
ಬಿಗ್ ಬಾಸ್ ಖ್ಯಾತಿಯ ಜನಪ್ರಿಯ ನಟಿ ಸ್ಪಂದನಾ ಸೋಮಣ್ಣ ಅವರು ಶೀಘ್ರದಲ್ಲೇ ವರುಣ್ ಮುನಿರಾಜು ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ತಮ್ಮ ಮದುವೆಯ ಸಂಭ್ರಮದ ನಡುವೆ, ತಾವು ವರುಣ್ ಅವರನ್ನು ಭೇಟಿಯಾದ ರೋಚಕ ಹಾಗೂ ಸುಂದರ ಪ್ರೇಮಕಥೆಯನ್ನು ವೀಡಿಯೊ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಾಲೇಜು ದಿನಗಳು: ಸ್ಪಂದನಾ ಮತ್ತು ವರುಣ್ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರಾದರೂ, ಆ ಕಾಲದಲ್ಲಿ ಇಬ್ಬರ ನಡುವೆ ಯಾವುದೇ ನೇರ ಪರಿಚಯ ಅಥವಾ ಮಾತುಕತೆ ಇರಲಿಲ್ಲ. ಈ ವಿಷಯ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಆ ಸಮಯದಲ್ಲಿ ಯಾವುದೇ ಪ್ರೀತಿ ಮೂಡಿರಲಿಲ್ಲ ಎಂಬುದನ್ನು ರಿವೀಲ್ ಮಾಡಿದ್ದಾರೆ.
ಕೋವಿಡ್ ಲಾಕ್‌ಡೌನ್ ತಿರುವು: ನಂತರ ಕೋವಿಡ್ ಸಮಯದಲ್ಲಿ ಇಬ್ಬರ ನಡುವೆ ಮಾತುಕತೆ ಆರಂಭವಾಯಿತು. ಕ್ರಮೇಣ ಇದು ಪರಿಚಯಕ್ಕೆ ತಿರುಗಿ, ಇಬ್ಬರೂ ದೀರ್ಘಕಾಲದ ‘ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್’ನಲ್ಲಿದ್ದರು.
ವೃತ್ತಿಪರವಾಗಿ ತಾವಿಬ್ಬರೂ ಜೀವನದಲ್ಲಿ ಬೇರೆ ಬೇರೆ ಹಂತಗಳಲ್ಲಿದ್ದರೂ, ತಾನು ವೃತ್ತಿಜೀವನದಲ್ಲಿ ಹೆಣಗಾಡುತ್ತಿದ್ದ ಹಾಗೂ ಕಷ್ಟದ ಕಾಲದಲ್ಲಿದ್ದಾಗ ವರುಣ್ ಅವರು ತಮಗೆ ಅತ್ಯಂತ ಸಪೋರ್ಟಿವ್ ಆಗಿ ನಿಂತರು ಎಂದು ಸ್ಪಂದನಾ ಮುಕ್ತವಾಗಿ ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: ಸ್ಪಂದನಾ ಸೋಮಣ್ಣ ಮದುವೆ ಆಗ್ತಿರೋ ಹುಡುಗ ಯಾರು? ಕಾಲೇಜು ದಿನದಲ್ಲೇ ಮೂಡಿತ್ತು ಪ್ರೀತಿ
ಸದ್ಯ ಈ ಜೋಡಿಯ ಮದುರೆಯ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಪ್ಯಾರಿಸ್ ಐಫೆಲ್ ಟವರ್ ಎದುರು ನಿಂತು ಪೋಸ್ ಕೊಟ್ಟು ಫೋಟೋ ಪೋಸ್ಟ್ ಮಾಡಿದ್ದಾರೆ ಸ್ಪಂದನಾ. ಶೀಘ್ರವೇ ಇವರು ವಿವಾಹ ಆಗಲಿದ್ದಾರೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:59 am, Mon, 12 October 26