AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಮಿ’ ಸುದೀಪ್ ಶಿಷ್ಯನ ಹೊಸ ಸಾಹಸ, ನಟನೆ ಜೊತೆ ನಿರ್ದೇಶನ

Kichcha Sudeep: ಕಿಚ್ಚ ಸುದೀಪ್​ರ ಹಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಕಿಚ್ಚ ಸುದೀಪ್​ರನ್ನು ಗುರುವೆಂದು ಸ್ವೀಕರಿಸಿರುವ ಅನುಭವಿ ಸಹಾಯಕ ನಿರ್ದೇಶಕ ಆಶು, ತಮ್ಮ ಮೊದಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಸಿನಿಮಾಕ್ಕೆ ‘ಟಾಮಿ’ ಎಂದು ಹೆಸರಿಟ್ಟಿದ್ದಾರೆ.

‘ಟಾಮಿ’ ಸುದೀಪ್ ಶಿಷ್ಯನ ಹೊಸ ಸಾಹಸ, ನಟನೆ ಜೊತೆ ನಿರ್ದೇಶನ
Follow us
ಮಂಜುನಾಥ ಸಿ.
|

Updated on: Sep 08, 2024 | 7:25 AM

ನಾಯಕರಾಗಿ ನಟಿಸಿ ನಿರ್ದೇಶನವನ್ನೂ ಮಾಡಿ ಗೆದ್ದವರ ಸಂಖ್ಯೆ ವಿರಳ. ಅದರಲ್ಲೂ ತಮ್ಮ ಮೊದಲ ಸಿನಿಮಾದಲ್ಲೆ ತೆರೆ ಮುಂದೆ ತೆರೆ ಹಿಂದೆ ಕೆಲಸ ಮಾಡುವುದು ಸುಲಭದ ಮಾತಲ್ಲ. ಇದೀಗ ಕಿಚ್ಚ ಸುದೀಪ್ ಶಿಷ್ಯರೊಬ್ಬರು ಇಂಥಹಾ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ನಟನೆ, ನಿರ್ದೇಶನ ಎರಡೂ ಮಾಡಿ ಗೆದ್ದಿರುವ ಸುದೀಪ್ ಅವರನ್ನೇ ಆದರ್ಶವಾಗಿಟ್ಟುಕೊಂಡು ಸಾಹಕ್ಕೆ ಇಳಿದಿದ್ದಾರೆ. ಅಂದಹಾಗೆ ಈ ಸಿನಿಮಾದ ಹೆಸರು ಪೋಸ್ಟರ್ ನೋಡಿದರೆ ‘ಚಾರ್ಲಿ 777’, ‘ನಾನು ಮತ್ತು ಗುಂಡ’ ರೀತಿ ಇದೂ ಸಹ ನಾಯಿಯ ಕುರಿತಾದ ಕತೆ ಹೊಂದಿರುವ ಸಿನಿಮಾ ಆಗಿರಬಹುದೆಂಬ ದಟ್ಟ ಅನುಮಾನ ಮೂಡಿಸುತ್ತಿದೆ.

ನಿನ್ನೆ ನಡೆದ ಗೌರಿ ಗಣೇಶ ಹಬ್ಬಕ್ಕೆ ಸಾಕಷ್ಟು ಹೊಸ ಸಿನಿಮಾಗಳು ಘೋಷಣೆ ಆಗಿವೆ. ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ತಂಡ ‘ಟಾಮಿ’ ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ ಎನ್ನುವುದು ಇದರ ವಿಶೇಷ. ಸಿನಿಮಾವನ್ನು ಆಶು ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ಕಿಚ್ಚ ಸುದೀಪ್ ಫಿಟ್​ನೆಸ್ ಸೀಕ್ರೆಟ್‌ ಇಲ್ಲಿದೆ

‘ಟಾಮಿ’ ಶ್ವಾನ ಪ್ರಿಯರಿಗೆ ಈ ಹೆಸರು ಮತ್ತಷ್ಟು ಆಪ್ತ. ನಿರ್ದೇಶಕ ನಾಯಕ ಆಶು ಅವರಿಗೆ ‘ಟಾಮಿ’ ಮೊದಲ ಸಿನಿಮಾ ಹೌದು, ಆದರೆ ಚಿತ್ರರಂಗವೇನು ಹೊಸದೇನಲ್ಲ. ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮುಕುಂದ ಮುರಾರಿ’, ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ ‘ಅಂಬಿ ನಿಂಗೆ ವಯಸ್ಸಾಯ್ತೊ’, ‘ಕೋಟಿಗೊಬ್ಬ 3’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಆಶು.

ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಾಯಕ ಆಶು, ಜೊತೆಯಲ್ಲಿ ನಾಯಿ ಹಾಗೂ ಆರ್ ಎಕ್ಸ್ ಬೈಕ್ ನೋಡಬಹುದು. ಪೋಸ್ಟರ್ ನೋಡುತ್ತಿದ್ದರೆ ನಾಯಕ ನಾಯಿ ಪ್ರೇಮಿ ಜೊತೆಗೆ ಆರ್ ಎಕ್ಸ್ ಬೈಕ್ ನ ಲವರ್ ಕೂಡ ಆಗಿರುತ್ತಾನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ನಾಯಕನ ರಗಡ್​ ಲುಕ್ ನೋಡಿದರೆ ಇದು ಆಕ್ಷನ್ ಸಿನಿಮಾ ಇರಬಹುದೆಂಬ ಅನುಮಾನವೂ ಕಾಣುತ್ತಿದೆ. ‘ಟಾಮಿ’ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಅನೇಕ ಸ್ನೇಹಿತರು ಸೇರಿ ಬಂಡವಾಳ ಹೂಡುತ್ತಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಪ್ರದ್ಯುತನ್ ‘ಟಾಮಿ’ ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ