ಯಾರೂ ಬೆಂಬಲ ಕೊಡ್ತಾ ಇಲ್ಲ: ಸುನಾಮಿ ಕಿಟ್ಟಿ ಬೇಸರ
Sunami Kitty: ಬಿಗ್ಬಾಸ್ ಶೋಗೆ ಬಂದು ಜನಪ್ರಿಯರಾಗಿದ್ದ ಎಚ್ಡಿ ಕೋಟೆಯ ತರಕಾರಿ ವ್ಯಾಪಾರಿ ಸುನಾಮಿ ಕಿಟ್ಟಿ, ಶೋ ಮುಗಿದ ಬಳಿಕ ಕೆಲವು ವಿವಾದಗಳಿಗೆ ಗುರಿಯಾದರು ಪ್ರಕರಣ ಒಂದರಲ್ಲಿ ಬಂಧಿತರಾಗಿ ಜೈಲು ವಾಸವೂ ಅನುಭವಿಸಿದರು. ಇದೀಗ ‘ಕೋರ’ ಹೆಸರಿನ ಸಿನಿಮಾದಲ್ಲಿ ಕಿಟ್ಟಿ ನಟಿಸಿದ್ದು, ತಮಗೆ ಜನರ, ಸಿನಿಮಾ ಸೆಲೆಬ್ರಿಟಿಗಳ ಬೆಂಬಲ ಬೇಕಿದೆ ಎಂದು ಮನವಿ ಮಾಡಿದ್ದಾರೆ.

ಸುನಾಮಿ ಕಿಟ್ಟಿ (Tsunami Kitty), ಎಚ್ಡಿ ಕೋಟೆಯಲ್ಲಿ ತರಕಾರಿ ಮಾರುತ್ತಿದ್ದ ವ್ಯಕ್ತಿ ಬಿಗ್ಬಾಸ್ ಶೋಗೆ ಬಂದು ರಾತ್ರೋ ರಾತ್ರಿ ಜನಪ್ರಿಯನಾದ. ಆದರೆ ಶೋ ಮುಗಿದ ಮೇಲೆ ಜನಪ್ರಿಯತೆ ತಲೆಗೆ ಹತ್ತಿ ಕೆಲ ಅಪರಾಧ ಚಟುವಟಿಕೆಗಳಲ್ಲಿ ಭಾಗಿ ಆಗಿ ಜೈಲುವಾಸವೂ ಅನುಭವಿಸಿ ಬಂದಿದ್ದಾರೆ. ಇದೀಗ ಸಿನಿಮಾ ಮಾಡಿರುವ ಸುನಾಮಿ ಕಿಟ್ಟಿ, ನನಗೆ ಬೆಂಬಲ ಬೇಕು ಎಂದು ಅಂಗಲಾಚುತ್ತಿದ್ದಾರೆ. ಈ ಹಿಂದೆ ಆದ ಘಟನೆಗಳಲ್ಲಿ ನನ್ನದೇನೂ ತಪ್ಪಿಲ್ಲ, ಆದರೆ ಜನ ನನ್ನನ್ನು ತಪ್ಪು ತಿಳಿದುಕೊಂಡಿದ್ದಾರೆ ಎಂದಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಸುನಾಮಿ ಕಿಟ್ಟಿ, ‘ಒಂದ್ ರಿಯಾಲಿಟಿ ಶೋ ನಮ್ ಲೈಫ್ ಬದಲಿಸಲ್ಲ, ರಿಯಾಲಿಟಿ ಶೋಗೆ ಹೋದ ತಕ್ಷಣ ಸ್ಟಾರ್ ಆಗ್ತಿವಿ, ಲೈಫಲ್ಲಿ ಸೆಟ್ಲ್ ಆಗ್ತೀವಿ ಅನದನೋದೆಲ್ಲ ಸುಳ್ಳು, ಬಡವರು ಮಕ್ಳು ಬೆಳಿಬೇಕು ಅಂತ ಡೈಲಾಗ್ ಹೊಡೆಯೋದಲ್ಲ, ಬೆಳೆಸಬೇಕು, ಬೆಂಬಲಿಸಬೇಕು, ಈಗ ನನಗೆ ಯಾವುದೇ ಸಪೋರ್ಟ್ ಇಲ್ಲ, ಯಾರೂ ಹಿಂದೆ ನಿಲ್ಲಲ್ಲ ಮುಂದೆ ಬೆಳಸಲ್ಲ, ಶೋದಿಂದ ಹೊರಗಡೆ ಬಂದ್ ಮೇಲೆ ದುರಹಂಕಾರ, ಅಹಂಕಾರ ಎಲ್ಲ ಬಿಟ್ಟು ಬದುಕಬೇಕಷ್ಟೆ, ನಾನು ಗೆದ್ದು ನನ್ನ ತಾಯಿನೂ ಗೆಲ್ಲಿಸಿದ್ದಿನಿ ಆದ್ರೂ ಏನು ಆಗ್ಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಹೆಚ್ ಡಿಕೋಟೆಲೆ ತರಕಾರಿ ಮಾರುತ್ತಾ ಜೀವನ ಶುರುವಾಯ್ತು, ಯಾವುದೋ ಶೋ ಮೂಲಕ ಬಂದೆ, ನಮ್ಮ ಹುಡುಗ ನಮ್ಮ ಹುಡುಗ ಅಂದವರೇ ನನ್ ಲೈಫ್ ಹಾಳ್ ಮಾಡಿಬಿಟ್ರು, ನಾನು ತಪ್ಪು ಮಾಡಿದೆ ಆ ನಂತರ ತಿದ್ದಿಕೊಂಡೆ, ಕೆಟ್ಟೋನು ಥರ್ಡ್ ಕ್ಲಾಸ್, ಆಟಿಟ್ಯೂಡ್ ಇದೆ ಅಂದರು, ಸಹಿಸಿಕೊಂಡೆ. ನನ್ನ ಲೈಫಲ್ಲಿ ತುಂಬಾ ಕಾಂಟ್ರವರ್ಸಿ ಆಯ್ತು, ನಾನು ಕೂದಲು ಬಿಟ್ಟ ತಕ್ಷಣ ರೌಡಿ ಅಂದುಕೊಂಡ್ರು, ನಾಲ್ಕ್ ಜನ ಪ್ರೆಂಡ್ಸ್ ಅಂದಾಗ ಜೊತೆಲಿ ಹೋಗ್ತಿವಿ, ನಾನು ಶೋ ಮಾಡಿದ್ದರಿಂದ ನನ್ನ ಫೇಸ್ ನೋಟೆಡ್ ಆಗಿತ್ತು ಆಗ ಅನ್ ಫಾರ್ಚುನೇಟ್ಲಿ ಕೆಲವು ಘಟನೆ ಆಯ್ತು, ಅದಾದ ಮೇಲೆ ಅಯ್ಯೋ ನೋಡು ಶೋ ಮಾಡಿದ, ಈಗ ಗಾಂಚಲಿ ಮಾಡತಾನೆ ಅಂದ್ರು. ಇಷ್ಟು ಸ್ಟೇಶನ್ ನಲ್ಲಿ ಕೇಸ್ ಆಗಿದೆ ಆದರೆ ಯಾವುದೂ ನನ್ನ ವೈಯಕ್ತಿಕ ಕಾರಣಕ್ಕೆ ಆಗಿರೋದು ಅಲ್ಲ’ ಎಂದಿದ್ದಾರೆ ಸುನಾಮಿ ಕಿಟ್ಟಿ.
ಇದನ್ನೂ ಓದಿ:ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ಗೆ 56 ದಿನ ಶೂಟಿಂಗ್
ಜೀವನದಲ್ಲಿ ಸಾಕಷ್ಟು ವಿಷಯ ಅರ್ಥ ಆಗಿದೆ, ಅಂದ್ಕೊಂಡಷ್ಟು ಈಜಿ ಇಲ್ಲ, ನಮ್ ಕೆಪ್ಯಾಸಿಟಿಲಿ ನಾವೇ ಬೇಳಿಬೇಕು, ಸಿನಿಮಾನೇ ಮಾಡಬೇಕು,ಸೂಪರ್ ಸ್ಟಾರ್ ಆಗಬೇಕು ಅಂದ್ರೆ ಆಗಲ್ಲ, ದರ್ಶನ್,ಸುದೀಪ್,ಯಶ್,ದುನಿಯಾ ವಿಜಿ ಅವರು ಯಾರೇ ಆಗಲಿ ಅವರೂ ಕಷ್ಟ ಪಟ್ಟಿರ್ತಾರೆ, ಕೋರ ಸಿನಿಮಾಗಾಗಿ ತುಂಬಾ ಕಷ್ಟ ಪಟ್ಡಿದ್ದಿನಿ, ಬದುಕಿ ಬಂದಿದ್ದೇ ಹೆಚ್ಚು ನಾವು, ಶೂಟಿಂಗ್ ವೇಳೆ ಕಣ್ಣಿಗೆ ಪೆಟ್ಟಾಗಿ ಮೂರು ತಿಂಗಳು ರೆಸ್ಟ್ ತಗೊಂಡೆ, ಹೆಲಿಕ್ಯಾಮ್ ಲ್ಲಿ ಹೀರೋ ಹೀರೋಇನ್ ಫೇಸ್ ಮುಂದೆ ಬಂದು ತಲೆಗೆ ಹೊಡಿತು, ಇಬ್ರೂ ಸ್ಪಾಟ್ ಆಗ್ತಿದ್ವಿ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ’ ಎಂದಿದ್ದಾರೆ ಕಿಟ್ಟಿ.
ರಜತ್ ಹಾಗೂ ವಿನಯ್ ಅವರು ಜೈಲಿಗೆ ಹೋದ ವಿಷಯ ಮಾತನಾಡಿ, ‘ಶೋ ಬಹಳ ಒಳ್ಳೆಯ ಶೋ, ಆದರೆ ಅದಕ್ಕೆ ಹೋಗಿ ಬಂದವರಿಗೆಲ್ಲ ಏನೋ ಒಂದು ತೊಂದರೆ ಆಗ್ತಾ ಇದೆ. ರಜತ್ ಬಹಳ ಒಳ್ಳೆಯ ಮನುಷ್ಯ, ನನಗೆ ಮೊದಲಿನಿಂದಲೂ ಅವರ ಪರಿಚಯ ಇದೆ. ಈಗ ಅವರಿಗೆ ಸಮಸ್ಯೆ ಆಗಿದೆ. ನನ್ನ ಲೈಫಲ್ಲೂ ಸಮಸ್ಯೆ ಆಗಿತ್ತು, ಈಗ ತಿದ್ದಿಕೊಂಡು ನಡೆಯುತ್ತಿದ್ದೀನಿ. ನಾನೇನೂ ಕೋಟಿ-ಕೋಟಿ ದುಡ್ಡು ಮಾಡಿ ಇಟ್ಟಿಲ್ಲ. ಆದರೂ ಜನ ಆಡಿಕೊಂಡರು, ಏನೂ ಆಗದೇ ಇದ್ರೆ ಮತ್ತೆ ತರಕಾರಿ ಮಾರಿಕೊಂಡು ಇರೋಣ ಅನಿಸುತ್ತೆ’ ಎಂದಿದ್ದಾರೆ ಕಿಟ್ಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ