Venkatesh Maha: ‘ಕೆಜಿಎಫ್​’ ಸಿನಿಮಾ ಬಗ್ಗೆ ಕೆಟ್ಟ ಪದಗಳಿಂದ ಟೀಕಿಸಿದ ತೆಲುಗು ನಿರ್ದೇಶಕ: ವಿಡಿಯೋ ವೈರಲ್​

Venkatesh Maha | KGF 2: ವೆಂಕಟೇಶ್​ ಮಹಾ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಆ ವಿಡಿಯೋ ವೈರಲ್​ ಆಗಿದ್ದು, ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Venkatesh Maha: ‘ಕೆಜಿಎಫ್​’ ಸಿನಿಮಾ ಬಗ್ಗೆ ಕೆಟ್ಟ ಪದಗಳಿಂದ ಟೀಕಿಸಿದ ತೆಲುಗು ನಿರ್ದೇಶಕ: ವಿಡಿಯೋ ವೈರಲ್​
ಯಶ್

Updated on: Mar 06, 2023 | 11:24 AM

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’. ಪ್ರಶಾಂತ್​ ನೀಲ್​ (Prashanth Neel) ನಿರ್ದೇಶನದ ಈ ಚಿತ್ರಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಸ್ಯಾಂಡಲ್​ವುಡ್​ ಬಗ್ಗೆ ಇಡೀ ದೇಶವೇ ಮಾತನಾಡುವಂತೆ ಆಗಿದ್ದು ಈ ಸಿನಿಮಾಗಳಿಂದ. ಕನ್ನಡ ಸಿನಿಪ್ರಿಯರಿಗೆ ಹಾಗೂ ಯಶ್​ ಅಭಿಮಾನಿಗಳ ಪಾಲಿಗೆ ಇದು ಹೆಮ್ಮೆಯ ವಿಚಾರ. ಆದರೆ ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಚಿತ್ರದ ಬಗ್ಗೆ ತೆಲುಗಿನ ನಿರ್ದೇಶಕ ವೆಂಕಟೇಶ್​ ಮಹಾ (Venkatesh Maha) ಕೆಟ್ಟದಾಗಿ ಮಾತನಾಡಿದ್ದಾರೆ. ಕೆಟ್ಟ ಪದಗಳಿಂದ ಕನ್ನಡದ ಸಿನಿಮಾವನ್ನು ಹೀಯಾಳಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೇ ಸ್ವತಃ ತೆಲುಗು ಮಂದಿ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಈ ರೀತಿ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ಸಂದರ್ಶದಲ್ಲಿ ನಿರ್ದೇಶಕ ವೆಂಕಟೇಶ್​ ಮಹಾ ಅವರು ಸಿನಿಮಾದ ಹೆಸರು ಹೇಳಿಲ್ಲ. ಆದರೆ ಅವರು ವಿವರಿಸಿದ ಕಥೆಯ ಎಳೆ ಕೇಳಿದರೆ ‘ಕೆಜಿಎಫ್​’ ಸಿನಿಮಾ ಬಗ್ಗೆಯೇ ಮಾತನಾಡಿರುವುದು ಎಂಬುದು ಸ್ಪಷ್ಟವಾಗುತ್ತದೆ. ಕಥಾನಾಯಕನ ಪಾತ್ರವನ್ನು ಅವರು ಕೆಟ್ಟ ಭಾಷೆಯಲ್ಲಿ ಹೀಯಾಳಿಸಿದ್ದಾರೆ. ಅದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇನ್ನುಳಿದ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಅವರೆಲ್ಲರ ಬಗ್ಗೆಯೂ ನೆಟ್ಟಿಗರು ಗರಂ ಆಗಿದ್ದಾರೆ.

ಇದನ್ನೂ ಓದಿ
Radhika Pandit: ಯಶ್​​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ಮಾಹಿತಿ
Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ

ಇದನ್ನೂ ಓದಿ: Yash: ರಾಕಿ ಭಾಯ್ ಯಶ್​ಗೆ ಸಲಾಂ ಹೇಳಿದ ಕ್ರಿಕೆಟಿಗ ದಿನೇಶ್ ಕಾರ್ತಿಕ್

ಸಿನಿಮಾ ಬಗ್ಗೆ ವಿಮರ್ಶೆ ಮಾಡುವ ಸ್ವತಂತ್ರ ಎಲ್ಲರಿಗೂ ಇದೆ. ಆದರೆ ಬಳಸುವ ಭಾಷೆ ಸರಿಯಾಗಿ ಇರಬೇಕು. ಯಾವುದಾದರೂ ತೆಲುಗು ಸಿನಿಮಾ ಬಗ್ಗೆ ಮಾತನಾಡುವಾಗ ವೆಂಕಟೇಶ್​ ಮಹಾ ಅವರು ಕೆಟ್ಟ ಪದಗಳನ್ನು ಬಳಸಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ‘ಕೆಜಿಎಫ್​’ ಚಿತ್ರದ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?

ವೆಂಕಟೇಶ್​ ಮಹಾ ಆಡಿದ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ‘ಕೆಜಿಎಫ್​’ ಚಿತ್ರತಂಡದವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮೂಡಿದೆ. ವೆಂಕಟೇಶ್​ ಮಹಾ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಸದ್ಯ ಪ್ರಶಾಂತ್​ ನೀಲ್​ ಅವರು ತೆಲುಗು ಚಿತ್ರರಂಗಕ್ಕೆ ಹತ್ತಿರ ಆಗಿದ್ದಾರೆ. ಅಲ್ಲಿನ ಸ್ಟಾರ್​ ನಟರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗ ಓರ್ವ ಟಾಲಿವುಡ್​ ನಿರ್ದೇಶಕನಿಂದಲೇ ಅವರ ಚಿತ್ರದ ಬಗ್ಗೆ ಇಂಥ ಮಾತುಗಳು ಕೇಳಿಬಂದಿರುವುದು ಖಂಡನೀಯ ಎಂಬ ಕಮೆಂಟ್​ಗಳು ಬರುತ್ತಿವೆ.

ಇಷ್ಟೆಲ್ಲ ಮಾತನಾಡಿರುವ ವೆಂಕಟೇಶ್​ ಮಹಾ ಅವರು ಟಾಲಿವುಡ್​ನಲ್ಲಿ ಮಾಡಿದ ಸಾಧನೆ ಏನೂ ಇಲ್ಲ. ಕೇವಲ ಎರಡು ಸಿನಿಮಾ ಮಾಡಿರುವ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.