ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಚಿತ್ರವನ್ನು ಒಬ್ಬರು ಒಂದೊಂದು ರೀತಿಯಲ್ಲಿ ವಿಮರ್ಶಿಸುತ್ತಿದ್ದಾರೆ. ದೃಶ್ಯಗಳನ್ನು ಡಿಕೋಡ್ ಮಾಡುವಂತೆ ಉಪೇಂದ್ರ ಅವರು ಕೋರಿದ್ದರು. ಈ ಕೋರಿಕೆಯನ್ನು ಸ್ವೀಕರಿಸಿದ ಅನೇಕರು ಮತ್ತೆ ಮತ್ತೆ ತೆರಳಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ ಮತ್ತು ತಮ್ಮ ವಿಮರ್ಶೆ ತಿಳಿಸುತ್ತಿದದ್ದಾರೆ. ಕೆಲವರು ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಟ್ಟಿದ್ದೂ ಇದೆ. ಇವುಗಳ ಮಧ್ಯೆ ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಆಗಿದೆ.
ಉಪೇಂದ್ರ ಸಿನಿಮಾಗಳಲ್ಲಿ ಭಿನ್ನತೆ ಇರುತ್ತದೆ. ಅವರ ನಿರ್ದೇಶನ ಡಿಫರೆಂಟ್ ಆಗಿರುತ್ತದೆ. ಅದೇ ರೀತಿ ಸ್ಕ್ರೀನ್ಪ್ಲೇ ಕೂಡ ಟ್ವಿಸ್ಟ್ ಆ್ಯಂಡ್ ಟರ್ನ್ಗಳಿಂದ ಕೂಡಿರುತ್ತದೆ. ಈ ಕಾರಣಕ್ಕೆ ಸುದೀಪ್ ಸಿನಿಮಾಗಳು ಇಷ್ಟ ಆಗೋದು. ಈಗ ‘ಯುಐ’ ಚಿತ್ರವನ್ನು ಜನರು ಒಪ್ಪಿದ್ದಾರೆ. ಇದು ಬಾಕ್ಸ್ ಆಫೀಸ್ ಗಳಿಕೆಗೆ ಸಹಕಾರಿ ಆಗಿದೆ.
‘ಯುಐ’ ಚಿತ್ರ ಮೊದಲ ದಿನ 6.95 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಸ್ವಲ್ಪ ಮಟ್ಟಿಗಿನ ಕಲೆಕ್ಷನ್ ಆಗಿತ್ತು. ಎರಡನೇ ದಿನ 5.6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಈ ಚಿತ್ರ. ಈಗ ಮೂರನೇ ದಿನ ಲೆಕ್ಕಾಚಾರ ಸಿಕ್ಕಿದೆ. ಭಾನುವಾರ (ಡಿಸೆಂಬರ್ 22) ಈ ಸಿನಿಮಾ 5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 18.30 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ಯುಐ’ ಸಿನಿಮಾದ ಮೊದಲ ದಿನ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಕನ್ನಡದ ಚಿತ್ರ ಒಂದು ಮೂರು ದಿನಕ್ಕೆ ಸುಮಾರು 20 ಕೋಟಿ ರೂಪಾಯಿ ಬಾಚಿಕೊಳ್ಳುತ್ತದೆ ಎಂದರೆ ಅದು ನಿಜಕ್ಕೂ ಗ್ರೇಟ್. ಈ ವಾರ ‘ಮ್ಯಾಕ್ಸ್’ ಚಿತ್ರ ಬಿಡುಗಡೆ ಕಾಣುತ್ತಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ‘ಮ್ಯಾಕ್ಸ್’ ಜೊತೆ ಥಿಯೇಟರ್ಗಳನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ‘ಯುಐ’ ಚಿತ್ರಕ್ಕೆ ಬರಲಿದೆ. ‘ಬುಕ್ ಮೈ ಶೋ’ನಲ್ಲೂ ‘ಯುಐ’ ಚಿತ್ರಕ್ಕೆ ಭರ್ಜರಿ ರೇಟಿಂಗ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.