
‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಪ್ಡೇಟ್ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಇರುತ್ತಾರೆ. ಈ ಸಿನಿಮಾ ಬಗ್ಗೆ ಯಾರೇ ಅಪ್ಡೇಟ್ ಕೊಟ್ಟರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದಾರೆ. ಈ ಚಿತ್ರದ ‘ತಬಾಹಿ..’ ಹಾಡಿಗೆ ಸಾಹಿತ್ಯ ಬರೆದಿದ್ದು ಯೋಗರಾಜ್ ಭಟ್ ಅವರೇ. ಈಗ ಸಿನಿಮಾದ ಹಾಡುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೀರ್ತಿ ಇಎನ್ಟಿ ಕ್ಲೀನಿಕ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯೋಗರಾಜ್ ಭಟ್ ಅವರು ಮಾತನಾಡಿದ್ದಾರೆ. ‘ಟಾಕ್ಸಿಕ್ ಸಿನಿಮಾಗೆ ನೀವೇ ಸಾಹಿತ್ಯ ಬರೆದಿದ್ದೀರಿ ಅಲ್ಲವೇ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಭಟ್ರು, ‘ಎರಡು ಮೂರು ಹಾಡನ್ನು ಬರೆದಿದ್ದೇನೆ. ಮೂರು ಅಂತ ಲೆಕ್ಕ. ಯಾವಾಗ ರಿಲೀಸ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಯೋಗರಾಜ್ ಭಟ್ ಹೇಳಿದರು.
‘ಫೂಟೇಜ್ ಏನಾದ್ರೂ ನೋಡಿದ್ರಾ’ ಎಂದು ಕೇಳಲಾಯಿತು. ‘ಇದು ಆತ್ಮೀಯ ಗೆಳೆಯನ ಮಹೋನ್ನತ ಚಿತ್ರ. ಅಭೂತಪೂರ್ವ ಯಶಸ್ಸು ಕಾಣುತ್ತದೆ ಎಂದಷ್ಟೇ ಹೇಳಬಹುದು’ ಎಂದರು ಅವರು. ಸಾಂಗ್ ಬರೆಯೋಕೆ ಯೋಗರಾಜ್ ಭಟ್ ಅವರು ಮುಂಬೈಗೆ ತೆರಳಿದ್ದರಂತೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆ ಹಾಡುಗಳು ಬೇಗ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾಗೆ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡುತ್ತಿದ್ದು, ವಿಭಿನ್ನ ಶೈಲಿಯ ಮೇಕಿಂಗ್ ಭರವಸೆ ಮೂಡಿಸಿದೆ. ಭಾರತೀಯ ಚಿತ್ರರಂಗದ ಹೆಸರಾಂತ ನಟ-ನಟಿಯರು ಈ ಆ್ಯಕ್ಷನ್ ಡ್ರಾಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ರಿಶೂಟ್, ಮುಂದಿನ ವರ್ಷ ರಿಲೀಸ್ ಎಂದು ಹೇಳಿ ಉಲ್ಟಾ ಹೊಡೆದ ಬಾಕ್ಸ್ ಆಫೀಸ್ ಪಂಡಿತ
ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಸಿನಿಮಾದ ರಿಲೀಸ್ ದಿನಾಂಕ ನಿರಂತರವಾಗಿ ಮುಂದಕ್ಕೆ ಹೋಗುತ್ತಿದೆ. ಈ ಚಿತ್ರದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಚಿತ್ರದ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಟ್ಟಿದ್ದಾರೆ. ಸಿನಿಮಾ ತಡವಾದರೂ ಒಂದು ಅದ್ಭುತವಾದ ದೃಶ್ಯಕಾವ್ಯ ಪರದೆಯ ಮೇಲೆ ಬರಲಿದೆ ಎಂಬ ನಂಬಿಕೆಯಿಂದ, ನಿಜವಾದ ಅಭಿಮಾನಿಗಳು ಯಾವುದೇ ಆತುರವಿಲ್ಲದೆ ಅತ್ಯಂತ ತಾಳ್ಮೆಯಿಂದ ಕಾಯುತ್ತಾ ಚಿತ್ರತಂಡಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.