ರಾಜ್ vs ರಾಜ್; ‘ಸು ಫ್ರಮ್ ಸೋ’ ಅಬ್ಬರದ ಮಧ್ಯೆಯೇ ರಿಲೀಸ್ ಆಗಲಿದೆ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ

‘ಸು ಫ್ರಮ್ ಸೋ’ ಸಿನಿಮಾ 40 ಕೋಟಿಗೂ ಹೆಚ್ಚು ಗಳಿಕೆ ಮಾಡುತ್ತಿದ್ದು, 50 ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ. ರಾಜ್ ಬಿ. ಶೆಟ್ಟಿ ನಟನೆಯ ಈ ಸಿನಿಮಾ ಪರಭಾಷೆಗಳಿಗೂ ಡಬ್ ಆಗಿದೆ. ಈಗ ಅವರ ಮುಂದಿನ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಕೂಡ ಈ ಚಿತ್ರದಲ್ಲಿದ್ದಾರೆ.

ರಾಜ್ vs ರಾಜ್; ‘ಸು ಫ್ರಮ್ ಸೋ’ ಅಬ್ಬರದ ಮಧ್ಯೆಯೇ ರಿಲೀಸ್ ಆಗಲಿದೆ ರಾಜ್ ಬಿ. ಶೆಟ್ಟಿ ಹೊಸ ಸಿನಿಮಾ
ರಾಜ್ ಬಿ ಶೆಟ್ಟಿ

Updated on: Aug 05, 2025 | 12:15 PM

‘ಸು ಫ್ರಮ್ ಸೋ’ ಸಿನಿಮಾ ಎಲ್ಲ ಕಡೆಗಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಪರಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಿದ್ದು, ಉತ್ತಮ ವಿಮರ್ಶೆ ಪಡೆದಿದೆ. ಈಗ ‘ಸು ಫ್ರಮ್ ಸೋ’ ಸಿನಿಮಾದ ಗಳಿಕೆ 40 ಕೋಟಿ ರೂಪಾಯಿ ಸಮೀಪಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ. ‘ಸು ಫ್ರಮ್ ಸೋ’ ಸಿನಿಮಾ ಅಬ್ಬರಿಸುತ್ತಿರುವಾಗಲೇ ರಾಜ್ ಬಿ. ಶೆಟ್ಟಿ ನಟನೆಯ ಮತ್ತೊಂದು ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಹೀಗಾಗಿ ಬಾಕ್ಸ್ ಆಫೀಸ್​​ನಲ್ಲಿ ರಾಜ್ vs ರಾಜ್ ಆಗಲಿದೆ.

ರಾಜ್ ಬಿ. ಶೆಟ್ಟಿ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ. ಅವರು ಯಾವುದಾದರೂ ಸಿನಿಮಾ ಮಾಡುತ್ತಾರೆ ಎಂದರೆ ಅಲ್ಲಿ ಒಂದು ವಿಶೇಷ ಕಾರಣ ಇರುತ್ತದೆ. ಅವರು ‘ಸು ಫ್ರಮ್ ಸೋ’ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಯಾರೂ ಮಾಹಿತಿ ನೀಡಿರಲಿಲ್ಲ. ಸಿನಿಮಾ ರಿಲೀಸ್ ಆದ ಬಳಿಕ ಆ ಬಗ್ಗೆ ಮಾಹಿತಿ ಸಿಕ್ಕಿತು. ರಾಜ್ ಬಿ. ಶೆಟ್ಟಿ ಅವರು ಚಿತ್ರದ ಮೂಲಕ ಗೆಲುವು ಕಂಡಿದ್ದಾರೆ. ಈಗ ಅವರ ನಟನೆಯ ‘45’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಇದು ಪ್ಯಾನ್ ಇಂಡಿಯಾ ಚಿತ್ರ.

ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಕರಾಗಿ ಇಷ್ಟ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಆ ಚಿತ್ರಕ್ಕೆ ‘45’ ಎನ್ನುವ ಶೀರ್ಷಿಕೆ ಕೊಡಲಾಗಿದೆ. ಸಿನಿಮಾದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 45 ಗಂಟೆಯಲ್ಲಿ ಸಿನಿಮಾದ ಕಥೆ ಸಾಗಲಿದೆ.

ಇದನ್ನೂ ಓದಿ
ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’
ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರೀತಿಯೇ ಕೇಸ್ ಹಾಕಿದ ನಟಿ
ನಟಿ ಕಾಜೋಲ್ ಬಳಿ ಆಸ್ತಿ ಇಷ್ಟೊಂದಾ? ಅಜಯ್ ದಂಪತಿ ಪೈಕಿ ಯಾರು ಶ್ರೀಮಂತರು?
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ತಗ್ಗೋ ಮಾತೇ ಇಲ್ಲ; 50 ಕೋಟಿ ರೂ. ಕ್ಲಬ್ ಸೇರಲಿದೆ ‘ಸು ಫ್ರಮ್ ಸೋ’

‘ಸು ಫ್ರಮ್ ಸೋ’ ಇನ್ನೂ ಕೆಲ ವಾರ ಅಬ್ಬರಿಸಲಿದೆ. ಹೀಗಿರುವಾಗಲೇ ‘45’ ಸಿನಿಮಾ ರಿಲೀಸ್ ಆಗುತ್ತಿದೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆ ಕಾಣಲಿದೆ. ಹಾಗಾದಲ್ಲಿ ಬಾಕ್ಸ್ ಆಫೀಸ್​ನಲ್ಲಿ ‘ರಾಜ್ vs ರಾಜ್’ ಎಂಬ ಪರಿಸ್ಥಿತಿ ಮೂಡಿದರೂ ಅಚ್ಚರಿ ಏನಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Tue, 5 August 25