ಹಾರರ್ ಕಾಮಿಡಿ ಶೈಲಿಯ ‘ಸು ಫ್ರಮ್ ಸೋ’ ಟ್ರೇಲರ್‌ನಲ್ಲಿ ಟೈಟಲ್ ಅರ್ಥ ರಿವೀಲ್
ರಾಜ್ ಬಿ. ಶೆಟ್ಟಿ ಅವರ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಹಾರರ್ ಕಾಮಿಡಿ ಶೈಲಿಯ ಈ ಚಿತ್ರದ ಟ್ರೇಲರ್‌ನಲ್ಲಿ ಸಿನಿಮಾದ ಶೀರ್ಷಿಕೆಯ ಅರ್ಥವನ್ನು ಬಹಿರಂಗಪಡಿಸಲಾಗಿದೆ. ಜೆಪಿ ತುಮಿನಾಡ ನಿರ್ದೇಶನದ ಈ ಚಿತ್ರವು ಸ್ಥಳೀಯ ಕಲಾವಿದರನ್ನು ಒಳಗೊಂಡಿದೆ ಮತ್ತು ಜುಲೈ 25 ರಂದು ಬಿಡುಗಡೆಯಾಗಲಿದೆ. ಟ್ರೇಲರ್‌ನ ಹಾರರ್ ಕಾಮಿಡಿ ಶೈಲಿ ಎಲ್ಲರ ಗಮನ ಸೆಳೆದಿದೆ.

ರಾಜ್ ಬಿ. ಶೆಟ್ಟಿ (Raj B Shetty) ಅವರು ಸದಭಿರುಚಿ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶಕನಾಗಿ, ನಟನಾಗಿ, ಚಿತ್ರಕಥೆ ಬರಹಗಾರನಾಗಿ ಅವರು ಗಮನ ಸೆಳೆದಿದ್ದಾರೆ. ಈಗ ಅವರ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಟೈಟಲ್ನ ಅರ್ಥ ರಿವೀಲ್ ಆಗಿದೆ. ಈ ಚಿತ್ರದ ಟೈಟಲ್ ಅರ್ಥ ಸಿಂಪಲ್ ಆಗಿದೆ. ಈ ಶೀರ್ಷಿಕೆ ಇಡೋದಕ್ಕೂ ಒಂದು ಕಾರಣ ಇದೆ.
ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಸ್ಥಳೀಯ ಕಲಾವಿದರನ್ನೇ ಇಟ್ಟುಕೊಂಡು ‘ಸು ಫ್ರಮ್ ಸೋ’ ಮಾಡಲಾಗಿದೆ. ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ಹಾಗೂ ರಾಜ್ ಬಿ. ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಜೆಪಿ ತುಮಿನಾಡ, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಜೆಪಿ ತುಮಿನಾಡ ಅವರೇ ನಿರ್ದೇಶನ ಮಾಡಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಟ್ರೇಲರ್:
ಜೆಪಿ ತುಮಿನಾಡ ಅವರಿಗೆ ಇದು ನಿರ್ದೇಶನದಲ್ಲಿ ಮೊದಲ ಅನುಭವ. ಆರು ವರ್ಷಗಳ ಹಿಂದೆಯೇ ಅವರು ಸಿದ್ದ ಮಾಡಿಕೊಂಡಿದ್ದ ಈ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಟ್ರೇಲರ್ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಆ ಊರಲ್ಲಿ ಮೈಮೇಲೆ ಬರೋ ದೆವ್ವ ತುಂಬಾನೇ ಕಾಟ ಕೊಡುತ್ತದೆ. ದೆವ್ವದ ಬಳಿ ನೀನು ಯಾರು ಎಂದು ಕೇಳಿದಾಗ, ‘ಸೋಮೇಶ್ವರದ ಸುಲೋಚನ’ ಎಂಬ ಉತ್ತರ ಬರುತ್ತದೆ. ಹೀಗಾಗಿ, ಸಿನಿಮಾದ ಟೈಟಲ್ ಅರ್ಥ ‘ಸುಲಚೋನ ಫ್ರಮ್ ಸೋಮೇಶ್ವರ’ ಎಂದು. ಇದನ್ನು ಶಾರ್ಟ್ ಆಗಿ ‘ಸು ಫ್ರಮ್ ಸೋ’ ಎಂದು ಇಡಲಾಗಿದೆ.
ಇದನ್ನೂ ಓದಿ: ‘45’ ಸಿನಿಮಾ ಹಾಡಿನಲ್ಲಿ ಶಿವಣ್ಣ, ಉಪ್ಪಿ, ರಾಜ್ ಶೆಟ್ಟಿ ಜತೆ ಉಗಾಂಡ ಮಕ್ಕಳ ಡ್ಯಾನ್ಸ್
ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಸಂದೀಪ್ ತುಳಸಿದಾಸ್ ಹಿನ್ನಲೆ ಸಂಗೀತ ನೀಡಿದ್ದಾರೆ. ‘ಡಾಂಕ್ಸ್ ಅಂಥಮ್’ ಹಾಡು ಈಗಾಗಲೇ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಜುಲೈ 25 ಬಿಡುಗಡೆಯಾಗುತ್ತಿದೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Wed, 16 July 25








