ಮ್ಯಾಚ್ ಮುಗಿಸಿ ಮೆಟ್ರೋದಲ್ಲಿ ಬಂದ ಕಿಚ್ಚ ಸುದೀಪ್ ಆ್ಯಂಡ್ ಟೀಂ; ಇಲ್ಲಿದೆ ವಿಡಿಯೋ

ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ. ಮೊದಲ ಪಂದ್ಯ ಗೆದ್ದಾಗಿದೆ. ಈಗ ಅವರು ಹೈದರಾಬಾದ್‌ನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸುದೀಪ್ ಅವರ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ಮ್ಯಾಚ್ ಮುಗಿಸಿ ಮೆಟ್ರೋದಲ್ಲಿ ಬಂದ ಕಿಚ್ಚ ಸುದೀಪ್ ಆ್ಯಂಡ್ ಟೀಂ; ಇಲ್ಲಿದೆ ವಿಡಿಯೋ
ಸುದೀಪ್

Updated on: Feb 13, 2025 | 12:48 PM

ಕಿಚ್ಚ ಸುದೀಪ್ ಅವರು ಸದ್ಯ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್​’ನಲ್ಲಿ (ಸಿಸಿಎಲ್​) ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ಸಮಯ ಮೀಸಲಿಡುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿರೋ ಅವರು ಕ್ರಿಕೆಟ್​ನತ್ತ ಗಮನ ಹರಿಸಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ಪರವಾಗಿ ಆಡುತ್ತಿರುವ ಅವರು ಟೀಂನ ಹೈಲೈಟ್ ಆಗಿದ್ದಾರೆ. ಮೊದಲ ಪಂದ್ಯವನ್ನು ಗೆದ್ದಿರೋ ಅವರು ಎರಡನೇ ಪಂದ್ಯವನ್ನಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗ ಸುದೀಪ್ ಅವರು ಕ್ರಿಕೆಟ್ ಆಡಿ ಮೆಟ್ರೋದಲ್ಲಿ ಸಂಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಫೆಬ್ರವರಿ 15 ಅಂದರೆ ಶನಿವಾರ ಕರ್ನಾಟಕ ಬುಲ್ಡೋಜರ್ಸ್ ತಂಡ ಮುಂಬೈ ಹೀರೋಸ್​ನ ಎದುರಿಸಲಿದೆ. ಹೈದರಾಬಾದ್​ನಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದೆ. ಈ ಪಂದ್ಯದ ಸಿದ್ಧತೆಗಾಗಿ ಕರ್ನಾಟಕ ತಂಡದವರು ಹೈದರಾಬಾದ್​ನಲ್ಲಿ ಇದ್ದು ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಪ್ರ್ಯಾಕ್ಟಿಸ್ ಮುಗಿಸಿ ಐಷಾರಾಮಿ ಕಾರು ಬಳಸುವ ಬದಲು ಸುದೀಪ್ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.


ಸುದೀಪ್ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುದೀಪ್ ಸರಳತೆಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಸಾಕಷ್ಟು ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಗತ್ತು ತೋರಿಸಿ ಬಂದಿದ್ದ ಕಿಚ್ಚ ಸುದೀಪ್

ಸಿಸಿಎಲ್​ನಲ್ಲಿ ಸುದೀಪ್ ತಂಡ ಈಗಾಗಲೇ ಒಂದು ಮ್ಯಾಚ್ ಗೆದ್ದಿರುವುದರಿಂದ ಹೊಸ ಹುರುಪು ಬಂದಿದೆ. ಈಗ ಬಾಲಿವುಡ್​ ತಂಡದ ವಿರುದ್ಧ ಆಟ ಆಡಲಿದ್ದಾರೆ. ವೀಕೆಂಡ್​ನಲ್ಲಿ ನಿರಂತರವಾಗಿ ಪಂದ್ಯಗಳು ನಡೆಯಲಿವೆ. ಮಾರ್ಚ್ 2ರಂದು ಫಿನಾಲೆ ನಡೆಯಲಿದೆ. ಇದಕ್ಕೆ ಜಾಗ ಇನ್ನೂ ನಿರ್ಧಾರ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:26 am, Thu, 13 February 25