Bagheera Teaser: ‘ಬಘೀರ’ ಟೀಸರ್​ನಲ್ಲಿ ಶ್ರೀಮುರಳಿ ಅಬ್ಬರ; ‘ರೋರಿಂಗ್​ ಸ್ಟಾರ್​’ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್​

ಪ್ರಶಾಂತ್​ ನೀಲ್​ ಅವರು ‘ಬಘೀರ’ ಸಿನಿಮಾಗೆ ಕಥೆ ಬರೆದಿದ್ದಾರೆ. ಡಾ. ಸೂರಿ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವ ರೀತಿಯಲ್ಲಿ ಟೀಸರ್​ ಮೂಡಿಬಂದಿದೆ. ಈ ಟೀಸರ್​ನಲ್ಲಿ ಯಾವುದೇ ಡೈಲಾಗ್​ ಇಲ್ಲ. ಕೇವಲ ಸಾಹಸ ದೃಶ್ಯಗಳು ಹೈಲೈಟ್​ ಆಗಿವೆ.

Bagheera Teaser: ‘ಬಘೀರ’ ಟೀಸರ್​ನಲ್ಲಿ ಶ್ರೀಮುರಳಿ ಅಬ್ಬರ; ‘ರೋರಿಂಗ್​ ಸ್ಟಾರ್​’ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್​
ಶ್ರೀಮುರಳಿ

Updated on: Dec 17, 2023 | 10:53 AM

‘ರೋರಿಂಗ್​ ಸ್ಟಾರ್​’ ಶ್ರೀಮುರಳಿ (Sri Murali) ಅವರು ಇಂದು (ಡಿಸೆಂಬರ್​ 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ‘ಬಘೀರ’ (Bagheera) ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾ ಮೇಲೆ ಶ್ರೀಮುರಳಿ ಅಭಿಮಾನಿಗಳು ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಜನ್ಮದಿನದ ಸಲುವಾಗಿ ರಿಲೀಸ್​ ಆದ ಟೀಸರ್​ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಿಸುವ ರೀತಿಯಲ್ಲಿ ಟೀಸರ್​ (Bagheera Teaser) ಮೂಡಿಬಂದಿದೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಪ್ರಶಾಂತ್​ ನೀಲ್​ ಅವರು ‘ಬಘೀರ’ ಸಿನಿಮಾಗೆ ಕಥೆ ಬರೆದಿದ್ದಾರೆ. ಡಾ. ಸೂರಿ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’, ‘ಸಲಾರ್​’ ರೀತಿಯೇ ಈ ಸಿನಿಮಾ ಕೂಡ ಡಾರ್ಕ್​ ಶೇಡ್​ನಲ್ಲಿ ಮೂಡಿಬರುತ್ತಿದೆ ಎಂಬುದಕ್ಕೆ ಟೀಸರ್​ ಸಾಕ್ಷಿ ಒದಗಿಸುತ್ತಿದೆ. ಈ ಟೀಸರ್​ನಲ್ಲಿ ಯಾವುದೇ ಡೈಲಾಗ್​ ಇಲ್ಲ. ಕೇವಲ ಸಾಹಸ ದೃಶ್ಯಗಳು ಹೈಲೈಟ್​ ಆಗಿವೆ. ಇದು ಭರ್ಜರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ ಎಂಬುದು ಸ್ಪಷ್ಟವಾಗಿದೆ.

Bagheera Official Teaser | Srii Murali | Dr Suri | Prashanth Neel | Vijay Kiragandur | Hombale Films

ಬಿ. ಅಜನೀಶ್​ ಲೋಕನಾಥ್​ ಅವರು ‘ಬಘೀರ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್​ನಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ. ಪ್ರಣವ್​ ಶ್ರೀ ಪ್ರಸಾದ್​​ ಸಂಕಲನ ಮಾಡುತ್ತಿದ್ದಾರೆ. ಎಜೆ ಶೆಟ್ಟಿ ಅವರ ಛಾಯಾಗ್ರಹಣದಲ್ಲಿ ‘ಬಘೀರ’ ಸಿನಿಮಾ ಮೂಡಿಬರುತ್ತಿದೆ. ಪ್ರಶಾಂತ್​ ನೀಲ್​ ಅವರು ಕಥೆ ಬರೆದಿದ್ದಾರೆ ಎಂಬ ಕಾರಣದಿಂದ ಈ ಸಿನಿಮಾ ಮೇಲಿನ ನಿರೀಕ್ಷೆ ಡಬಲ್​ ಆಗಿದೆ.

ಇದನ್ನೂ ಓದಿ: ರಾಗಿಣಿ ‘ರಾಜ್ಯೋತ್ಸವ’ಕ್ಕೆ ಶುಭ ಹಾರೈಸಿದ ಶ್ರೀಮುರಳಿ

ಕಳೆದ ಕೆಲವು ವರ್ಷಗಳಿಂದ ಶ್ರೀಮುರಳಿ ಅವರು ಅಭಿಮಾನಿಗಳ ಜೊತೆ ಸೇರಿ ಬರ್ತ್​ಡೇ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಈ ವರ್ಷ ಅವರು ಫ್ಯಾನ್ಸ್​ ಜೊತೆ ಜನ್ಮದಿನವನ್ನು ಸಂಭ್ರಮಿಸುತ್ತಿದ್ದಾರೆ. ಇಂದು (ಡಿ.17) ಬೆಳಗ್ಗೆ 10.30ರ ನಂತರ ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್​ ರಸ್ತೆಯಲ್ಲಿ ಇರುವ ದೇವರಾಜ್​ ಅರಸ್​ ಭವನದಲ್ಲಿ ಶ್ರೀಮುರಳಿ ಅವರು ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ. ಹಾರ, ಕೇಕ್​, ಉಡುಗೊರೆ ಮುಂತಾದ್ದನ್ನು ತರುವುದು ಬೇಡ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us