25ನೇ ದಿನದತ್ತ ‘ಮದಗಜ’: ಚಿತ್ರಮಂದಿರದಲ್ಲಿ ಇರುವಾಗಲೇ ಒಟಿಟಿಗೆ ಬಂದಿದ್ದಕ್ಕೆ ಕಾರಣ ತಿಳಿಸಿದ ನಿರ್ದೇಶಕ

| Updated By: ಮದನ್​ ಕುಮಾರ್​

Updated on: Dec 26, 2021 | 3:14 PM

Madhagaja Kannada Movie: ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ‘ಮದಗಜ’ ಸಿನಿಮಾವನ್ನು ಒಟಿಟಿಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಆ ಬಗ್ಗೆ ನಿರ್ದೇಶಕ ಮಹೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

25ನೇ ದಿನದತ್ತ ‘ಮದಗಜ’: ಚಿತ್ರಮಂದಿರದಲ್ಲಿ ಇರುವಾಗಲೇ ಒಟಿಟಿಗೆ ಬಂದಿದ್ದಕ್ಕೆ ಕಾರಣ ತಿಳಿಸಿದ ನಿರ್ದೇಶಕ
ಶ್ರೀಮುರಳಿ
Follow us on

2021ರ ವರ್ಷ ಮುಗಿಯುತ್ತಿದೆ. ಹೊಸ ಅಧ್ಯಾಯ ಆರಂಭಿಸಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಈ ವರ್ಷ ಚಂದನವನದಲ್ಲಿ ಹೈಪ್​​​ ಸೃಷ್ಟಿ ಮಾಡಿದ ಕೆಲವೇ ಸಿನಿಮಾಗಳಲ್ಲಿ ‘ಮದಗಜ’ (, Madhagaja Kannada Movie) ಕೂಡ ಒಂದು. ಶ್ರೀಮುರಳಿ (Sri Murali) ನಟನೆಯ ಈ ಚಿತ್ರಕ್ಕೆ ‘ಅಯೋಗ್ಯ’ ಖ್ಯಾತಿಯ ಮಹೇಶ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಆಶಿಕಾ ರಂಗನಾಥ್​ (Ashika Ranganath) ಮತ್ತು ಶ್ರೀಮುರಳಿ ಕಾಂಬಿನೇನಷ್​ ಕಂಡು ಅಭಿಮಾನಿಗಳು ಮೆಚ್ಚಿಕೊಂಡರು. ಡಿ.3ರಂದು ತೆರೆಕಂಡಿದ್ದ ‘ಮದಗಜ’ ಚಿತ್ರ ಈಗ 25ನೇ ದಿನದತ್ತ ಕಾಲಿಟ್ಟಿದೆ. ಒಮಿಕ್ರಾನ್​ ಹರಡುವ ಭೀತಿ, ಪರಭಾಷೆ ಸಿನಿಮಾಗಳ ಪೈಪೋಟಿ, ಥಿಯೇಟರ್​ ಸಮಸ್ಯೆ ಮುಂತಾದ ಎಲ್ಲ ವಿಘ್ನಗಳ ನಡುವೆಯೂ 25 ದಿನಗಳ ಪ್ರದರ್ಶನ ಕಾಣಲು ಸಾಧ್ಯವಾಗಿರುವುದಕ್ಕೆ ‘ಮದಗಜ’ ತಂಡ ಖುಷಿ ವ್ಯಕ್ತಪಡಿಸಿದೆ. ಉಮಾಪತಿ ಶ್ರೀನಿವಾಸ್​ ಗೌಡ ಅವರು ನಿರ್ಮಾಣ ಮಾಡಿರುವ ಈ ಸಿನಿಮಾ ಈಗಾಗಲೇ ಒಟಿಟಿಗೂ (OTT platform) ಕಾಲಿಟ್ಟಿದೆ.

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ‘ಮದಗಜ’ ಸಿನಿಮಾ ಲಭ್ಯವಾಗಿದೆ. ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಅನೇಕರ ಮನದಲ್ಲಿದೆ. ಆ ಬಗ್ಗೆ ನಿರ್ದೇಶಕ ಮಹೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಸದ್ಯದ ಟ್ರೆಂಡ್​ ಅದೇ ರೀತಿ ಇದೆ. ಬಿಡುಗಡೆಯಾಗಿ ಎರಡು ವಾರಕ್ಕೆ ಒಟಿಟಿಗೆ ಬಂದರೆ ಅಲ್ಲಿ ಸಿಗುವ ಮೊತ್ತ ದೊಡ್ಡದಾಗಿರುತ್ತದೆ. ಇದರಿಂದ ಚಿತ್ರತಂಡಕ್ಕೆ ಅನುಕೂಲ ಆಗುತ್ತದೆ’ ಎಂದಿದ್ದಾರೆ ಮಹೇಶ್​ ಕುಮಾರ್​.

ಒಟಿಟಿಯಲ್ಲಿ ಮನರಂಜನೆ ಬಯಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ ಎಂಬುದು ನಿಜ. ಆದರೆ ಬಿ, ಸಿ ಸೆಂಟರ್​ಗಳಲ್ಲಿ ಪರಿಸ್ಥಿತಿ ಬೇರೆಯೇ ಇದೆ ಎಂಬುದು ಮಹೇಶ್​ ಅಭಿಪ್ರಾಯ. ‘ಮಹಾನಗರಗಳಲ್ಲಿ ಮಾತ್ರ ಒಟಿಟಿ ವೀಕ್ಷಕರು ಜಾಸ್ತಿ ಇದ್ದಾರೆ. ಆದರೆ ಬಿ ಮತ್ತು ಸಿ ಸೆಂಟರ್​ಗಳಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರೇ ಜಾಸ್ತಿ. 40ಕ್ಕೂ ಹೆಚ್ಚು ಕಡೆ ನಮ್ಮ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೆಲವು ಪರಭಾಷೆ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬಳಿಕ ಜನರು ಮತ್ತೆ ನಮ್ಮ ಸಿನಿಮಾದತ್ತ ಬರಲು ಆರಂಭಿಸಿದ್ದಾರೆ. ಹಾಗಾಗಿ ಒಟಿಟಿಯಲ್ಲಿ ಬಂದರೂ ಕೂಡ ಬಿ, ಸಿ ಸೆಂಟರ್​ಗಳ ಪ್ರದರ್ಶನಕ್ಕೆ ತೊಂದರೆ ಆಗುವುದಿಲ್ಲ’ ಎಂಬುದು ಮಹೇಶ್​ ಅಭಿಪ್ರಾಯ.

ಕ್ರಿಸ್​ಮಸ್​ ಮತ್ತು ಇಯರ್​ ಎಂಡ್​ ರಜೆಯ ಕಾರಣದಿಂದ ಇನ್ನಷ್ಟು ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ಈವರೆಗೂ 30 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ಮಹೇಶ್​ ಕುಮಾರ್​ ಮಾಹಿತಿ ಹಂಚಿಕೊಂಡಿದ್ದಾರೆ. ಡಿ.3ರಂದು ಬಿಡುಗಡೆಯಾದ ‘ಮದಗಜ’ ಚಿತ್ರ ಒಳ್ಳೆಯ ಓಪನಿಂಗ್​ ಪಡೆದುಕೊಂಡಿತ್ತು. ಪಕ್ಕಾ ಮಾಸ್​ ಶೈಲಿಯಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಫ್ಯಾಮಿಲಿ ಸೆಂಟಿಮೆಂಟ್​ ಕೂಡ ಹೈಲೈಟ್​ ಆಗಿದೆ.

ಇದನ್ನೂ ಓದಿ:

‘ಮದಗಜ’ ಫಸ್ಟ್​ ಡೇ ಕಲೆಕ್ಷನ್​ ಎಷ್ಟು ಕೋಟಿ? ಶ್ರೀಮುರಳಿ ಚಿತ್ರದ ಬಾಕ್ಸ್​ ಆಫೀಸ್​ ಲೆಕ್ಕ ಇಲ್ಲಿದೆ

‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್​ ರಾವ್​-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು