AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ

ಬಿಗ್​ಬಾಸ್​ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ತನಿಷಾ ಕುಪ್ಪಂಡ ನಟಿಯಾಗಿರುವ ಜೊತೆಗೆ ಉದ್ಯಮಿಯೂ ಹೌದು. ಈಗಾಗಲೇ ಹೋಟೆಲ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿ ಯಶಸ್ಸು ಗಳಿಸಿರುವ ತನಿಷಾ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಸಿನಿಮಾ ನಿರ್ಮಿಸುತ್ತಿದ್ದಾರೆ.

ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ
ಮಂಜುನಾಥ ಸಿ.
|

Updated on: Sep 08, 2024 | 11:31 AM

Share

ನಟಿ ತಮಿಷಾ ಕುಪ್ಪಂಡ, ಬಿಗ್​ಬಾಸ್​ ರಿಯಾಲಿಟಿ ಶೋಗೆ ಬಂದ ಬಳಿಕ ದೊಡ್ಡ ಪ್ರಮಾಣದ ಜನಪ್ರಿಯತೆ ಹೆಚ್ಚಿಸಿಕೊಂಡರು. ಬಿಗ್​ಬಾಸ್​ನಲ್ಲಿ ಉತ್ತಮವಾಗಿ ಆಡಿದ್ದ ತನಿಷಾ ಕುಪ್ಪಂಡ ವೀಕ್ಷಕರ ಸೆಳೆಯಲು ಯಶಸ್ವಿಯಾದರು. ಫಿನಾಲೆಗೆ ಕೆಲವೇ ದಿನಗಳಿಗೆ ಮುಂಚಿತವಾಗಿ ಆಟದಿಂದ ಹೊರಗೆ ಹೋದ ತನಿಷಾ, ಬಿಗ್​ಬಾಸ್​ನಿಂದ ದೊರೆತ ಜನಪ್ರಿಯತೆಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಟಿಯ ಜೊತೆಗೆ ಉದ್ಯಮಿಯೂ ಆಗಿರುವ ತನಿಷಾ ಕುಪ್ಪಂಡ, ಬಿಗ್​ಬಾಸ್​ನಿಂದ ಹೊರಬಂದ ಬಳಿಕ ಬೇರೆ ಬೇರೆ ಉದ್ಯಮಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೋಟೆಲ್, ಆಭರಣ ಮಳಿಗೆಗಳನ್ನು ಸ್ಥಾಪಿಸಿದ್ದ ತನಿಷಾ ಈಗ ಒಮ್ಮೆಲೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ತನಿಷಾ ಕುಪ್ಪಂಡ ತಮ್ಮದೇ ಹೆಸರಿನಲ್ಲಿ ‘ಕುಪ್ಪಂಡ ಪ್ರೊಡಕ್ಷನ್ಸ್’ ಪ್ರಾರಂಭ ಮಾಡಿದ್ದಾರೆ. ಮೊದಲ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಸಿನಿಮಾದ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಟೀಸರ್ ನೋಡಿದವರು ಗುಣಮಟ್ಟದ ಟೀಸರ್ ಎಂದು ಕೊಂಡಾಡಿದ್ದಾರೆ ಮಾತ್ರವಲ್ಲದೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ತನಿಷಾ ನಿರ್ಮಾಣ ಮಾಡುತ್ತಿರುವ ಸಿನಿಮಾದ ಹೆಸರು ‘ಕೋಣ’.

ಇದನ್ನೂ ಓದಿ:ಬಿಗ್​ ಬಾಸ್​ ಬೆಡಗಿ ಪ್ರಿಯಾಂಕಾ ತಿಮ್ಮೇಶ್​ಗೆ ಕೋಮಲ್​ ಜತೆ ನಟಿಸೋ ಅವಕಾಶ

‘ಕೋಣ’ ಸಿನಿಮಾನಲ್ಲಿ ಕೋಮಲ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ. ಟೀಸರ್​ನಲ್ಲಿ ತೋರಿಸಿರುವಂತೆ ಕೋಣವೊಂದು ತಪ್ಪಿಸಿಕೊಂಡಿದೆ, ಅದನ್ನು ಹಿಡಿಯಲು ಊರ ಜನ ಭಾರಿ ಹಗ್ಗ, ಪಂಜುಗಳನ್ನು ಹಿಡಿದುಕೊಂಡು ಕೋಣದ ಹಿಂದೆ ಬಿದ್ದಿದ್ದಾರೆ. ಆದರೆ ಕೋಮಲ್ ಕೈಯಲ್ಲಿ ಮಾತ್ರ ಯಾವುದೋ ರೋಬೋಟ್ ಒಂದಿದೆ. ರೋಬೋಟ್​ ಮೈತುಂಬಾ ಲೈಟುಗಳಿದ್ದು, ಒಂದೇ ಸಮನೆ ಮಿನುಗುತ್ತಿದೆ. ಊರ ಜನರೆಲ್ಲ ಪಂಜು, ಹಗ್ಗ ಹಿಡಿದು ತಪ್ಪಿಸಿಕೊಂಡಿರುವ ಕೋಣದ ಹಿಂದೆ ಬಿದ್ದಿದ್ದರೆ ಕೋಮಲ್ ಆ ಪುಟ್ಟ ರೋಬೋಟ್ ಹಿಡಿದುಕೊಂಡು ಕೋಣದ ಹಿಂದೆ ಓಡುತ್ತಿದ್ದಾರೆ.

ಆ ಕೋಣ ತಪ್ಪಿಸಿಕೊಂಡಿದ್ದು ಏಕೆ? ಊರ ಜನರಿಗೆ ಆ ಕೋಣ ಏಕೆ ಬೇಕಾಗಿದೆ? ಕೋಮಲ್ ಕೈಯಲ್ಲಿರುವ ರೋಬೋಟ್ ಮಾದರಿಯ ವಸ್ತು ಯಾವುದು? ಅದಕ್ಕೂ ಕೋಣಕ್ಕೂ ಏನು ಲಿಂಕು, ಕೋಮಲ್​ಗೂ ರೋಬೋಟ್​ಗೆ ಇರುವ ಲಿಂಕ್ ಏನು? ಹೀಗೆ ಹಲವು ಪ್ರಶ್ನೆಗಳು ಟೀಸರ್ ನೋಡಿದರೆ ಏಳುತ್ತಿವೆ. ಟೀಸರ್ ಗುಣಮಟ್ಟದಿಂದ ಕೂಡಿದೆ. ಚಿತ್ರತಂಡದ ಪರಿಶ್ರಮ ಮತ್ತು ಶ್ರದ್ಧೆ ಟೀಸರ್​ನಿಂದ ತಿಳಿದು ಬರುತ್ತಿದೆ. ಸಿನಿಮಾದ ಮುಹೂರ್ತ ದೀಪಾವಳಿಗೆ ನಡೆಯಲಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ.

‘ಕೋಣ’ ಸಿನಿಮಾವನ್ನು ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ‘ಕೋಣ’ ಸಿನಿಮಾ ಬಗ್ಗೆ ಮಾತನಾಡಿರುವ ಕೋಮಲ್, ‘ಇದು ಬಹಳ ವಿಶಿಷ್ಟವಾದ ಕತೆ ಹೊಂದಿರುವ ಸಿನಿಮಾ, ನನ್ನದು ಒಂದು ರೀತಿ ಚಾರ್ಲಿ ಚಾಪ್ಲಿನ್ ರೀತಿಯ ಪಾತ್ರ. ಕತೆಯಲ್ಲಿ ಹಲವು ವಿಷಯಗಳು ಇವೆ. ಕೋಣ, ಭವಿಷ್ಯ ಹೇಳುವ ರೋಬೋಟ್, ಮೂಡನಂಭಿಕೆ, ನಂಬಿಕೆ ಇನ್ನೂ ಹಲವು ಅಂಶಗಳು ಈ ಸಿನಿಮಾದಲ್ಲಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ