ಉಪೇಂದ್ರ ಸ್ಫೂರ್ತಿಯಿಂದ ಮೂಡಿಬಂತು ‘ಪ್ರಜಾರಾಜ್ಯ’ ಸಿನಿಮಾ; ಸಮಾಜದ ಒಳಿತಿಗಾಗಿ ಒಂದು ಚಿತ್ರ

| Updated By: ಮದನ್​ ಕುಮಾರ್​

Updated on: Nov 17, 2022 | 8:31 AM

Praja Rajya movie: ‘ಸಾಮಾಜಿಕ ಕಳಕಳಿ ಇಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ‘ಪ್ರಜಾರಾಜ್ಯ’ ತಂಡದವರ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು. ಇಡೀ ತಂಡಕ್ಕೆ ಶುಭವಾಗಲಿ’ ಎಂದು ನಾಗಾಭರಣ ಹಾರೈಸಿದ್ದಾರೆ.

ಉಪೇಂದ್ರ ಸ್ಫೂರ್ತಿಯಿಂದ ಮೂಡಿಬಂತು ‘ಪ್ರಜಾರಾಜ್ಯ’ ಸಿನಿಮಾ; ಸಮಾಜದ ಒಳಿತಿಗಾಗಿ ಒಂದು ಚಿತ್ರ
‘ಪ್ರಜಾರಾಜ್ಯ’ ಸಿನಿಮಾ ತಂಡ
Follow us on

ಮಾಮೂಲಿ ಲವ್​ ಸ್ಟೋರಿ, ದ್ವೇಷದ ಕಹಾನಿ ಇರುವ ಸಿನಿಮಾಗಳು ಸಾಕಷ್ಟು ಬರುತ್ತವೆ. ಆದರೆ ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಹೆಣೆದ ಕಥೆಗಳುಳ್ಳ ಸಿನಿಮಾಗಳ ಸಂಖ್ಯೆ ವಿರಳ. ಹೊಸ ತಂತ್ರಜ್ಞರೇ ಸೇರಿಕೊಂಡು ಮಾಡಿರುವ ‘ಪ್ರಜಾರಾಜ್ಯ’ (Prajarajya Kannada Movie) ಸಿನಿಮಾದಲ್ಲಿ ಆ ರೀತಿಯ ಕಥೆ ಇದೆ. ‘ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ (Upendra) ಅವರ ‘ಉಪೇಂದ್ರ’ ಚಿತ್ರ ನನಗೆ ಸ್ಫೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಈ ಚಿತ್ರಕ್ಕಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ‘ಪ್ರಜಾರಾಜ್ಯ’ ನಿರ್ಮಾಪಕ ಡಾ. ವರದರಾಜು ಡಿ.ಎನ್.

ಇತ್ತೀಚೆಗೆ ಈ ಚಿತ್ರತಂಡ ಮೊದಲ ಸುದ್ದಿಗೋಷ್ಠಿ ನಡೆಸಿತು. ವೀರೇನ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ವಿಜಯ್ ಭಾರ್ಗವ್ ನಿರ್ದೇಶನ ಮಾಡಿದ್ದಾರೆ. ಶೂಟಿಂಗ್​ ಮುಕ್ತಾಯ ಆಗಿದ್ದು ರಿಲೀಸ್​ ಆಗಲು ರೆಡಿ ಇದೆ. ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯುತ್​ ಕುಮಾರ್ ತಬಲ ನಾಣಿ, ಸುಧಾ ಬೆಳವಾಡಿ, ಸಂಪತ್ ಮೈತ್ರೇಯ, ಕೃಷ್ಣೋಜಿ ರಾವ್ ಮುಂತಾದ ಕಲಾವಿದರು ‘ಪ್ರಜಾರಾಜ್ಯ’ ಚಿತ್ರದಲ್ಲಿ ನಟಿಸಿದ್ದಾರೆ.

ವೃತ್ತಿಯಲ್ಲಿ ನರರೋಗ ತಜ್ಞನಾಗಿರುವ ಡಾ. ವರದರಾಜು ಡಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಒಂದು ಪಾತ್ರವನ್ನೂ ನಿಭಾಯಿಸಿದ್ದಾರೆ. ‘ಇದು ನಾಯಕ ಪ್ರಧಾನ ಚಿತ್ರವಲ್ಲ. ಚಿತ್ರ ನೋಡಿದ ಪ್ರೇಕ್ಷಕನಲ್ಲಿ ಬದಲಾವಣೆ ಬೇಕು ಎನಿಸಿದರೆ ಆತನೇ ನಮ್ಮ ಚಿತ್ರದ ನಾಯಕ’ ಎಂದಿದ್ದಾರೆ ವರದರಾಜ್.

ಇದನ್ನೂ ಓದಿ
ಕ್ಯಾನ್ಸರ್​​ ಗೆದ್ದ ಖ್ಯಾತ ನಟಿಗೆ ಒಂದೇ ದಿನ ಹಲವು ಭಾರಿ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ
‘ತ್ರಿಬಲ್​ ರೈಡಿಂಗ್’ ಸಿನಿಮಾ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ
ರಜನಿಕಾಂತ್ ಭೇಟಿ ವೇಳೆ ಪಂಚೆ ಬದಲು ಪ್ಯಾಂಟ್​ ಧರಿಸಿದ್ದಕ್ಕೆ ಕಾರಣ ನೀಡಿದ ನಟ ರಿಷಬ್ ಶೆಟ್ಟಿ
ಹೇಗಿದ್ದಾನೆ ನೋಡಿ ನಿಖಿಲ್ ಕುಮಾರ್ ಮಗ ಅವ್ಯಾನ್; ಫೋಟೋ ಹಂಚಿಕೊಂಡ ಹೀರೋ

‘ಪ್ರತಿ ವರ್ಷ 400ಕ್ಕೂ ಅಧಿಕ ಚಿತ್ರಗಳು ಬಿಡುಗಡೆ ಆಗುತ್ತಿವೆ. ನೋಡುಗರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ಡಾಕ್ಟರ್ ವರದರಾಜು ಅವರ ಧೈರ್ಯ ನಿಜಕ್ಕೂ ಮೆಚ್ಚುವಂಥದ್ದು. ಅವರಿಗೆ ಹಾಗೂ ತಂಡಕ್ಕೆ ಶುಭವಾಗಲಿ’ ಎಂದಿದ್ದಾರೆ ನಾಗಾಭರಣ.

ಈ ಚಿತ್ರದಲ್ಲಿ ನಟ ತಬಲ ನಾಣಿ ಅವರು ಆಟೋ ಡ್ರೈವರ್ ಪಾತ್ರ ಮಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನಿರ್ದೇಶನ, ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಶ್ರೀಕಾಂತ್​ ಸಂಕಲನ ಮಾಡಿದ್ದಾರೆ. ಯೋಗರಾಜ್ ಭಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Thu, 17 November 22