ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ಶ್ರೀಮುರಳಿ ಹೊಸ ಸಿನಿಮಾ ಅನೌನ್ಸ್
ಖ್ಯಾತ ನಟ ಶ್ರೀಮುರಳಿ ಅವರಿಗೆ ಇಂದು (ಡಿಸೆಂಬರ್ 17) ಹುಟ್ಟುಹಬ್ಬದ ಸಂಭ್ರಮ. ಸಖತ್ ಸಡಗರದಿಂದ ಬರ್ತ್ಡೇ ಆಚರಣೆ ಮಾಡಲಾಗಿದೆ. ಈ ವರ್ಷ ‘ಬಘೀರ’ ಸಿನಿಮಾ ಸೂಪರ್ ಹಿಟ್ ಆಗಿದ್ದರಿಂದ ಅವರಿಗೆ ಜನ್ಮದಿನದ ಖುಷಿ ಡಬಲ್ ಎನ್ನಬಹುದು. ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಸಿಕ್ಕಿದೆ. ಶ್ರೀಮುರಳಿ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.
‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಇಂದು (ಡಿ.17) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ‘ಬಘೀರ’ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಹಾಗಾಗಿ ಈ ವರ್ಷ ಬರ್ತ್ಡೇ ಅವರಿಗೆ ಸ್ಪೆಷಲ್ ಆಗಿದೆ. ಅಭಿಮಾನಿಗಳ ಜೊತೆ ಅವರು ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ‘ಬಘೀರ’ ಸೂಪರ್ ಹಿಟ್ ಆದ ಬಳಿಕ ಶ್ರೀಮುರಳಿ ಅವರ ಹೊಸ ಸಿನಿಮಾ ಯಾವುದು ಎಂದು ತಿಳಿಯಲು ಫ್ಯಾನ್ಸ್ ಕಾದಿದ್ದರು. ಆ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಶ್ರೀಮುರಳಿ ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರದ ನಿರ್ದೇಶಕರು ಯಾರು? ಶೀರ್ಷಿಕೆ ಏನು? ತಾರಾಗಣದಲ್ಲಿ ಮತ್ತು ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ವಿಶೇಷ ಏನೆಂದರೆ, ಪರಭಾಷೆಯ ನಿರ್ಮಾಣ ಸಂಸ್ಥೆಗಳಿಂದ ಶ್ರೀಮುರಳಿ ಅವರಿಗೆ ಬೇಡಿಕೆ ಬಂದಿದೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಜೊತೆ ಶ್ರೀಮುರಳಿ ಅವರು ಈಗ ಕೈ ಜೋಡಿಸಿದ್ದಾರೆ. ಈ ಸಂಸ್ಥೆ ನಿರ್ಮಾಣ ಮಾಡಲಿರುವ ಹೊಸ ಚಿತ್ರದಲ್ಲಿ ಹೀರೋ ಆಗಿ ಶ್ರೀಮುರಳಿ ಅಭಿನಯಿಸಲಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.
People Media Factory joins forces with Roaring Star @SRIMURALIII Garu for our prestigious project #PMF47 🔥
Wishing @SRIMURALIII Garu a POWERHOUSE year ahead ❤️🔥#HappyBirthdaySriiMurali 🎉
Produced by @vishwaprasadtg This game-changing collaboration is set to redefine cinema… pic.twitter.com/ZtyuuhZ0kJ
— People Media Factory (@peoplemediafcy) December 17, 2024
ಶ್ರೀಮುರಳಿ ನಟಿಸಲಿರುವ ಈ ಸಿನಿಮಾದ ಮೂಲಕ ಟಾಲಿವುಡ್ನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದೆ. ಈಗಾಗಲೇ ಕನ್ನಡದ ಕೆಲವು ನಿರ್ಮಾಣ ಸಂಸ್ಥೆಗಳು ಪರಭಾಷೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿವೆ. ಅದೇ ರೀತಿ, ಬೇರೆ ಭಾಷೆಯಲ್ಲಿ ಸಕ್ರಿಯವಾಗಿರುವ ಪ್ರೊಡಕ್ಷನ್ ಹೌಸ್ಗಳು ಕನ್ನಡಕ್ಕೆ ಆಗಮಿಸಿದೆ.
ಇದನ್ನೂ ಓದಿ: ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ
ಜನಮೆಚ್ಚಿದ ‘ಬಘೀರ’ ಸಿನಿಮಾದ ಗೆಲುವಿನ ನಂತರ ಶ್ರೀಮುರಳಿ ಅವರು ಮತ್ತೊಂದು ಬಿಗ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಹೇಗಿರಲಿದೆ ಎಂದು ತಿಳಿಯುವ ಕುತೂಹಲ ಅಭಿಮಾನಿಗಳ ಮನದಲ್ಲಿ ಮೂಡಿದೆ. ಶ್ರೀಮುರಳಿ ಬರ್ತಡೇ ದಿನವೇ ಅಧಿಕೃತ ಪೋಸ್ಟರ್ ಅನಾವರಣ ಮಾಡಲಾಗಿದೆ. ಶ್ರೀಮುರಳಿ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಸ್ಪೆಷಲ್ ಆಗಿರಲಿದೆ ಎಂಬ ಭರವಸೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.