಟದ ಭರದಲ್ಲಿ ಈ ಘಟನೆ ನಡೆದಿದೆ ಎಂದು ಬಿಗ್ ಬಾಸ್ ತೀರ್ಪು ನೀಡಿದ್ದರೂ, ಮುಂಬರುವ ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಸೌಂದರ್ಯಾಗೆ ಖಡಕ್ ಪ್ರಶ್ನೆಗಳ ಬಾಣ ಎಸೆಯಲಿದ್ದು, ಅಸಲಿ ಕಂಟಕ ಕಾದಿದೆ.

ಸಹಸ್ಪರ್ಧಿಗೆ ಹೊಡೆದ ಪ್ರಕರಣ; ಬಿಗ್ ಬಾಸ್ ಬಿಟ್ಟರೂ  ಸೌಂದರ್ಯಾಗೆ ತಪ್ಪಿಲ್ಲ ಸಂಕಷ್ಟ 
ಸೌಂದರ್ಯಾ ಶೆಟ್ಟಿ
Image Credit source: Soudarya Shetty Instagram

Updated on: Sep 16, 2026 | 2:52 PM

ಮುಖ್ಯಾಂಶಗಳು

  • ಮನೆಯಿಂದ ಹೊರಬೀಳಬೇಕಿದ್ದ ಸೌಂದರ್ಯಾಗೆ ಸಿಕ್ತಾ ವಿನಾಯಿತಿ?
  • ಆಟದ ಭರದಲ್ಲಾದ ತಪ್ಪಿಗೆ ಮಂಜು ಕೂಡ ಕಾರಣವೇ?
  • ಸೌಂದರ್ಯಾಗೆ ತಪ್ಪಿಲ್ಲ ಕಂಟಕ

ಸೌಂದರ್ಯಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರವೇ ದೊಡ್ಡ ವಿವಾದ ಮಾಡಿಕೊಂಡಿದ್ದಾರೆ. ಸಹ ಸ್ಪರ್ಧಿ ಮಂಜುಗೆ ಹೊಡೆಯುವ ಮೂಲಕ ಅವರು ಚರ್ಚೆ ಹುಟ್ಟುಹಾಕಿದ್ದರು. ಆಟದ ಭರದಲ್ಲಿ ಈ ರೀತಿ ಆಗಿದೆ ಎಂದು ಬಿಗ್ ಬಾಸ್ ತೀರ್ಪು ನೀಡಿದರು. ಇಷ್ಟೆಲ್ಲ ಆದ ಬಳಿಕ ಸೌಂದರ್ಯಾ ಶೆಟ್ಟಿ ಅವರು ನಿಟ್ಟುಸಿರು ಬಿಟ್ಟರು. ಆದರೆ, ಈ ಸಮಸ್ಯೆ ಇಲ್ಲಿಗೆ ಕೊನೆ ಆಗುತ್ತಿಲ್ಲ. ಈ ಬಗ್ಗೆ ಬಿಗ್ ಬಾಸ್ ಸಣ್ಣ ಸೂಚನೆ ಒಂದನ್ನು ಕೊಟ್ಟಿದ್ದಾರೆ.

ಬಿಗ್ ಬಾಸ್​ನ ದೊಡ್ಡ ನಿಯಮಗಳಲ್ಲಿ ಒಂದು ಎಂದರೆ ಅದು ಯಾರ ಮೇಲೆಯೂ ಹಲ್ಲೆ ಮಾಡಬಾರದು. ಹಾಗೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ತಕ್ಷಣ ಅಂತಹ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಿದ ಉದಾಹರಣೆಯೂ ಇದೆ. ಆದರೆ, ಸೌಂದರ್ಯಾ ವಿಷಯದಲ್ಲಿಯೂ ಹಾಗೆಯೇ ಆಗಬೇಕಿತ್ತು. ಆದರೆ, ಆಗಿಲ್ಲ. ಇದಕ್ಕೆ ಬಿಗ್ ಬಾಸ್ ಕಾರಣ ನೀಡಿದ್ದಾರೆ.

ಸೌಂದರ್ಯಾ ಅವರು ಮಂಜುಗೆ ಹೊಡೆದಿದ್ದು ಯಾವುದೇ ವೈಯಕ್ತಿಕ ಕಾರಣದಿಂದ ಅಲ್ಲ. ಆಟದ ಭರದಲ್ಲಿ ಸೌಂದರ್ಯಾ ಅವರು ಹೊಡೆದುಬಿಟ್ಟರು ಅಷ್ಟೇ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇನ್ನು ಕೇವಲ ಸೌಂದರ್ಯಾ ಮಾಡಿದ್ದು ಮಾತ್ರ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಬಿಗ್ ಬಾಸ್ ಅಭಿಪ್ರಾಯ. ಮಂಜು ಅವರು ಕೂಗಾಡಿ, ಧಮ್ಕಿ ಹಾಕುವ ಕೆಲಸ ಮಾಡಿದ್ದರು. ಇದು ಕೂಡ ತಪ್ಪು ಎಂದು ಬಿಗ್ ಬಾಸ್ ಹೇಳಿದ್ದಾರೆ. ಎರಡನ್ನೂ ಅಳೆದು ತೂಗಿ ನೋಡಿ ಅದನ್ನು ಇಲ್ಲಿಗೆ ಕೊನೆ ಮಾಡಲಾಗಿದೆ.

ಇದನ್ನೂ ಓದಿ: ಮಂಜು ಮೇಲೆ ಹಲ್ಲೆ ಮಾಡಿದ್ರಾ ಸೌಂದರ್ಯಾ? ಬಿಗ್ ಬಾಸ್ ಮಾಡಿದ ನಿರ್ಧಾರ ಏನು?

ಹಾಗಾದರೆ, ಸೌಂದರ್ಯಾಗೆ ರಿಲೀಫ್ ಸಿಕ್ಕಿತಾ? ಇಲ್ಲ. ಈ ವಿಷಯ ವೀಕೆಂಡ್​ನಲ್ಲಿ ಚರ್ಚೆಗೆ ಬರಲಿದೆ. ಬಿಗ್ ಬಾಸ್ ಕಡೆಯಿಂದಲೇ ವೀಕ್ಷಕರಿಗೆ ಈ ಬಗ್ಗೆ ಸೂಚನೆ ಸಿಕ್ಕಿದೆ. ಬಿಗ್ ಬಾಸ್ ಈಗ ಒಂದು ನಿರ್ಧಾರ ತೆಗೆದುಕೊಂಡಾಗಿದೆ. ಇದರ ಸವಿಸ್ತಾರವಾದ ಚರ್ಚೆ ವೀಕೆಂಡ್ ಪಂಚಾಯ್ತಿಯಲ್ಲಾಗುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಂದು ಸೌಂದರ್ಯಾಗೆ ಸುದೀಪ್ ಕಡೆಯಿಂದ ಬಾಣಗಳ ರೀತಿಯ ಪ್ರಶ್ನೆಗಳು ಬರುತ್ತವೆ. ಇದನ್ನು ಸಮರ್ಥವಾಗಿ ಅವರು ಎದುರಿಸಬೇಕಿದೆ. ಹಾಗಾದರೆ ಮಾತ್ರ ಅವರ ಮೇಲೆ ಪಾಸಿಟಿವ್ ದೃಷ್ಟಿಕೋನ ಸೃಷ್ಟಿ ಆಗಲು ಸಾಧ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us