SS Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್​ಎಸ್​ ರಾಜಮೌಳಿ

‘ಎಲ್ಲರಿಗೂ ಸಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ?’ ಎಂದು ಕನ್ನಡದಲ್ಲಿಯೇ ರಾಜಮೌಳಿ ಮಾತು ಆರಂಭಿಸಿದರು. ಜತೆಗೆ ಎರಡು ವಿಚಾರದ ಬಗ್ಗೆ ಅವರು ಕ್ಷಮೆ ಕೇಳಿದರು.

SS Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್​ಎಸ್​ ರಾಜಮೌಳಿ
ರಾಜಮೌಳಿ
Edited By:

Updated on: Nov 26, 2021 | 4:23 PM

‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್​ ಕಲಾವಿದರ ಸಮಾಗಮ ಸಿನಿಮಾದಲ್ಲಿದೆ. ಈಗಾಗಲೇ ರಿಲೀಸ್​ ಆದ ಸಿನಿಮಾದ ಟೀಸರ್​ ಹಾಗೂ ಪೋಸ್ಟರ್​​ಗಳು ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದ ‘ಜನನಿ’ ಸಾಂಗ್​ ರಿಲೀಸ್​ ಮಾಡೋಕೆ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್​ಗೂ ಮೊದಲು ರಾಜಮೌಳಿ ಅವರು ಮಾತನಾಡಿದರು. ಅಷ್ಟೇ ಅಲ್ಲ ಎರಡು ವಿಚಾರದಲ್ಲಿ ಅವರು ಕ್ಷಮೆ ಕೇಳಿ ಮಾತು ಆರಂಭಿಸಿದರು. ಇದೊಂದು ಪ್ರಮೋಷನಲ್​ ಕಾರ್ಯಕ್ರಮ ಅಲ್ಲವೇ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದರು.

‘ಎಲ್ಲರಿಗೂ ಸಮಸ್ಕಾರ. ಎಲ್ಲರೂ ಚೆನ್ನಾಗಿದ್ದೀರಾ?’ ಎಂದು ಕನ್ನಡದಲ್ಲಿಯೇ ರಾಜಮೌಳಿ ಮಾತು ಆರಂಭಿಸಿದರು. ‘ಎರಡು ವಿಷಯದಲ್ಲಿ ನೀವು ನನ್ನನ್ನು ಕ್ಷಮಿಸಬೇಕು. ಒಂದು ನನ್ನ ಕನ್ನಡದ ಬಗ್ಗೆ. ಎರಡು ನಿಮಗೆ ಸಂದರ್ಶನ ಕೊಡುತ್ತಾ ಇಲ್ಲ. ನಾನು ಮಾತ್ರ ಮಾತನಾಡುತ್ತಿದ್ದೇನೆ. ಮುಂದಿನ ತಿಂಗಳು ಟ್ರೇಲರ್​ ರಿಲೀಸ್​ ಆಗಲಿದೆ. ಬೆಂಗಳೂರಲ್ಲಿ ಗ್ರ್ಯಾಂಡ್ ಆಗಿ ಪ್ರೀರಿಲೀಸ್ ಇವೆಂಟ್​ ಮಾಡಲು ನಿರ್ಧರಿಸಿದ್ದೇವೆ. ಆಗ ಜ್ಯೂ.ಎನ್​ಟಿಆರ್​, ಚರಣ್​, ಅಜಯ್​ ದೇವಗನ್​, ಆಲಿಯಾ ಭಟ್​ ಕೂಡ ಇರ್ತಾರೆ’ ಎಂದರು ರಾಜಮೌಳಿ.

‘ನಾನು ಇಂದು ‘ಜನನಿ..’ ಹಾಡಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇದನ್ನು ಸಾಂಗ್​ ಲಾಂಚ್​ ಎಂದು ಹೇಳಲ್ಲ ಅಥವಾ ಇದು ಪ್ರಮೋಷನ್​ ಕಾರ್ಯಕ್ರಮ ಅಲ್ಲ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ಇದೆ ಎಂಬುದನ್ನು ನೋಡಿದ್ದೀರಿ. ಇದರ ಜತೆಗೆ ಭಾವನೆ ಕೂಡ​ ಇದೆ. ಎಮೋಷನ್​ ಇಲ್ಲದೆ ನಾನೇನನ್ನೂ ಮಾಡಲ್ಲ. ಹಳ್ಳಿ ನಾಟುದಲ್ಲೂ ಕೂಡ ಒಂದು ಭಾವನೆ ಇದೆ. ‘ಆರ್​ಆರ್​ಆರ್’​ನ ಜೀವಾಳ ಜನನಿ’ ಎಂದು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು.

ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಆರ್​ಆರ್​​ಆರ್’ ಚಿತ್ರಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಆರ್​​ಆರ್​ಆರ್​’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ಧೂಳೆಬ್ಬಿಸಿವೆ. ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳು ಭರ್ಜರಿ ಸೌಂಡು ಮಾಡಿದ ಬಳಿಕ ‘ಜನನಿ..’ ಗೀತೆಯನ್ನು ಜನರ ಮುಂದೆ ಇಡಲಾಗಿದೆ.

ಇದನ್ನೂ ಓದಿ: RRR ರಿಲೀಸ್​ಗೂ ಮುನ್ನವೇ ಸಲ್ಮಾನ್​ ಖಾನ್​ ಭೇಟಿ ಮಾಡಿದ ರಾಜಮೌಳಿ; ಕೇಳಿ ಬಂತು ಹೊಸ ಅಪ್​ಡೇಟ್​

Published On - 3:37 pm, Fri, 26 November 21