ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಈಗಾಗಲೇ ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರ ಬಂಧನ ನಡೆದಿದೆ. ಪ್ರಕರಣದ ಜೊತೆ, ದರ್ಶನ್ ಜೊತೆ ಲಿಂಕ್ ಹೊಂದಿರೋ ಎಲ್ಲರನ್ನೂ ವಿಚಾರಣೆ ಮಾಡಲಾಗುತ್ತಿದೆ. ಈ ವೇಳೆ ಯಾವೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ದರ್ಶನ್ ಕೊಲೆ ಕೇಸ್ನಲ್ಲಿ ಇಂದು (ಜುಲೈ 6) ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಇದರಿಂದ ದರ್ಶನ್ಗೆ ಸಂಕಷ್ಟ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಕಾರು ಚಾಲಕ ಕಾರ್ತಿಕ್ ಪುರೋಹಿತ್, ನಿರ್ದೇಶಕ ಮಿಲನ ಪ್ರಕಾಶ್ ಅವರನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಬರುವಂತೆ ಹೇಳಲಾಗಿದೆ. ಜುಲೈ 5ರಂದು ಒಂದುವರೇ ಗಂಟೆ ಮಿಲನ ಪ್ರಕಾಶ್ ಅವರ ವಿಚಾರಣೆ ಮಾಡಲಾಗಿತ್ತು. ದರ್ಶನ್ ಜೊತೆಗಿನ ಹಣಕಾಸಿನ ವ್ಯವಹಾರ ಸಂಬಂಧ ವಿಚಾರಣೆ ನಡೆಸಲಾಗಿತ್ತು. ಇಂದು ದಾಖಲೆಗಳ ಸಮೇತ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಕಾರು ಚಾಲಕ ಕಾರ್ತಿಕ್ ಪುರೋಹಿತ್ಗೆ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ. ಕಾರ್ತಿಕ್ ಪುರೋಹಿತ್ ಅವರು ಆರೋಪಿ ಪ್ರದೋಷ್ಗೆ ಆಪ್ತ ಎನಿಸಿಕೊಂಡಿದ್ದಾರೆ. ಜೊತೆಗೆ ಕೊಲೆ ಪ್ರಕರಣದ ವೇಳೆ ಆರೋಪಿಗಳ ಜೊತೆಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಇಬ್ಬರನ್ನು ಎಸಿಪಿ ಚಂದನ್ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ‘ಅಕ್ಟೋಬರ್ ನಂತರವೇ ದರ್ಶನ್ಗೆ ಏಳ್ಗೆ, ಅಲ್ಲಿಯವರೆಗೆ ಜೈಲೇ ಗತಿ’; ವಿದ್ಯಾ ಶಂಕರಾನಂದ ಸರಸ್ವತಿ
ದರ್ಶನ್ ಆಪ್ತರು ವಿಚಾರಣೆ ವೇಳೆ ಯಾವ ರೀತಿಯ ಮಾಹಿತಿ ಹಂಚಿಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯ ಆಗುತ್ತದೆ. ಈ ಮಾಹಿತಿಯನ್ನು ಆಧಿರಿಸಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಾರೆ. ಕೆಲವು ಮಾಹಿತಿಗಳು ದರ್ಶನ್ಗೆ ಮುಳುವಾದರೂ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.