‘ನಾಕುತಂತಿ’ ಚಿತ್ರದಲ್ಲಿ ಖುಷಿ ರವಿ, ಸಂಗೀತಾ ಭಟ್, ರೋಷಿಣಿ, ಸಿಂಧು; ಗಮನ ಸೆಳೆದ ಟೀಸರ್

ನಾಲ್ವರು ನಿರ್ದೇಶಕರು ಮತ್ತು ನಾಲ್ವರು ನಟಿಯರು ಒಟ್ಟಾಗಿ ತಯಾರಿಸಿರುವ ವಿಭಿನ್ನ ಕಂಟೆಂಟ್ ಒರಿಯಂಟೆಡ್ ‘ನಾಕು ತಂತಿ’ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ನಾಲ್ವರು ಯುವ ಪತ್ರಕರ್ತೆಯರು ಅದ್ಧೂರಿಯಾಗಿ ಅನಾವರಣಗೊಳಿಸಿದ್ದು, ಸ್ಯಾಂಡ್‌ವುಡ್ ವಲಯದಲ್ಲಿ ಈ ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್​​ಗಾಗಿ ಫ್ಯಾನ್ಸ್ ಕಾದಿದ್ದಾರೆ.

‘ನಾಕುತಂತಿ’ ಚಿತ್ರದಲ್ಲಿ ಖುಷಿ ರವಿ, ಸಂಗೀತಾ ಭಟ್, ರೋಷಿಣಿ, ಸಿಂಧು; ಗಮನ ಸೆಳೆದ ಟೀಸರ್
ನಾಕು ತಂತಿ ಸಿನಿಮಾ

Updated on: Oct 13, 2026 | 12:01 PM

ಮುಖ್ಯಾಂಶಗಳು

  • ನಾಲ್ವರು ಯುವ ಪತ್ರಕರ್ತೆಯರಿಂದ ‘ನಾಕು ತಂತಿ’ ಟೀಸರ್ ಅನಾವರಣ
  • ನಾಲ್ಕು ಭಿನ್ನ ಕಥೆಗಳೊಂದಿಗೆ ಬರುತ್ತಿರುವ ಮಹಿಳಾ ಪ್ರಧಾನ ಸಿನಿಮಾ
  • ಸ್ಯಾಂಡ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಹೊಸ ಕಂಟೆಂಟ್ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳು ಹಾಗೂ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಸದಾ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆಯಾಗಿ ‘ನಾಕು ತಂತಿ’ ಸಿನಿಮಾ ಮೂಡಿಬರುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಗೊಂಡಿದೆ. ವಿಶೇಷವೆಂದರೆ, ಚಿತ್ರದ ಟೀಸರ್ ಅನ್ನು ನಾಲ್ವರು ಯುವ ಪತ್ರಕರ್ತೆಯರು ಅನಾವರಣಗೊಳಿಸಿದರು ಅನ್ನೋದು ವಿಶೇಷ.

ಒಂದು ಸಿನಿಮಾಗೆ ಒಬ್ಬರು ಅಥವಾ ಇಬ್ಬರು ನಿರ್ದೇಶಕರು ಇರೋದು ಸಾಮಾನ್ಯ. ಆದರೆ, ‘ನಾಕು ತಂತಿ’ ಸಿನಿಮಾಗೆ ನಾಲ್ವರು ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಅವರು ನಾಲ್ಕು ಭಿನ್ನ ಕಥೆಗಳನ್ನು ಪ್ರತ್ಯೇಕವಾಗಿ ನಿರ್ದೇಶನ ಮಾಡಿ ಈ ಸಿನಿಮಾವನ್ನು ರೂಪಿಸಿದ್ದಾರೆ.
ಹೆಸರೇ ಹೇಳುವಂತೆ ಈ ಚಿತ್ರದಲ್ಲಿ ನಾಲ್ಕು ಹೆಣ್ಣುಮಕ್ಕಳ ಕಥೆ ಇದೆ. ಇದು ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಖುಷಿ ರವಿ, ರೋಷಿಣಿ ಪ್ರಕಾಶ್, ಬಿಗ್ ಬಾಸ್ ಖ್ಯಾತಿಯ ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ನಾಕು ತಂತಿ’ ಚಿತ್ರದಲ್ಲಿ ಸಿಂಧು ಶ್ರೀನಿವಾಸಮೂರ್ತಿ ಮಹಿಳಾ ಟ್ರಾಫಿಕ್ ಪೊಲೀಸ್ ಆಗಿ ಫೈಟ್ ಮಾಡಿದ್ದಾರೆ. ಖುಷಿ ರವಿ ನರ್ಸ್ ಪಾತ್ರದಲ್ಲಿ, ರೋಷಿಣಿ ಪ್ರಕಾಶ್ ಐಟಿ ಉದ್ಯೋಗಿಯಾಗಿ ಹಾಗೂ ಸಂಗೀತಾ ಭಟ್ ಮಧ್ಯಮ ವರ್ಗದ ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಷ್ಟಗಳ ಬೇಗೆಯಲ್ಲಿ ಬೇಯುವ ನಾಯಕಿಯರು ಕಷ್ಟಗಳನ್ನು ಹೇಗಿ ಮೆಟ್ಟು ನಿಲ್ಲುತ್ತಾರೆ ಅನ್ನೋದೇ ಸಿನಿಮಾ.

YouTube video player

‘ಸುರಂ ಮೂವೀಸ್’ ಬ್ಯಾನರ್ ಅಡಿಯಲ್ಲಿ ಜಯರಾಮ ದೇವಸಮುದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಡಿಕೆಎಸ್ ಪ್ರೊಡಕ್ಷನ್ಸ್‌ನ ಯೋಗೇಶ್ ಬಸವನಗೌಡ ಹಾಗೂ ಸಾಯಿಬಿಂದು ಪ್ರೊಡಕ್ಷನ್ಸ್‌ ನಂಬೂರು ಸಾಯಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಸು ಫ್ರಮ್ ಸೋ’ ಖ್ಯಾತಿಯ ಸುಮೇಧ್ ಕೆ ಸಂಗೀತ ಹಾಗೂ ರೊನದ ಬಕ್ಕೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಾಲ್ವರು ನುರಿತ ಛಾಯಾಗ್ರಾಹಕರು ಈ ಚಿತ್ರಕ್ಕೆ ಕ್ಯಾಮೆರಾ ಕೈಚಳಕ ತೋರಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ನಾಲ್ಕು ಭಿನ್ನ ಕಥೆಗಳು ಹಾಗೂ ನುರಿತ ತಂತ್ರಜ್ಞರ ಸಂಗಮದ್ಲಿ ಮೂಡಿಬಂದಿರುವ ಈ ‘ನಾಕು ತಂತಿ’ ಚಿತ್ರವು ಪ್ರೇಕ್ಷಕರಿಗೆ ಹೇಗೆ ಹೊಸ ಅನುಭವ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Tue, 13 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us