
ಸ್ಯಾಂಡಲ್ವುಡ್ನಲ್ಲಿ ಈಗ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಜುಲೈ ತಿಂಗಳಲ್ಲಿ ಒಳ್ಳೊಳ್ಳೆಯ ಚಿತ್ರಗಳು ಥಿಯೇಟರ್ಗೆ ಬರುತ್ತಿವೆ. ಈಗಾಗಲೇ ‘ಎಕ್ಕ’ (Ekka Movie) ಹಾಗೂ ‘ಜೂನಿಯರ್’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಹೀಗಿರುವಾಗಲೇ ಈ ವಾರ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಇದೆ. ಇಷ್ಟೇ ಅಲ್ಲ, ಚಿತ್ರದ ಪ್ರೀಮಿಯರ್ ಶೋ ನೋಡಿರೋ ಪ್ರೇಕ್ಷಕರು ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ಗೆ ಒಂದೇ ತಿಂಗಳಲ್ಲಿ ಮೂರು ಹಿಟ್ ಸಿನಿಮಾಗಳು ಸಿಗುವ ನಿರೀಕ್ಷೆ ಇದೆ.
‘ಸು ಫ್ರಮ್ ಸೋ’ ಚಿತ್ರದಲ್ಲಿ ಯಾವುದೇ ದೊಡ್ಡ ಸ್ಟಾರ್ಸ್ ಇಲ್ಲ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೆಪಿ ತುಮಿನಾಡ ಅವರು. ಈ ಸಿನಿಮಾ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲಂಸ್’ ಲಾಂಛನದ ಅಡಿಯಲ್ಲಿ ರಾಜ್ ಬಿ. ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ಮಾಡಿದ್ದಾರೆ. ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ಮೈಮ್ ರಾಮದಾಸ್, ದೀಪಕ್ ರೈ ಪಣಜೆ, ಅರ್ಜುನ್ ಕಜೆ ಮೊದಲಾದವರು ಅಭಿನಯಿಸಿದ್ದಾರೆ. ಎಲ್ಲರೂ ಈ ಮೊದಲು ಪೋಷಕ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡಿರುವುದು ವಿಶೇಷ.
ಇದನ್ನೂ ಓದಿ: ಹಾರರ್ ಕಾಮಿಡಿ ಶೈಲಿಯ ‘ಸು ಫ್ರಮ್ ಸೋ’ ಟ್ರೇಲರ್ನಲ್ಲಿ ಟೈಟಲ್ ಅರ್ಥ ರಿವೀಲ್
ಇದು ಮಂಗಳು ಭಾಗದಲ್ಲಿ ನಡೆಯುವ ಕಥೆ. ಹೀಗಾಗಿ, ಅದೇ ಆ ಭಾಗದ ಭಾಷೆಯನ್ನೇ ಇಲ್ಲಿ ಬಳಸಲಾಗಿದೆ. ಇದು ಚಿತ್ರದ ಹೈಲೈಟ್ ಕೂಡ ಹೌದು. ಇದು ಹಾರರ್ ಕಾಮಿಡಿ ಸಿನಿಮಾ. ಹಾರರ್ ಸಿನಿಮಾ ಅಂತ ಇಲ್ಲಿ ಭಯ ಪಡೋ ಅಗತ್ಯ ಇಲ್ಲ. ಏಕೆಂದರೆ ಅಲ್ಲಿಯೂ ನಿಮಗೆ ನಗು ಬರೋದು ಗ್ಯಾರಂಟಿ. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎನ್ನುತ್ತಿದೆ ಟ್ರೇಲರ್.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಗಬೇಕಿದೆ. ಈ ಚಿತ್ರದ ಪ್ರೀಮಿಯರ್ ಶೋನ ಜುಲೈ 21ರಂದು ಮಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಹೊಸ ಪ್ರಯತ್ನವನ್ನು ಎಲ್ಲರೂ ಹೊಗಳಿದ್ದಾರೆ.
#SuFromSo ನ ಮಂಗಳೂರಿನಲ್ಲಿದ್ದಂತಹ Paid Premiere ಶೋ ಜಸ್ಟ್ ನೋಡಿ ಬಂದೆ. ಎಂಥಾ ಅದ್ಭುತ ಚಿತ್ರ.
Theatre background ನ ಕಲಾವಿದರು ಬೆಳ್ಳಿ ತೆರೆಯಲ್ಲಿ ಮಿಂಚಿದ್ದಾರೆ. ೨೫ಕ್ಕೆ ಚಿತ್ರಮಂದಿರಗಳಲ್ಲಿ ಮಿಸ್ ಮಾಡ್ದೆ ನೋಡಿ. ಗೆಲ್ಲೋದಂತೂ ಪಕ್ಕಾ 🔥
Thank you @RajbShettyOMK for giving us the best in Horror Comedy 😍— ಮಿಲ್ಟನ್ ಕೋಡಿಕಲ್ | Milton Kodikal (@milton_kodikal) July 21, 2025
#SuFromSo uff, so good. Ravi anna for the win. Go watch when it releases on 25th, kind folks. @RajbShettyOMK and team, you’ll have this. #KannadaCinema
Caught the Mangalore paid premiere. There are three more in Shivamogga, Mysuru and Bengaluru. pic.twitter.com/XjxIDLYyEn— Subha Jayanagaraja (@subhajrao) July 21, 2025
ಜುಲೈ 24ರಂದು ಬೆಂಗಳೂರಿನಲ್ಲೂ ಪ್ರೀಮಿಯುರ್ ಶೋನ ಆಯೋಜನೆ ಮಾಡಲಾಗಿದೆ. ಈ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಇಷ್ಟವಾದರೆ ಸ್ಯಾಂಡಲ್ವುಡ್ಗೆ ಮತ್ತೊಂದು ಚೈತನ್ಯ ಸಿಕ್ಕಂತೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Tue, 22 July 25