Madhagaja Title Song: ಅಬ್ಬರಿಸಲು ಬಂದ ‘ಮದಗಜ’ ಶ್ರೀಮುರಳಿ; ಟೈಟಲ್ ಸಾಂಗ್ ಮೂಲಕ ಹೆಚ್ಚಿತು ಕ್ರೇಜ್
Sri Murali: ಶ್ರೀಮುರಳಿ, ಆಶಿಕಾ ರಂಗನಾಥ್ ನಟನೆಯ ‘ಮದಗಜ’ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಸ್ಯಾಂಡಲ್ವುಡ್ನಲ್ಲಿ ಮತ್ತೆ ಹಳೇ ಚಾರ್ಮ್ ಮರಳುತ್ತಿದೆ. ಎರಡನೇ ಲಾಕ್ಡೌನ್ ಬಳಿಕ ಮಂಕಾಗಿದ್ದ ಚಿತ್ರರಂಗ ಈಗ ಚೇತರಿಸಿಕೊಳ್ಳುತ್ತಿದೆ. ಬಿಗ್ ಬಜೆಟ್ ಸಿನಿಮಾಗಳೆಲ್ಲ ಒಂದೊಂದಾಗಿ ಬಿಡುಗಡೆ ಆಗುತ್ತಿವೆ. ಹಲವು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಆ ಪೈಕಿ ಶ್ರೀಮುರಳಿ (Sri Murali) ಮತ್ತು ಆಶಿಕಾ ರಂಗನಾಥ್ (Ashika Ranganath) ನಟನೆಯ ‘ಮದಗಜ’ ಸಿನಿಮಾದ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಅಯೋಗ್ಯ’ ಖ್ಯಾತಿಯ ಮಹೇಶ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಸದ್ಯ ಹಾಡುಗಳ ಮೂಲಕ ‘ಮದಗಜ’ ಚಿತ್ರ ಭಾರಿ ಸೌಂಡು ಮಾಡುತ್ತಿದೆ. ಈಗ ಚಿತ್ರದ ಟೈಟಲ್ ಸಾಂಗ್ (Madhagaja title song) ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟ ಶ್ರೀಮುರಳಿ ಅಬ್ಬರಿಸಿದ್ದಾರೆ. ಅವರ ಅಭಿಮಾನಿಗಳಿಗೆ ಈ ಹಾಡು ಸಖತ್ ಮನರಂಜನೆ ನೀಡುತ್ತಿದೆ.
ಸಿನಿಮಾಗಳ ಆಯ್ಕೆಯಲ್ಲಿ ಶ್ರೀಮುರಳಿ ಸಖತ್ ಚ್ಯೂಸಿ ಆಗಿದ್ದಾರೆ. ‘ಭರಾಟೆ’ ಬಳಿಕ ಅವರು ಒಪ್ಪಿಕೊಂಡು ‘ಮದಗಜ’ ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರಿ ಕ್ರೇಜ್ ಹುಟ್ಟುಹಾಕಿದೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ‘ಮದಗಜ’ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಪಾತ್ರವರ್ಗದ ಕಾರಣದಿಂದಲೂ ಈ ಸಿನಿಮಾ ಹೈಪ್ ಸೃಷ್ಟಿಸಿದೆ. ಶ್ರೀಮುರಳಿ, ಆಶಿಕಾ ರಂಗನಾಥ್ ಜೊತೆಗೆ ಖ್ಯಾತ ನಟ ಜಗಪತಿ ಬಾಬು ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್ ಕೂಡ ಅದ್ದೂರಿಯಾಗಿ ಮೂಡಿಬರುತ್ತಿದ್ದು, ಅದಕ್ಕೆ ಟೀಸರ್ ಮತ್ತು ಹಾಡುಗಳೇ ಸಾಕ್ಷಿ ಒದಗಿಸುತ್ತಿವೆ. ಆಶಿಕಾ ರಂಗನಾಥ್ ಅವರ ಗೆಟಪ್ಗಳು ಸಹ ಗಮನ ಸೆಳೆದಿವೆ.
ಟೈಟಲ್ ಸಾಂಗ್ ನೋಡಿದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ‘ಈ ಹಾಡನ್ನು ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದೇವೆ. ರವಿ ಬಸ್ರೂರು ಸಂಗೀತ ಸೂಪರ್ ಆಗಿದೆ’ ಎಂಬಿತ್ಯಾದಿ ಕಮೆಂಟ್ಗಳ ಮೂಲಕ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೃಹತ್ ಸೆಟ್ಗಳು ಮತ್ತು ಅದ್ದೂರಿ ಮೇಕಿಂಗ್ನಿಂದಾಗಿ ಈ ಹಾಡು ಗಮನ ಸೆಳೆಯುತ್ತಿದೆ. ಶ್ರೀಮುರಳಿ ಡ್ಯಾನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿಗೆ ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ‘ಮದಗಜ’ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ
ಮದಗಜ ಶೂಟಿಂಗ್ ವೇಳೆ ಜ್ಯೂನಿಯರ್ ಆರ್ಟಿಸ್ಟ್ಗೆ ಪೆಟ್ಟು; ಕ್ಷಮೆ ಕೇಳಿ, ಚಿಕಿತ್ಸೆ ಕೊಡಿಸಿದ ಶ್ರೀಮುರಳಿ
Published On - 11:30 am, Thu, 11 November 21