ಸಕ್ಸಸ್ ಅನ್ನೋದು ಇಂದಿಗೂ ನಂಗೆ ದೊಡ್ಡ ಯಕ್ಷ ಪ್ರಶ್ನೆ; ಸೃಜನ್ ಲೋಕೇಶ್ ಹೀಗ್ಯಾಕಂದ್ರು?

ಸೃಜನ್ ಲೋಕೇಶ್ ಅವರು ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿ, ನಂತರ ಟಿವಿ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದರು. ಚಲನಚಿತ್ರಗಳಲ್ಲಿ ಅವರ ಯಶಸ್ಸು ನಿರೀಕ್ಷೆಗಳಿಗೆ ತಕ್ಕಂತೆ ಇರಲಿಲ್ಲವಾದರೂ, ಅವರು 'ಮಜಾ ಟಾಕೀಸ್' ಮೂಲಕ ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನು ಸೆಳೆದರು. ಸಕ್ಸಸ್ ಬಗ್ಗೆ ಅವರ ಅನುಭವ ಹಂಚಿಕೊಂಡಿದ್ದಾರೆ.

ಸಕ್ಸಸ್ ಅನ್ನೋದು ಇಂದಿಗೂ ನಂಗೆ ದೊಡ್ಡ ಯಕ್ಷ ಪ್ರಶ್ನೆ; ಸೃಜನ್ ಲೋಕೇಶ್ ಹೀಗ್ಯಾಕಂದ್ರು?
ಸೃಜನ್
Updated By: ರಾಜೇಶ್ ದುಗ್ಗುಮನೆ

Updated on: Sep 03, 2025 | 7:47 AM

ಕನ್ನಡದ ಹಿರಿಯ ನಟ ದಿವಗಂತ ಲೋಕೇಶ್ ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಅವರು ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದರು. ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಇಷ್ಟೇ ಯಶಸ್ಸು ನಟನೆಯಲ್ಲಿ ಸೃಜನ್ ಲೋಕೇಶ್ (Srujan Lokesh) ಅವರಿಗೆ ಸಿಕ್ಕಿಲ್ಲ. ಈ ವಿಚಾರವನ್ನು ಅವರು ಕೂಡ ಒಪ್ಪಿಕೊಳ್ಳುತ್ತಾರೆ. ಆದರೆ, ಯಶಸ್ಸನ್ನು ಹೇಗೆ ಡಿಫೈನ್ ಮಾಡಬೇಕು ಎನ್ನುವ ಗೊಂದಲ ಅವರನ್ನು ಈಗಲೂ ಕಾಡುತ್ತಿದೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು.

ಸೃಜನ್ ಲೋಕೇಶ್ ಅವರು ಬಾಲ ಕಲಾವಿದಾನಗಿಯೇ ಚಿತ್ರರಂಗಕ್ಕೆ ಬಂದರು. ಆ ಬಳಿಕ 2000ರ ಬಳಿಕ ಬಣ್ಣದ ಲೋಕಕ್ಕೆ ಹೀರೋ ಆಗಿ ಕಾಲಿಡುವ ಪ್ರಯತ್ನ ಮಾಡಿದರು. 2008ರ ‘ನವಗ್ರಹ’ ಸಿನಿಮಾದಲ್ಲಿ ಅವರು ಮಾಡಿದ ಗೆಂಡೆ ಪಾತ್ರ ಗಮನ ಸೆಳೆಯಿತು. ಆದಾಗ್ಯೂ ನಂತರ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ.

ಇದನ್ನೂ ಓದಿ
ಸಿಟಿ ಹುಡುಗಿಯರ ಮೇಲೆ ಸಿಟ್ಟು; ಬಕೆಟ್ ಎಸೆದು ಬಾಯಿಗೆ ಬಂದಂತೆ ಬೈದ ಅಕುಲ್
ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ
‘ಕಿತ್ತೋಗಿರೋ ನನ್ಮಕ್ಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’; ಸುದೀಪ್ ಕಿವಿಮಾತು
ನಿಮ್ಮ ಲೈಫ್ ನಿಧಾನ ಎನಿಸುತ್ತಿದೆಯೇ? ಸುದೀಪ್ ಹೇಳಿದ ಈ ಜೀವನ ಪಾಠ ಕೇಳಿ

ಸೃಜನ್ ಅವರಿಗೆ ಸಿನಿಮಾ, ನಟನೆ ಯಶಸ್ಸು ನೀಡಿಲ್ಲ ನಿಜ. ಆದರೆ, ಮಜಾ ಟಾಕೀಸ್ ಹೋಸ್ಟ್ ಮಾಡಿ ಅವರು ಫೇಮಸ್ ಆದರು. ಕಾಮಿಡಿ ಶೋಗಳಿಗೆ ಅವರೇ ಕಿಂಗ್. ಅವರ ಮಾಜಾ ಟಾಕೀಸ್ ಶೋ ಕರ್ನಾಟಕದಲ್ಲಿ ದೊಡ್ಡ ವೀಕ್ಷಕರ ಬಳಗವನ್ನು ಹೊಂದಿದೆ ಎಂದೇ ಹೇಳಬಹುದು. ಸೃಜನ್ ಅವರು ಈಗ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಸೃಜನ್ ಲೋಕೇಶ್ ಮಾತು

‘ಜೀವನದಲ್ಲಿ ನಾನು ಮಾಡಿರೋ ಎಲ್ಲ ಕೆಲಸದಲ್ಲಿ ವಿಫಲತೆಯನ್ನೇ ನೋಡಿರೋದು. ನನಗೆ ಯಶಸ್ಸು ಸಿಕ್ಕಿದ್ದನ್ನು ಅಪ್ಪ ನೋಡಲೇ ಇಲ್ಲ. ಸಕಲೇಶಪುರದಲ್ಲಿ ಇಟ್ಟಿಗೆ ಫ್ಯಾಕ್ಟರಿ ಮಾಡಿದೆ, ಯಶಸ್ಸು ಕಾಣಲಿಲ್ಲ. ಹಾರ್ಡ್​ವೇರ್ ಕಂಪನಿ ಶುರುಮಾಡಬೇಕು ಎಂದು ಮಾಡಿದೆ. ಅದೂ ಆಗಲಿಲ್ಲ’ ಎಂದಿದ್ದಾರೆ ಸೃಜನ್.

ಇದನ್ನೂ ಓದಿ: ‘ಮಜಾ ಟಾಕೀಸ್​’ನಿಂದ ಬದಲಾಗಿದೆ ಹಲವರ ಬದುಕು; ವಿವರಿಸಿದ ಸೃಜನ್ ಲೋಕೇಶ್

‘ಸಕ್ಸಸ್ ಅನ್ನೋದು ಈಗಲೂ ನನಗೆ ಯಕ್ಷ ಪ್ರಶ್ನೆ. ಜನ ಹೊಗಳಿದರೆ ಸಕ್ಸಸ್ಸಾ? ದುಡ್ಡು ಮಾಡಿದ್ರೆ ಸಕ್ಸಸ್ಸಾ? ನನ್ನ ಪ್ರಕಾರ ಮನಸ್ಸಿಗೆ ನೆಮ್ಮದಿ ಸಿಕ್ಕ ದಿನ ಯಶಸ್ಸು’ ಎಂದು ಸೃಜನ್ ಲೋಕೇಶ್ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಅವರ ಮಾತು ಅನೇಕರಿಗೆ ಸ್ಫೂರ್ತಿ ಕೊಟ್ಟಿದೆ. ಈ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.