Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ

Srii Murali: ಶ್ರೀ ಮುರಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ‘ಮದಗಜ’ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ರವಿ ಬಸ್ರೂರ್ ಸಂಗೀತವಿರುವ ಈ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

Madhagaja: ‘ಮದಗಜ’ ಚಿತ್ರದ ಹೊಸ ಹಾಡಿನಲ್ಲಿ ಮಿಂಚುತ್ತಿರುವ ಶ್ರೀ ಮುರಳಿ, ಆಶಿಕಾ ರಂಗನಾಥ್; ವಿಡಿಯೋ ನೋಡಿ
‘ಮದಗಜ’ ಚಿತ್ರದಲ್ಲಿ ಶ್ರೀ ಮುರಳಿ, ಆಶಿಕಾ ರಂಗನಾಥ್
Updated By: shivaprasad.hs

Updated on: Oct 07, 2021 | 12:22 PM

ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ತನ್ನ ಟೀಸರ್ ಹಾಗೂ ಪೋಸ್ಟರ್ ಮುಖಾಂತರ ‘ಮದಗಜ’ ಚಿತ್ರ ಸಾಕಷ್ಟು ಸದ್ದು ಮಾಡಿದೆ. ನಟ ಶ್ರೀ ಮುರಳಿ ಹಾಗೂ ನಟಿ ಆಶಿಕಾ ರಂಗನಾಥ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ‘ಗೆಳೆಯ ನನ್ನ ಗೆಳೆಯ’ ಎಂಬ ಹಾಡು ಇಂದು ಬಿಡುಗಡೆಯಾಗಿದ್ದು, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚೇತನ್ ಕುಮಾರ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಗಾಯಕಿ ವೈಶ್ ದನಿಯಾಗಿದ್ದು, ವೀಕ್ಷಕರ ಮೆಚ್ಚುಗೆ ಗಳಿಸುತ್ತಿದೆ.

2019ರಲ್ಲಿ ತೆರೆಕಂಡ ‘ಭರಾಟೆ’ ಚಿತ್ರದ ನಂತರ ಶ್ರೀ ಮುರಳಿ ನಟನೆಯ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಆದ್ದರಿಂದಲೇ ‘ಮದಗಜ’ ಚಿತ್ರಕ್ಕೆ ಅಪಾರ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ಚಿತ್ರತಂಡವು 74 ದಿನಗಳ ಚಿತ್ರೀಕರಣವನ್ನು ಪೂರೈಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಿತ್ತು. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಚಿತ್ರದ ಹಾಡು ಇಲ್ಲಿದೆ:

‘ಮದಗಜ’ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಸ್.ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ನವೀನ್ ಕುಮಾರ್.ಐ ಛಾಯಾಗ್ರಹಣವಿದ್ದು, ಹರೀಶ್ ಕೊಮ್ಮೆಯವರ ಸಂಕಲನವಿದೆ. ಚಿತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ಸೇರಿದಂತೆ ಬೃಹತ್ ತಾರಾಗಣವಿದೆ. ಚಿತ್ರತಂಡ ಈಗಾಗಲೇ ನಟಿ ಆಶಿಕಾ ರಂಗನಾಥ್ ಅವರ ಎರಡು ಭಿನ್ನ ಗೆಟಪ್​ಗಳ ಪೋಸ್ಟರ್ ಬಿಟ್ಟಿದ್ದು, ಸಾಕಷ್ಟು ಸದ್ದು ಮಾಡಿತ್ತು. ಚಿತ್ರದ ಮೊದಲ ಟೀಸರ್ ಕೂಡ ಎಲ್ಲರ ಗಮನ ಸೆಳೆದಿತ್ತು. ಪ್ರಸ್ತುತ ಬಿಡುಗಡೆಯಾಗಿರುವ ಹಾಡು ಕೂಡ ಎಲ್ಲರ ಗಮನ ಸೆಳೆದಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ.

ಇದನ್ನೂ ಓದಿ:

Dhananjaya: ಡಿಸೆಂಬರ್​ನಲ್ಲಿ ಧನಂಜಯ್ ಅಭಿಮಾನಿಗಳಿಗೆ ಸಿನಿ ಸುಗ್ಗಿ; ‘ಪುಷ್ಪ’ ಚಿತ್ರದ ಬೆನ್ನಲ್ಲೇ ಈ ಸಿನಿಮಾ ರಿಲೀಸ್

HBD Ashika Ranganath: ನೀವಂದುಕೊಂಡಂತೆ ಇಲ್ಲ ಆಶಿಕಾ ರಂಗನಾಥ್​; ಬರ್ತ್​ಡೇ ದಿನವೇ ಬಯಲಾಯ್ತು ಇನ್ನೊಂದು ಮುಖ