ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ

|

Updated on: May 19, 2021 | 3:31 PM

ಪೃಥ್ವಿ ಅಂಬರ್ ತಮ್ಮ ಹುಟ್ಟೂರಾದ ಕಾಸರಗೋಡಿಗೆ ತೆರಳಿದ್ದಾರೆ. ಅಲ್ಲಿ ಕೃಷಿ ಹಾಗೂ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೃಥ್ವಿ ಮಾತನಾಡಿದ್ದಾರೆ.

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ
ಪೃಥ್ವಿ ಅಂಬರ್
Follow us on

ಕೊರೊನಾ ವೈರಸ್​ ಮಿತಿ ಮೀರುತ್ತಿರುವುದರಿಂದ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಹುಟ್ಟೂರು ಸೇರಿದ್ದಾರೆ. ಕೆಲವರು ಕೃಷಿಯಲ್ಲಿ ತೊಡಗಿಕೊಂಡರೆ ಇನ್ನೂ ಕೆಲವರು ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್​ ಈ ಎರಡೂ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ತಮ್ಮೂರಾದ ಕಾಸರಗೋಡಿಗೆ ತೆರಳಿರುವ ಅವರು, ದಿನಚರಿ ಬದಲಿಸಿಕೊಂಡಿದ್ದಾರೆ. ಆ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ ಜತೆ ಮಾತನಾಡಿದ್ದಾರೆ. 

 ಲಾಕ್​ಡೌನ್​ ಸ್ಪೆಷಲ್​ ಏನು?

ನಾನು ಕಾಸರಗೋಡಲ್ಲಿದ್ದೇನೆ. ಗೆಳೆಯರ ಜತೆ ಸೇರಿ ಸ್ಕ್ರಿಪ್ಟ್​ ಮಾಡುತ್ತಿದ್ದೇನೆ. ಮಲ್ಲಿಗೆ ತೋಟ ಇದೆ ಅದರಲ್ಲಿ ಕೆಲಸ ಮಾಡುತ್ತಿದ್ದೇನೆ. ತರಕಾರಿ ಕೂಡ ಬೆಳೆಯುತ್ತಿದ್ದೇನೆ. ಚಿಕ್ಕವನಿದ್ದಾಗ ಕೃಷಿ ಮಾಡುತ್ತಿದೆ. ಹೀಗಾಗಿ, ಅದನ್ನು ಮರೆತಿಲ್ಲ. ಬಿಡುವ ಸಿಕ್ಕಾಗ ಸಿನಿಮಾ ನೋಡುತ್ತಿದ್ದೇನೆ. ಕೆಲವು ರಿಸರ್ಚ್​ ಮಾಡುತ್ತಾ ಇದೀನಿ.

 ಯಾವೆಲ್ಲಾ ಸಿನಿಮಾಗಳಲ್ಲಿ ಬ್ಯುಸಿ?

ದಿಯಾ ಸಿನಿಮಾ ತೆರೆಕಂಡ ನಂತರ ಸಾಕಷ್ಟು ಆಫರ್​ಗಳು ಬಂದವು. ಹೀಗಾಗಿ, ದಿಯಾ ಆದಮೇಲೆ ನಿರಂತರವಾಗಿ ಶೂಟ್​ನಲ್ಲಿ ಬ್ಯುಸಿಯಾದೆ. ಈಗ ಮನೆಯವರ ಜತೆ ಸಮಯ ಕಳೆಯೋಕೆ ಟೈಮ್​ ಸಿಕ್ಕಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬಹುದು. ಆಗ, ನಾವೆಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.

ನಾನು ಸ್ಕ್ರಿಪ್ಟ್​ ಕೆಲಸ ಮಾಡಿದ ಒಂದು ಪ್ರಾಜೆಕ್ಟ್​ ಶೂಟ್​ಗೆ ರೆಡಿ ಇದೆ. ಈ ಸಿನಿಮಾದಲ್ಲಿ ನಾನು ಮತ್ತು ಖುಷಿ ನಟಿಸುತ್ತಿದ್ದೇವೆ. ಇದೊಂದು ಲವ್​ ಸ್ಟೋರಿ. ದಿಯಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದರ್ಶನ್​ ಅಪೂರ್ವ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೂನ್​ನಲ್ಲಿ ಸಿನಿಮಾ ಶೂಟಿಂಗ್​ ಪ್ಲ್ಯಾನ್​ ಮಾಡಿಕೊಂಡಿದ್ದೆವು. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ಶೂಟಿಂಗ್​ ಮುಂದೆ ಹೋಗಿದೆ.

ಫ್ರೆಂಡ್ಸ್​ ಜತೆ ಸೇರಿ ಹಾರರ್​ ಸಿನಿಮಾ ಮಾಡ್ತಾ ಇದೀನಿ. ಇದರ ಕೆಲಸ ಕೂಡ ಶುರುವಾಗಬೇಕಿದೆ.  ‘ಶುಗರ್​ಲೆಸ್’​, ‘ಲೈಫ್​ ಈಸ್​ ಬ್ಯೂಟಿಫುಲ್’ ಚಿತ್ರದ​ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ನಡೆಯುತ್ತಿದೆ.

 ಈ ಪರಿಸ್ಥಿತಿ ಬಗ್ಗೆ ಏನು ಹೇಳ್ತೀರಾ?

ನಿಜಕ್ಕೂ ಇದು ಕಷ್ಟದ ಸಮಯ. ಹೀಗಾಗಿ, ಎಲ್ಲರೂ ಮಾಸ್ಕ್​ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇದರ ಜತೆಗೆ, ಸರ್ಕಾರ ಏನು ಮಾಡುತ್ತಿದೆಯೋ ಅದೇ ರೀತಿಯಲ್ಲಿ ನಾವು ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಮನೆಯಲ್ಲೇ ಇರಬೇಕು. ಆದರೆ, ಕೆಲವರು ಅನಗತ್ಯ ತಿರುಗಾಡುತ್ತಿದ್ದಾರೆ. ಆ ರೀತಿ ಮಾಡಬಾರದು. ಪ್ರತೀ ಊರು ಹಾಗೂ ವಾರ್ಡ್​ನ ಮುಖ್ಯಸ್ಥರು ಇದರ ಮೇಲ್ವಿಚಾರಣೆ ಮಾಡಬೇಕು. ಊರಲ್ಲಿ ಒಂದು ಮನೆಗೆ ಕೊರೊನಾ ಬಂದಿದೆ ಎಂದರೆ, ಅವರಿಗೆ ಎಲ್ಲರೂ ಅಗತ್ಯ ಇರುವ ಸಹಾಯ ಮಾಡಬೇಕು. ಆಗ ಅವರಿಗೆ ಹೊರ ಬರುವ ಅವಶ್ಯಕತೆ ಇರುವುದಿಲ್ಲ.

 ಫಿಟ್​ ಆಗಿರೋಕೆ ಏನು ಮಾಡ್ತಾ ಇದೀರಾ?

ಬೆಂಗಳೂರಿನಲ್ಲಿದ್ದಾಗ ಜಿಮ್​ ಮಾಡುತ್ತಿದ್ದೆ. ಆದರೆ, ಇಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ, ಯೋಗಾಸನ ಮಾಡ್ತೀನಿ. ಮನೆಯವರೆಲ್ಲಿ ಹಿರಿಯರಿದ್ದಾರೆ. ಹೀಗಾಗಿ, ವಾಕಿಂಗ್​ಗೆ ಬ್ರೇಕ್​ ಹಾಕಿದ್ದೆನೆ. ​ಸಣ್ಣ-ಪುಟ್ಟ ವರ್ಕೌಟ್ ಮಾಡೋಕೆ ಏನು ಬೇಕೋ ಅದೆಲ್ಲವೂ ಇದೆ. ಹೀಗಾಗಿ, ಸಣ್ಣಪುಟ್ಟ ವರ್ಕೌಟ್​ ಮಾಡುತ್ತಿದ್ದೇನೆ.

ಇದನ್ನೂ ಓದಿ:  Adhvithi Shetty: ಮಾನಸಿಕ ಆರೋಗ್ಯ​ ಕಾಪಾಡಿಕೊಳ್ಳೋಕೆ ನಟಿ ಅದ್ವಿತಿ ಶೆಟ್ಟಿ ಕೊಟ್ರು ಟಿಪ್ಸ್​